ಪಟ್ಟಣ ಪಂಚಾಯ್ತಿ ಉಪಚುನಾವಣೆ : ಶಾಸಕ ದೇವಾನಂದ್ ಚವ್ಹಾಣ್ ಪ್ರಚಾರ

ಚಡಚಣ : ಪಟ್ಟಣ ಪಂಚಾಯ್ತಿಯ 5ನೇ ವಾರ್ಡ್‌ನ ಸದಸ್ಯರಾಗಿದ್ದ ನಾಸಿರ್ ಮುಸ್ತಿ ಅವರ ಅಕಾಲಿಕ ಮರಣದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನವೆಂಬರ 12 ರಂದು ನಡೆಯಲಿದ್ದು ಈ ಹಿನ್ನಲೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮೀರಾಸಾಬ ಅತ್ತಾರ್ ಅವರ ಪರ ಶಾಸಕ ದೇವಾನಂದ ಚವ್ಹಾಣ್ ಮತಪ್ರಚಾರ ನಡೆಸಿದರು.

ಈ ಕುರಿತು ಜೆಡಿಎಸ್ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿ ಉಪಚುನಾವಣೆ ನಮ್ಮ ಪಕ್ಷದ ಅಭ್ಯರ್ಥಿ ಮೀರಾಸಾಬ ಅತ್ತಾರ್ ಜನ ಸ್ನೇಹಿಯಾಗಿದ್ದಾರೆ ಎಂದರು. ಅವರು ಜನರೊಂದಿಗೆ ಬೆರತು ಕೆಲಸ ಮಾಡುವ ವ್ಯಕ್ತಿತ್ವದವರಾಗಿದ್ದು ಅವರನ್ನು ಬಹುಮತದಿಂದ ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಪ.ಪಂ. ಮಾಜಿ ಅಧ್ಯಕ್ಷ ಬಾಬುಗೌಡ ಪಾಟೀಲ್, ಜೆಡಿಎಸ್ ಚಡಚಣ ತಾಲ್ಲೂಕು ಅಧ್ಯಕ್ಷ ಸದಾಶಿವ ಜಿತ್ತಿ, ರಾಜ್ಯ ಯುವ ಘಟಕ ಪ್ರಧಾನ ಕಾರ್ಯದರ್ಶಿ ಹಣಮಂತ ಹೊನ್ನಳ್ಳಿ, ವಲಯ ಅಧ್ಯಕ್ಷ ಭೀಮಾಶಂಕರ ವಾಳಿಖಿಂಡಿ ಹಾಗೂ ಜೆಡಿಎಸ್ ಕಾರ್ಯಕರ್ತರಾದ ಯೂನುಸ್ ಮಕಾನದಾರ್, ಅನಿಲ್ ಕಲ್ಯಾಣಶೆಟ್ಟಿ, ವಿಠ್ಠಲ್ ವಡಗಾಂವ ಮತ್ತಿತರರು ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!