ಸರ್ಕಾರಿ ವೈದ್ಯನ ಖಾಸಗಿ ದಂಧೆಗೆ ಯುವತಿ ಬಲಿ

ರಾಜಕೀಯ ಪ್ರಭಾವಶಾಲಿ ವೈದ್ಯನ ಹಣದ ದಾಹಕ್ಕೆ ಬಡವರು ಬಲಿ

ಬೆಂಗಳೂರು : ಸರ್ಕಾರಿ ಆಸ್ಪತ್ರೆಯೊಂದರ ವೈದ್ಯನೊಬ್ಬ ಖಾಸಗಿ ಆಸ್ಪತ್ರೆ ತೆರದು ಬಡ ಜನರ ಬಲಿ ತೆಗೆದುಕೊಳ್ಳುತ್ತಿರುವ ಘಟನೆಗಳು ಆಗಾಗ ನಡೆಯುತ್ತಿದ್ದರು ಕೇಳೋರೆ ಇಲ್ಲದಂತಾಗಿದ್ದು ಇಂದೂ ಸಹ ಯುವತಿಯೊಬ್ಬಳು ಬಲಿಯಾಗಿರುವ ಘಟನೆ ನಡೆದಿದೆ.

ಹೌದು, ಮಹಾನಗರದ ಯಲಹಂಕ‌ ಸರ್ಕಾರಿ ಆಸ್ಪತ್ರೆಯ ವೈದ್ಯ ರಾಮಚಂದ್ರ ಯುವತಿ ಬಲಿಗೆ ಕಾರಣವಾಗಿರುವ ವೈದ್ಯ. ಈತ ಸರ್ಕಾರಿ ಆಸ್ಪತ್ರೆಯಿಂದ ಕೂಗಳತೆ ದೂರದಲ್ಲಿ ಖಾಸಗಿ ಆಸ್ಪತ್ರೆ ಮಾಡಿಕೊಂಡು‌ ಕಳೆದ ಹತ್ತು ವರ್ಷದಿಂದ ಬಡ ರೋಗಿಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ.

ಅನಾರೋಗ್ಯ ಹಿನ್ನಲೆ ಆಸ್ಪತ್ರೆಗೆ ದಾಖಲಾದ ಯುವತಿಯೊಬ್ಬಳು ಇಂದು ವೈದ್ಯ ರಾಮಚಂದ್ರನ ಯಡವಟ್ಟಿನಿಂದ ಬಲಿಯಾಗಿದ್ದಾಳೆ. ಅಷ್ಟೇನೂ ಗಂಭೀರ ಇಲ್ಲದೆ ಚೆನ್ನಾಗಿಯೇ ಮಾತನಾಡುತ್ತಿದ್ದ ಯುವತಿಗೆ ಅದ್ಯಾವ ಚಿಕಿತ್ಸೆ ನೀಡಿದ್ದಾನೋ ಗೊತ್ತಿಲ್ಲ. ಬಾಳಿ ಬದುಕಿಬೇಕಾದ ಯುವತಿ ಈಗ ಇಲ್ಲದಂತಾಗಿದ್ದಾಳೆ.

ಸಣ್ಣ ಪುಟ್ಟ ಅನಾರೋಗ್ಯ ಹೊತ್ತು ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಇಲ್ಲದ ಕಥೆ ಕಟ್ಟಿ ತನ್ನ ಖಾಸಗಿ ಅಪೂರ್ವ ಆಸ್ಪತ್ರೆಗೆ ಕರೆಸಿಕೊಂಡು ನೊಂದವರಿಂದ, ಬಡ ಜನರಿಂದ ಸಾವಿರಾರು ಹಣ ವಸೂಲಿ‌ ಮಾಡುವ ಕಾಯಕ ನಡೆಸುತ್ತಿದ್ದಾರೆ.

ಈ ಸರ್ಕಾರಿ ವೈದ್ಯನಿಗೆ ರಾಜಕೀಯ ಪ್ರಭಾವ ಸಾಕಷ್ಟಿದ್ದು ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿರುವ ಕೆ.ಬಿ.ಚಂದ್ರಶೇಖರ್ ಬೇರಾರು ಅಲ್ಲ. ಇವರು ಈತನ ತಂದೆ. ರಾಜಕೀಯ ಪ್ರಭಾವ ಬಳಸಿಕೊಂಡು ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆ ವೈದ್ಯನಾಗಿ ಕೆಲಸ ಮಾಡುತ್ತಿದ್ದಾನೆ.

