ಕಾಗವಾಡ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಾಗೆ ನಾಮಪತ್ರ ಸಲ್ಲಿಕೆ

ಕಾಗವಾಡ : ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಅಥಣಿ ತಹಶೀಲ್ದಾರ್ ಕಚೇರಿಗೆ ತೆರಳಿ ಚುನಾವಣಾಧಿಕಾರಿ ಗೋಪಾಲಕೃಷ್ಣ ಸಣತಂಗಿ ಮತ್ತು ಕಾಗವಾಡ ತಹಶೀಲ್ದಾರ ಅಶೋಕ ಹಿರಳ್ಳಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ರಾಜು ಕಾಗೆ ನಾಮಪತ್ರ ಸಲ್ಲಿಸಿದ್ದು ಈ ವೇಳೆ ಮಾಜಿ ಸಚಿವ ಎಮ್.ಬಿ.ಪಾಟೀಲ್ ಹಾಗೂ ಸಹೋದರ ಶಿವಗೌಡ ಕಾಗೆ ಸಾಥ್ ನೀಡಿದರು.

ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಮ್.ಬಿ.ಪಾಟೀಲ್ ಈ ಉಪಚುನಾವಣೆ ಜನರಿಗೆ ದ್ರೋಹ ಮಾಡಿದ ಅನರ್ಹರಿಗೆ ಬುದ್ದಿ ಕಲಿಸುವ ಚುನಾವಣೆಯಾಗಿದೆ. ಹಾಗಾಗಿ ಎಲ್ಲ ಕಾಂಗ್ರೆಸ್ ಬಂಡಯಗಾರರು ಸಹಕರಿಬೇಕೆಂದರು.

ಕಾಗವಾಡ ಅಭ್ಯರ್ಥಿ ರಾಜುಕಾಗೆ ಎಪ್ಪತ್ತೈದು ಸಾವಿರ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಬೇಕಾದ್ರೆ ಚುನಾವಣಾ ಫಲಿತಾಂಶ ದಿನದಂದು ನನ್ನನ್ನು ಕೇಳಿ ಎಂದರು.

ನಂತರ ಮಾತನಾಡಿದ ರಾಜು ಕಾಗೆ ಇಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ನಾಳೆಯಿಂದ ಮತದಾರರಲ್ಲಿ ಮತಭಿಕ್ಷೆಗಾಗಿ ಹೋಗುತ್ತೆನೆ. ನನ್ನ ವಿರೋಧಿ ಅಭ್ಯರ್ಥಿ ಸಕ್ಕರೆ ಕಾರ್ಖಾನೆ ಹೊಂದಿದವರು. ರೈತರಿಗೆ ಅನ್ಯಾಯ ಮಾಡಿದವರು. ಕಾರ್ಖಾನೆಯಲ್ಲಿ ತೂಕದಲ್ಲಿ ಮೋಸ ಮಾಡಿದ್ದು ರೈತರು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಮಹಾರಾಷ್ಟ್ರದ ಗೂಂಡಾಗಳನ್ನ ಕರೆಯಿಸಿ ಹಲ್ಲೆ ಮಾಡಿಸಿದ್ದಾರೆ. ಇವೆಲ್ಲವೂ ಜನ ಮರೆಯೊದಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್‌ಗೆ ವಿರುದ್ಧ ವಾಗ್ದಾಳಿ‌ ನಡೆಸಿದರು.

ಪ್ರವಾಹ ಬಂದ ಸಂದರ್ಭದಲ್ಲಿ ಜನ ಸಾಯುತ್ತಿದ್ದರು. ಆದರೆ ಇವರು ಮುಂಬಯಿಯಲ್ಲಿ ಕುಳಿತಿದ್ದರು. ನಾನು ಶಾಸಕನಲ್ಲದಿದ್ದರೂ ಕಾಗವಾಡ ಮತಕ್ಷೇತ್ರದ ಎಲ್ಲ ಹಳ್ಳಿಗಳಿಗೆ ಹೋಗಿ ಜನರ ರಕ್ಷಣಾ ಕಾರ್ಯ ಮಾಡಿದ್ದೇನೆ ಎಂದೆರು.

ನಾನು ನಾಲ್ಕು ಸಲ ಶಾಸಕನಾಗಿದ್ದೇನೆ. ಎರಡು ಸಲ ಸೋತಿದ್ದೇನೆ. ಈ ಬಾರಿ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Share Post

Leave a Reply

Your email address will not be published. Required fields are marked *

error: Content is protected !!