ಸಾಂಗಲಿ ಬಳಿ ಭೀಕರ ಅಪಘಾತ : ಐವರ ದುರ್ಮರಣ

ಬೆಳಗಾವಿ : ಪಂಢರಪುರದ ವಿಠ್ಠಲನ ದರ್ಶನಕ್ಕೆ ತೆರಳುತ್ತಿದ್ದ ಬೆಳಗಾವಿಯ ಐವರು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಘಟನೆ ಇಂದು ಬೆಳಗಿನ ಜಾವ ಮಹಾರಾಷ್ಟ್ರದ ಸಾಂಗಲಿ ಸಮೀಪ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಮಂಡೋಳಿ ಗ್ರಾಮದ ನಾಲ್ವರು, ಹಂಗರಗಾ ಗ್ರಾಮದ ಒಬ್ಬರು ಸೇರಿದಂತೆ ಐವರು ದುರ್ಮರಣಕ್ಕೀಡಾಗಿದ್ದಾರೆ. ಬೆಳಗಾವಿ ತಾಲ್ಲೂಕಿನ ಮಂಡೋಳಿ ಗ್ರಾಮದ ಕೃಷ್ಣ ವಾಮನ ಗಾಂವಕರ(50), ಮಹಾದೇವ ಕಣಬರಕರ(48), ಬಾಳು ಅಂಬೇವಾಡಿಕರ(50), ಅರುಣ ದತ್ತು ಮುತಗೇಕರ(38) ಹಾಗೂ ಹಂಗರಗಾ ಗ್ರಾಮದ ಚಾಲಕ ಮೃತಪಟ್ಟ ವರದಿಯಾಗಿದೆ.

ದುರ್ಘಟನೆಯಲ್ಲಿ ವಾಹನದಲ್ಲಿದ್ದ ಇನ್ನೂ ಏಳು ಜನರು ಗಾಯಗೊಂಡಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಬುಲೇರೋ ಟೆಂಪೋದಲ್ಲಿ ಬೆಳಗಾವಿಯ ಮಂಡೋಳಿಯಿಂದ ಗುರುವಾರ ರಾತ್ರಿ ವಾಹನದಲ್ಲಿ ಇವರೆಲ್ಲರೂ ಕಾರ್ತಿಕ ಏಕಾದಶಿಗೆ ವಿಠ್ಠಲನ ದರ್ಶನ ಪಡೆಯಲು ಪಂಢರಪುರಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

ಇವರು ರಾತ್ರಿಯಿಡೀ ಪ್ರಯಾಣ ಮಾಡಿದ್ದರು. ಸಾಂಗೋಲ್ಯಾದಿಂದ ಸುಮಾರು 10 ಕಿ.ಮೀ. ದೂರದಲ್ಲಿ ಹೋಗುತ್ತಿದ್ದಾಗ ಇಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ಹಾಗೂ ಬೊಲೇರೋ ನಡುವೆ ಢಿಕ್ಕಿಯಾಗಿದೆ. ಹಿಂದಿನಿಂದ ಬಂದ ಬುಲೇರೋ ವಾಹನ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತದ ರಭಸಕ್ಕೆ ವಾಹನದಲ್ಲಿದ್ದ ಮೃತದೇಹಗಳನ್ನು ಹೊರ ತೆಗೆಯಲು ಸ್ಥಳೀಯ ನಾಗರಿಕರು ತೀವ್ರ ಪ್ರಯಾಸಡಬೇಕಾಯಿತು.

Share Post

Leave a Reply

Your email address will not be published. Required fields are marked *

error: Content is protected !!