ಈ ವೈದ್ಯನ ಹಣದ ದಾಹಕ್ಕೆ ಸಾಕಷ್ಟು ಬಡವರು ರೋಸಿ ಹೋಗಿದ್ದಾರೆ. ಈತನಿಂದ ಅನ್ಯಾಯಕ್ಕೊಳಗಾದವರು ಏನಾದರು ಪ್ರಶ್ನಿಸಿದರೆ, ಅಥವಾ ಪ್ರತಿಭಟಿಸಿದರೆ ರಾಜಕೀಯ ಪ್ರಭಾವ ಬಳಸಿಕೊಂಡು ಉಲ್ಟಾ ಜನರ ಮೇಲೆಯೇ ಪ್ರಕರಣ ದಾಖಲಿಸುವ ಕಾಯಕವನ್ನೂ ಸಹ ರೂಢಿಸಿಕೊಂಡಿದ್ದಾನೆ.

ಈ ವೈದ್ಯನ ದಂಧೆಯನ್ನು ಖಂಡಿಸಿ ವಿವಿಧ ಸಂಘಟನೆಗಳು ಬೀದಿಗಳಿದು ಪ್ರತಿಭಟನೆ ನಡೆಸಿದ್ದವು. ಆದರೆ ಅವರ ವಿರುದ್ಧವೇ ಪ್ರಕರಣ ದಾಖಲಿಸಿ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನೇ ಕೋರ್ಟ್‌ಗೆ ಅಲೆಯುವಂತೆ ಮಾಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ‌.

ಈ ಹಿಂದೆ ಒಂದು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಈ ಸರ್ಕಾರಿ ವೈದ್ಯನ ಖಾಸಗಿ ಆಸ್ಪತ್ರೆಗೆ ಮಹಿಳಾ ಆಯೋಗ ತೆರಳಿ ಅಲ್ಲಿನ ಕರ್ಮಕಾಂಡದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿ ಸೂಕ್ತ ಕ್ರಮ ಕೈಗೊಳ್ಳುವಂತೆ ವರದಿ ತಯಾರಿಸಿ ನೀಡಿತ್ತು. ಆದರೆ ಇಲಾಖೆಯಾಗಲಿ ಸರ್ಕಾರವಾಗಲಿ ಯಾವುದೇ ಕ್ರಮ ಕೈಗೊಂಡಿಲ್ಲ.

ಇದೀಗ ಆರೋಗ್ಯ ಸಚಿವ ಶ್ರೀ‌ರಾಮುಲು ಅವರು ಸರ್ಕಾರಿ ವೈದ್ಯರು ಖಾಸಗಿ ಆಸ್ಪತ್ರೆಗಳನ್ನು ನಡೆಸಿದರೆ ಅಥವಾ ಕೆಲಸ ಮಾಡಿದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಭಾಷಣಗಳನ್ನು ಮಾಡುತ್ತಿದ್ದಾರೆ. ಅವರು ಕ್ರಮ ಕೈಗೊಳ್ಳಲು ಈ ಯುವತಿ ಬಲಿಯಾಗಿರುವ ಘಟನೆಗಿಂತ ಮತ್ಯಾವ ಕಾರಣವೂ ಬೇಕಿಲ್ಲ ಎನ್ನಬಹುದಾಗಿದೆ.

ಆರೋಗ್ಯ ಸಚಿವರ ಹೇಳಿಕೆಗಳು ಕೇವಲ ಪ್ರಚಾರಕ್ಕಾಗಿಯೋ ಅಥವಾ ಕಾರ್ಯಗತ ಮಾಡುವುದಕ್ಕಾಗಿಯೋ ಎಂಬುದನ್ನು ಖುದ್ದು ಸಚಿವ ಶ್ರೀರಾಮುಲು ಅವರು ಈ ಪ್ರಕರಣದಲ್ಲಿ ಸಾಬೀತು ಮಾಡಬೇಕಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!