ಕೆ.ಆರ್.ಪೇಟೆ ಉಪ ಚುನಾವಣೆಗೆ ಜೆಡಿಎಸ್ ರಣಕಹಳೆ

ಮಂಡ್ಯ : ಜಿಲ್ಲೆಯ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ನೀತಿ ಮಂಗಲ ಗ್ರಾಮದಲ್ಲಿ ಜೆಡಿಎಸ್ ಬೃಹತ್ ಸಮಾವೇಶ ನಡೆಸುವ ಮೂಲಕ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿರೋ ಬಗ್ಗೆ ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ಉಪ ಚುನಾವಣೆಗೆ ಜಾತ್ಯಾತೀತ ಜನತಾದಳ ರಣಕಹಳೆ ಮೊಳಗಿಸಿತು.

ಅನರ್ಹ ಶಾಸಕ ನಾರಾಯಣಗೌಡ ಉಪಚುನಾವಣೆಗೆ ಸಜ್ಜಾಗಲು ಹೋಬಳಿ ವಾರು ಸಮಾವೇಶ ನಡೆಸುವ ಮೂಲಕ ಮತದಾರರಿಗೆ ಬಾಡೂಟ ಹಾಕಿಸುತ್ತಿದ್ದು, ಅವರಿಗೆ ಟಕ್ಕರ್ ಕೊಡಲು ಜೆಡಿಎಸ್ ಸಹ ಜನರ ಬಳಿಗೆ ಬರುವ ಮೂಲಕ ಉಪಚುನಾವಣೆಗೆ ಸಿದ್ದವಾಗುತ್ತಿದೆ.

ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜಿ.ಪಂ. ಸದಸ್ಯ ಶೀಳನೆರೆ ಮಂಜು ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಕಾರ್ಯಕ್ರಮಕ್ಕೂ ಮುನ್ನ ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಸಾಲ ಮನ್ನಾ ಬಗ್ಗೆ ಪುಸ್ತಕಗಳನ್ನು ರೆಡಿ ಮಾಡಿಸಿ ಜನರಿಗೆ ಹಂಚಿಸಿದರು.

ಸಮಾವೇಶದಲ್ಲಿ ಮಾತನಾಡಿದ ಟಿಕೆಟ್ ಆಕಾಂಕ್ಷಿ ಮಂಜು, ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ಕೊಟ್ಟೆ ಎನ್ನುವ ಅನರ್ಹ ಶಾಸಕ ನಾರಾಯಣಗೌಡ, ಕುಮಾರಸ್ವಾಮಿ ಬಜೆಟ್ ಮಂಡಿಸುವಾಗ ಅನಾರೋಗ್ಯದ ನೆಪವೊಡ್ಡಿ ಮುಂಬೈ ಆಸ್ಪತ್ರೆಗೆ ಹೋಗಿದ್ದು ಏಕೆ ಎಂದು ಪ್ರಶ್ನಿಸಿದ್ರು.

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ದೇವೇಗೌಡರ ಆಶೀರ್ವಾದದಿಂದ ಗೆದ್ದ ನಾರಾಯಣಗೌಡ, ಇದೀಗ ಪಕ್ಷಕ್ಕೆ ವಂಚಿಸಿ, ಬೇರೆ ಪಕ್ಷದಿಂದ ಅಭ್ಯರ್ಥಿ ಆಗಲು ಹವಣಿಸುತ್ತಿದ್ದು, ಅವರಿಗೆ ತಕ್ಕ ಪಾಠ ಕಲಿಸಿ ಎಂದರು.

ಒಟ್ಟಾರೆ ಉಪಚುನಾವಣೆಗೆ ಜೆಡಿಎಸ್ ರಹಕಹಳೆ ಮೊಳಗಿಸಿದ್ದು, ಉಪ ಚುನಾವಣೆಗೆ ಇನ್ನು 25 ದಿನಗಳು ಬಾಕಿ ಇರುವಂತೆಯೇ ರಣಕಹಳೆ ಮೊಳಗಿಸಿದೆ.

  • ಸಂತೋಷ್ ಬಲ್ಲೇನಹಳ್ಳಿ
    ದಿ ನ್ಯೂಸ್ 24 ಮಂಡ್ಯ
Share Post

Leave a Reply

Your email address will not be published. