Friday, August 14, 2020
Home ಜಿಲ್ಲೆ ವಿಲಾಸಿ ಜೀವನಕ್ಕೆ ಹನಿಟ್ರ್ಯಾಪ್ ಮಾಡಿದ ಕಾಫಿ ಬೆಳೆಗಾರ

ಇದೀಗ ಬಂದ ಸುದ್ದಿ

ಪ್ರವಾಹ ಸಂತ್ರಸ್ಥರನ್ನು ಕುಡುಕರು ಎಂದ ಶ್ರೀಮಂತ ಪಾಟೀಲ...

ಪ್ರತಿ ಸಲವು ಮಳೆಗಾಲದ ಸಮಯದಲ್ಲಿ ಪ್ರವಾಹ  ಉಂಟಾಗುತ್ತಿದ್ದು ಕೃಷ್ಣಾ ನದಿ ತೀರದ ಗ್ರಾಮಗಳ ಸಂತ್ರಸ್ತರಿಗೆ ಕೂಡಲೇ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಅಥಣಿ ಪಟ್ಟಣದಲ್ಲಿ ಸಿಐಟಿಯು ಕಟ್ಟಡ ಕಾರ್ಮಿಕ ಸಂಘಟನೆ...

ರಾಷ್ಟ್ರ ಧ್ವಜದ ತಯಾರಿಕಾ ಘಟಕಕ್ಕೆ ಬಿಸಿ ಮುಟ್ಟಿದ...

ಆಗಸ್ಟ್ 15 ಅಂದ್ರೆ ಇಡೀ ಭಾರತ ದೇಶವೇ ಸಂಭ್ರಮದ ದಿನ ,ಪ್ರತಿಯೊಂದು ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಮೇಲೆ ರಾರಾಜಿಸುವ ನಮ್ಮ ರಾಷ್ಟ್ರ ಧ್ವಜ ಈ ಸಾರಿ ಅಷ್ಟು ಪ್ರಮಾಣದಲ್ಲಿ...

ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ಶೇ.೮೩.೧೧...

ಲಿಂಗಸೂಗೂರು: ತಾಲೂಕಿನ ಡಿ.ದೇವರಾಜ ಅರಸು ಸ್ಮಾರಕ ಪ್ರೌಢಶಾಲೆ ಆನೆಹೊಸೂರು ೨೦೧೯-೨೦ನೇ ಸಾಲಿನ ಎಸ್,ಎಲ್,ಸಿ ಪರೀಕ್ಷೆಯಲ್ಲಿ ಶೇ.೮೩.೧೧ ರಷ್ಟು ಸಾಧನೆ ಮಾಡಿದೆ. ಕನ್ನಡ ಮಾಧ್ಯಮ ಪ್ರೌ ಢಶಾಲೆಯ ೮೩.೧೧ ರಷ್ಟು ಫಲಿತಾಂಶ...

ಸೈಕಲ್ ನಲ್ಲಿ ಕೊರೊನಾ ಸೋಂಕಿತನ ಶವ ಸಾಗಾಟ

ಕೋವಿಡ್ ಸಂದರ್ಭದಲ್ಲಿ ತುರ್ತು ನೆರವು ನೀಡಲು ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 1,180 ಹೊಸ ಅತ್ಯಾಧುನಿಕ ಆಯಂಬುಲೆನ್ಸ್‍ಗಳನ್ನು ಬಿಡುಗಡೆ ಮಾಡಿದೆ. ಆದರೆ ಇಲ್ಲಿ ಕೋವಿಡ್‍ನಿಂದ ಮೃತಪಟ್ಟ ವ್ಯಕ್ತಿಯ ಶವನ್ನು ಸೈಕಲ್ ರಿಕ್ಷಾದಲ್ಲಿ...

ಕೊರೊನಾ ಕಾರಣಕ್ಕೆ ಪತ್ತೆಯಾಯ್ತು ಸಂಜಯ್ ದತ್ ಶ್ವಾಸಕೋಶದ...

