ರೈಲಿನಂತೆ ಕಾಣುವ ಶಾಲೆ ನೋಡಿದ್ದೀರಿ… ಈಗ ಬಸ್‌ನಂತೆ ಕಾಣುವ ಶಾಲೆ ನೋಡಿ..!

ರಾಯಚೂರು : ಹೇ ಬನ್ರೋ ದೇವಾನಂಪ್ರೀಯಂ ಎಕ್ಸ್‌ಪ್ರೆಸ್‌ ಬಂತು, ಬೇಗ ಬೇಗ ಹತ್ಕೊಳ್ರೋ ಸ್ಕೂಲ್‌ಗೆ ಟೈಮ್ ಆಯ್ತು ಹಾ… ರೈಟ್ ರೈಟ್… ಅರೇ ಇದೇನಪ್ಪಾ ಇದ್ಯಾವ ಎಕ್ಸ್‌ಪ್ರೆಸ್ ಅನ್ಕೊಂಡ್ರಾ… ಗಾಬರಿಯಾಗ್ಬೇಡಿ… ಈ ವರದಿ ಓದಿ.

ಚುಕ್ ಬುಕ್ ರೈಲು ಇನ್ಮುಂದೆ ಶಾಲೆ ಬಿಡೋದಿಲ್ಲ ಮಕ್ಕಳು. ಹೌದು ಚುಕ್ ಬುಕ್ ರೈಲಿನ ಜೊತೆ ಥೇಟ್ ಸರಕಾರಿ ಬಸ್ಸಿನ ಮಾದರಿಯಲ್ಲಿ ಶಾಲೆಗೆ ಬಣ್ಣ ಬಳಿಯಲಾಗಿದೆ. ಇಲ್ಲಿ ಬಸ್ಸು ಬಿಡೋದಿಲ್ಲ, ಆದ್ರೆ ಮಕ್ಕಳು ಬಿಡ್ತಾರೆ. ಬಸ್ಸ್ ಗೆ ಕೆಳಗಡೆ ಚಕ್ರಗಳಿಲ್ಲ, ಎಂಜೀನ್ ಇಲ್ಲ, ಡೀಸೆಲ್ ಹಾಕೋದೇ ಬೇಕಾಗಿಲ್ಲ ಆಶ್ಚರ್ಯ ಪಡಬೇಡಿ ಇದು ಶಾಲಾ ಕಟ್ಟಡದ ಬಸ್. ಅಂದ್ರೆ ಶಾಲಾ ಕಟ್ಟಡಕ್ಕೆ ಇಲಾಖೆ ವತಿಯಿಂದ ಸರ್ಕಾರಿ ಬಸ್‌ನಂತೆ ಬಣ್ಣ ಬಳಿದು ಮಕ್ಕಳನ್ನು ಆಕರ್ಷಿಸಲಾಗುತ್ತಿದೆ.

ರಾಯಚೂರು ಜಿಲ್ಲೆಯ ಲಿಂಗಸೂಗುರ ತಾಲ್ಲೂಕಿನ ಕೈರವಾಡಗಿ ಹಾಗೂ ಮಸ್ಕಿ ತಾಲ್ಲೂಕಿನ
ಕೆ.ಪಿ.ಎಸ್ ಶಾಲೆಗಳಲ್ಲಿ ಕಲ್ಯಾಣ ಕರ್ನಾಟಕದ ಅನುದಾನದಲ್ಲಿ ನಲಿ ಕಲಿ ತರಗತಿಗಳನ್ನು ಹಾಗೂ ಉಳಿದ ತರಗತಿಗಳನ್ನು ವಿಶೇಷ ರೀತಿಯಲ್ಲಿ ಬಣ್ಣ ಬಳಿಯಲಾಗಿರುತ್ತದೆ‌‌‌. ಸರಕಾರಿ ಶಾಲೆಯತ್ತ ಮಕ್ಕಳನ್ನು ಸೆಳೆಯಲು. ರೈಲು ಮತ್ತು ಬಸ್ಸುಗಳ ಮಾದರಿಯಲ್ಲಿ ಬಣ್ಣ ಬಳಿಯಲಾಗಿದೆ.

