ಷಣ್ಮುಗಂ ಚಿಟ್ ಫಂಡ್ ಬಹುಕೋಟಿ ವಂಚನೆ : ಆರೋಪಿಗಳು ನ್ಯಾಯಾಲಯಕ್ಕೆ ಶರಣು

ಕೋಲಾರ : ಷಣ್ಮುಗಂ ಚಿಟ್ ಫಂಡ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧ ಪಟ್ಟ ಇಬ್ಬರು ಆರೋಪಿಗಳು ಕೊನೆಗೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.

ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿ ಷಣ್ಮುಗಂ ಚಿಟ್ ಫಂಡ್ ಹಾಗೂ ಫೈನಾನ್ಸ್ ಕಂಪನಿ ಸಾವಿರಾರು ಕೋಟಿಗೂ ಹೆಚ್ಚು ಹಣ ವಂಚನೆ ಮಾಡಲಾಗಿತ್ತು. ಈ ಸಂಬಂಧ ಕಳೆದ ಆರು ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಆರೋಪಿಗಳು ಕೋರ್ಟ್‌ಗೆ ಶರಣಾಗಿದ್ದಾರೆ.

ಹೈಕೋರ್ಟ್ ಹಾಗೂ ಕೋಲಾರ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

ಸರ್ಕಾರಿ ಅಧಿಕಾರಿಗಳು, ಶಿಕ್ಷಕರು, ಬಿಸಿನೆಸ್ ಮ್ಯಾನ್ ಗಳು, ರಾಜಕಾರಣಿಗಳು, ಬಿಇಎಂಎಲ್ ನಿವೃತ್ತ ನೌಕರರು ಸೇರಿದಂತೆ ಐದು ಸಾವಿರಕ್ಕೂ ಹೆಚ್ಚು ಜನರು ಷುಣ್ಮುಗಂ ಕಂಪನಿಯಿಂದ ವಂಚನೆಗೆ ಒಳಗಾಗಿದ್ದರು.

ಬಂಗಾರಪೇಟೆ ಪೊಲೀಸ್ ಠಾಣೆ ಹಾಗು ಕೆಜಿಎಪ್ ಎಸ್ಪಿ ಕಛೇರಿಯಲ್ಲಿ ವಂಚನೆಗೊಳಗಾದ ಜನರಿಂದ ದೂರು ದಾಖಲಿಸಲಾಗಿತ್ತು.

Share Post

Leave a Reply

error: Content is protected !!