ಬಾಲಿವುಡ್ ನಟ ಸಂಜಯ್ ದತ್ ಗೆ ಶ್ವಾಸಕೋಶದ ಕ್ಯಾನ್ಸರ್ ಕಾಡ್ತಿದೆ. ಇದು ಗೊತ್ತಾಗ್ತಿದ್ದಂತೆ ಕುಟುಂಬಸ್ಥರು, ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಆದಷ್ಟು ಬೇಗ ಸಂಜಯ್ ಗುಣಮುಖರಾಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ವಿಲಾಸಿ ಜೀವನಕ್ಕೆ ಹನಿಟ್ರ್ಯಾಪ್ ಮಾಡಿದ ಕಾಫಿ ಬೆಳೆಗಾರ

ಹಲವು ಪ್ರಭಾವಿಗಳು ಹನಿಟ್ರ್ಯಾಪ್‍ಗೆ ಒಳಗಾಗಿರುವ ಶಂಕೆ

ಸಕಲೇಶಪುರ : ಪ್ರತಿಷ್ಠಿತ ವ್ಯಕ್ತಿಗಳಿಗೆ ಹನಿಟ್ರಾಪ್ ಮಾಡುತ್ತಿದ್ದ ಆರೋಪದ ಮೇಲೆ ತಾಲೂಕಿನ ಹಾನುಬಾಳ್ ಹೋಬಳಿಯ ಹಾದಿಗೆ ಕಾಫಿ ಬೆಳೆಗಾರನೋರ್ವನನ್ನು ಬಂಧಿಸಿದ್ದು ಹನಿಟ್ರ್ಯಾಪ್‍ಗೆ ಗಂಡನೊಂದಿಗೆ ಹೆಂಡತಿಯೆ ಸಹಕರಿಸುತ್ತಿದ್ದಳು ಎಂಬ ಆರೋಪ ಕೇಳಿ ಬಂದಿದೆ.

ತಾಲೂಕಿನ ಹಾನುಬಾಳ್ ಹೋಬಳಿ ಹಾದಿಗೆ ಗ್ರಾಮದ ಪೃಥ್ವಿರಾಜ್ ಎಂಬಾತ ತನ್ನ ಹೆಂಡತಿ ಜೊತೆಗೆ ಸೇರಿಕೊಂಡು ಹಲವಾರು ಪ್ರತಿಷ್ಠಿತ ವ್ಯಕ್ತಿಗಳನ್ನು ವಂಚಿಸಿರುವ ಆರೋಪ ಕೇಳಿ ಬಂದಿದೆ. ಹನಿಟ್ರ್ಯಾಪ್‍ಗಾಗಿ ಮಾಜಿ ಸೈನಿಕ ಉದಯ್ ಎಂಬುವರ ಹೆಂಡತಿ ಪದ್ಮಜಾ ಎಂಬುವರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು ಪದ್ಮಜಾ ಹೆಸರಿನಲ್ಲಿ ಪೃಥ್ವಿರಾಜ್ ಹಲವಾರು ಪ್ರತಿಷ್ಠಿತ ವ್ಯಕ್ತಿಗಳಿಗೆ ನಕಲಿ ಸಿಮ್‍ವೊಂದರಿಂದ ದೂರವಾಣಿ ಕರೆ ಮಾಡಿ ಬಲೆ ಹಾಕುತ್ತಿದ್ದರು.

