ಮಾಲು ಸಮೇತ ಇಬ್ಬರು ಕುಖ್ಯಾತ ಕಳ್ಳರ ಬಂಧನ

ಕೋಲಾರ : ಕಾರು, ದ್ವಿಚಕ್ರ ವಾಹನ ಕಳುವು ಹಾಗೂ ಕುಖ್ಯಾತ ಸುಲಿಗೆಕೋರರನ್ನು ಬಂಧಿಸುವಲ್ಲಿ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಜುನಾಥ್ @ ಮಂಜು(26) ಯಾಸೀನ್ ಅಲಿಯಾಸ್ ಮೆಹಬೂಬ್ ಪಾಷಾ (20) ಬಂಧಿತ ಆರೋಪಿಗಳು. ಇವರುಗಳು ಕೋಲಾರ ನಗರ ಸೇರಿದಂತೆ ಬೆಂಗಳೂರಿನ ಮೈಕ್ರೋ ಲೇಔಟ್, ಜೆಪಿ ನಗರ ತಿರುಮಲಶೆಟ್ಟಿಹಳ್ಳಿ, ಯಲಹಂಕ ಗಳಲ್ಲಿ ದರೋಡೆ ಹಾಗು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಬಂಧಿತರಿಂದ ಟಾಟ ಕಾರು, ಹುಂಡಾಯ್ ಎಲೆಂಟ್ರಾ ಕಾರು, ಮಾರುತಿ ಬಲೆನೋ ಹಾಗೂ ಒಂದು ದ್ವಿಚಕ್ರ ವಾಹನ ಸೇರಿದಂತೆ ಆರೋಪಿಗಳಿಂದ ಒಟ್ಟು 11 ಲಕ್ಷ ರೂ ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಎಸ್ಪಿ ಕಾರ್ತಿಕ್ ರೆಡ್ಡಿ , ಹೆಚ್ಚುವರಿ ಪೋಲೀಸ್ ಆಧಿಕ್ಷಕಿ ಜಾಹ್ನವಿ, ಉಪಾಧಿಕ್ಷಕರಾದ ಚೌಡಪ್ಪ ಮಾರ್ಗದರ್ಶನದಲ್ಲಿ ನಗರ ಠಾಣೆ ಪೊಲೀಸರು ಕಳವು ಪ್ರಕರಣದ ಬೆನ್ನು ಹತ್ತಿದ್ದರು. ಅದರಂತೆ ವೃತ್ತ ನಿರೀಕ್ಷಕರ ಎಂ.ಜಿ ಫಾರೂಕ್‌ಪಾಷ ಮತ್ತು ಆರಕ್ಷಕ ಉಪನಿರೀಕ್ಷಕ ಎಂ.ಆರ್.ಅಣ್ಣಯ್ಯ ನೇತೃತ್ವದಲ್ಲಿ ವಿಶೇಷ ಅಪರಾಧ ವಿಭಾಗದ ಪೇದೆಗಳಾದ ಹಮೀದ್ ಖಾನ್, ರಾಘವೇಂದ್ರ, ನರೇಂದ್ರ, ಆರ್.ನಾರಾಯಣಸ್ವಾಮಿ, ಗುರುಪ್ರಸಾದ್, ಚಲಪತಿ, ಮಂಜುನಾಥ್, ವೆಂಕಟರಮಣ, ಶ್ರೀನಾಥ್, ಜಾವೀದ್ ಪಾಷಾ, ಶ್ರೀನಿವಾಸಲು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಒಟ್ಟಾರೆ ಇತ್ತೀಚೆಗೆ ಕೋಲಾರ ನಗರದಲ್ಲಿ ಹೆಚ್ಚಾಗಿದ್ದ ಕಳ್ಳತನ ಪ್ರಕರಣಗಳನ್ನು ಕಾರ್ಯಾಚರಣೆ ನಡೆಸಿ ಭೇದಿಸಿದ್ದು ಸಾರ್ವಜನಿಕರು ನಿಟ್ಟುಸಿರು ಬಿಡುವಂತಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!