ನೋಡೋಕೆ ಯಥಾವತ್ ಬಸ್ಸಿನಂತಿರುವ ಈ ಶಾಲೆಗೆ ಮಕ್ಕಳು ಅರ್ಧ ಗಂಟೆ ಮುಂಚಿತವಾಗಿ ಬಂದಿರುತ್ತಾರೆ‌‌‌. ಶಾಲೆಗೆ ಬರಲು ಹಿಂದೇಟು ಹಾಕುವ ಮಕ್ಕಳಿಗೆ ಈ ಹೊಸ ಮಾದರಿಯ ಶಾಲೆಯನ್ನು ಕಂಡು ಈಗ ಬಸ್ಸಿನಲ್ಲಿ, ರೈಲಿನಲ್ಲಿ ಸಂಚರಿಸುತ್ತಾ ಪಾಠ ಕಲಿಯುತ್ತಿರುವ ಕಲ್ಪನೆ ಮೂಡುತ್ತಿದೆ.

ರೈಲು ಕಾಣದ ಈ ಭಾಗದ ಮಕ್ಕಳ ಕುತೂಹಲಕ್ಕೆ ಶಿಕ್ಷಣ ಇಲಾಖೆ ಪುಲ್ ಸ್ಟಾಪ್ ಕೊಟ್ಟಿದೆ. ಇಲಾಖೆ ಇತಂಹ ಹೊಸ ಪ್ರಯೋಗಕ್ಕೆ ಮುಂದಾಗಿದ್ದು ಸ್ವತಃ ರೈಲು ಬಸ್ಸು ಬಂದು ನಮ್ಮ ಶಾಲೆಯಲ್ಲಿ ನಿಂತಿದೆ ಎಂಬ ಕಲ್ಪನೆ ಮಕ್ಕಳಲ್ಲಿ ಬಂದಿದೆ.

ಇನ್ನೂ ಶಾಲೆಗೆ ಈ ರೀತಿಯ ಹೂಸ ಪ್ರಯೋಗದಿಂದ ಮಕ್ಕಳ ಹಾಜರಿ ಸಂಖ್ಯಾ ಬಲ ಹೆಚ್ಚಾಗಿದೆ. ಅಲ್ಲದೇ ಪೋಷಕರಿಂದ ಗುಣಮಟ್ಟದ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಮಾದರಿ ಶಾಲೆ ಕಂಡೊಡನೆ ಸೆಲ್ಫಿ ಕ್ಲಿಕಿಸುವುದು ಸಾಮಾನ್ಯವಾಗಿದೆ.

ಕ್ಷೇತ್ರ ಶಿಕ್ಷಣ ಅಧಿಕಾರಿಗಳಾದ ಅಶೋಕ್ ಕುಮಾರ್ ಸಿಂದಿಗಿ ಉಳಿದ ಶಾಲೆಗಳಿಗೂ ನಲಿ ಕಲಿ ತರಗತಿಗಳನ್ನು ವಿಶೇಷ ರೀತಿಯಲ್ಲಿ ಬಣ್ಣ ಬಳಿದು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಒಟ್ಟಾರೆ ತಾಲ್ಲೂಕಿನ ಶಿಕ್ಷಣ ಇಲಾಖೆ ಮಕ್ಕಳನ್ನು ಸೆಳೆಯುವ ನಿಟ್ಟಿನಲ್ಲಿ ವಿಧ ವಿಧದ ವಿನೂತನ ಕಾರ್ಯಗಳನ್ನು ಮಾಡುವ ಮೂಲಕ ಭೇಶ್ ಎನಿಸಿಕೊಂಡಿದೆ.

ಶಶಿಕುಮಾರ್ ಲಕ್ಷ್ಮೀ ದಿ ನ್ಯೂಸ್24 ಕನ್ನಡ

Share Post

Leave a Reply

Your email address will not be published. Required fields are marked *

error: Content is protected !!