ಈ ಬಲೆಯಲ್ಲಿ ಉದಯ್ ಆಪ್ತ ಗ್ರಾ.ಪಂ ಸದಸ್ಯ ಹಾಗೂ ನಿವೃತ್ತ ಯೋಧ ಕೇಶವಮೂರ್ತಿ ಎಂಬಾತ ಸಿಲುಕಿ ಸುಮಾರು 40 ಸಾವಿರ ರೂಗಳನ್ನು ಕಳೆದುಕೊಂಡಿದ್ದು ಈ ಹಿನ್ನೆಲೆಯಲ್ಲಿ ಕೇಶವಮೂರ್ತಿ ಪದ್ಮಜಾಗೆ ಕರೆ ಮಾಡಿ ನನಗೆ ಸಹಕರಿಸು ಇಲ್ಲಾ ಹಣ ಹಿಂತಿರುಗಿಸು ಎಂದು ಕೇಳಿದ್ದಾನೆ. ಇದರಿಂದ ಗಾಬರಿ ಬಿದ್ದು ಪದ್ಮಜಾ ಮೂರ್ತಿಯ ಕರೆಯನ್ನು ರೆಕಾರ್ಡ್ ಮಾಡಿಕೊಂಡು ಗಂಡ ಉದಯ್‍ಗೆ ತಿಳಿಸಿದ್ದು, ಈ ಆಧಾರದ ಮೇಲೆ ಉದಯ್ ಪೋಲಿಸರಿಗೆ ಮೂರ್ತಿಯ ವಿರುದ್ದ ದೂರು ನೀಡಿರುತ್ತಾರೆ.

ಪೊಲೀಸರು ಇದನ್ನು ಪರಿಶೀಲಿಸಿದಾಗ ಮೂರ್ತಿ ಹಣ ಕಳೆದುಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದ್ದು ಅಂತಿಮವಾಗಿ ಗಂಭೀರವಾಗಿ ತನಿಖೆ ನಡೆಸಿದಾಗ ಹಾದಿಗೆ ಗ್ರಾಮದ ಪೃಥ್ವಿರಾಜ್‍ನ ಕೃತ್ಯ ಬೆಳಕಿಗೆ ಬಂದಿದೆ. ಗ್ರಾಮಾಂತರ ಠಾಣೆಯ ಪಿಎಸ್‍ಐ ಬ್ಯಾಟರಾಯನಗೌಡ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿ ಪೃಥ್ವಿ ವಿಲಾಸಿ ಜೀವನಕ್ಕೆ ಮೊರೆ ಹೋಗಿದ್ದು ಮೋಜು ಮಾಡಲು ಹಣವಿಲ್ಲದ್ದರಿಂದ ಈ ರೀತಿಯ ಕೃತ್ಯವೆಸಗಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ. ಪೃಥ್ವಿ ಸಹ ಪ್ರತಿಷ್ಠಿತ ಕುಟುಂಬದವನಾಗಿದ್ದು ಹಣದ ಆಸೆಗಾಗಿ ಹಲವಾರು ಪ್ರತಿಷ್ಠಿತ ಹಾಗೂ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್‍ಗೆ ಒಳಪಡಿಸಿದ್ದು ಮರ್ಯಾದೆಗೆ ಹೆದರಿ ಬಹುತೇಕರು ದೂರು ನೀಡಿಲ್ಲದರಿಂದ ಪ್ರಕರಣಗಳು ಮುಚ್ಚಿ ಹೋಗಿದೆ. ಆದರೆ ನಿವೃತ್ತ ಯೋಧ ಉದಯ್ ತನ್ನ ಹೆಂಡತಿಯ ಮೇಲೆ ಅನುಮಾನ ಹುಟ್ಟಿಸುವ ಆರೋಪಗಳು ಕೇಳಿ ಬಂದರೂ ಸಹ ತಾಳ್ಮೆ ಹಾಗೂ ಸಮಯಪ್ರಜ್ಞೆ ತೋರಿದ್ದರಿಂದ ಪ್ರಕರಣ ಹೊರ ಬರಲು ಸಾಧ್ಯವಾಗಿದೆ. ಸ್ನೇಹಿತನ ಹೆಂಡತಿಯ ಮೇಲೆ ಕಣ್ಣು ಹಾಕಿ ಹಣವನ್ನು ಕಳೆದುಕೊಂಡ ಕೇಶವಮೂರ್ತಿಯ ನಡವಳಿಕೆಗೆ ಹಾನುಬಾಳ್ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

TRENDING