ಹಾಡಹಗಲೇ ಮಾರಕಾಸ್ತ್ರಗಳಿಂದ‌ ಕೊಚ್ಚಿ ವ್ಯಕ್ತಿ‌ ಕೊಲೆ

ತುಮಕೂರು : ಹಾಡಹಗಲೇ ಮಚ್ಚು ಲಾಂಗುಗಳು ಝಳಪಿಸಿ ಇಬ್ಬರ ಮೇಲೆ ಹಲ್ಲೆ ನಡೆದಿದ್ದು ಓರ್ವ ಸಾವನ್ನಪ್ಪಿ ಮತ್ತೋರ್ವ ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

ನಗರದ ಸಿರಾ ಗೇಟ್‌ನ ನಾಗಣ್ಣನ ಪಾಳ್ಯದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣ ನಡೆದಿದ್ದು ಇಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.

ಮಾಂತೇಶ ಹಾಗೂ ಮಂಜುನಾಥ್ ಎಂಬುವವರ ಮೇಲೆ ಭೀಕರ ಹಲ್ಲೆ ನಡೆದಿದ್ದು ದುಷ್ಕರ್ಮಿಗಳು ಮಚ್ಚು ಲಾಂಗುಗಳಿಂದ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ.

ಧಾಳಿಗೊಳಗಾದ ಮಾಂತೇಶ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮಂಜುನಾಥ್ ಗೆ ತೀವ್ರ ತರವಾದ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣ ಮತ್ತೆ ತುಮಕೂರು ನಗರದ ಜನತೆಯನ್ನು ಭಯಭೀರನ್ನಾಗಿ ಮಾಡಿದೆ.

Share Post

Leave a Reply

error: Content is protected !!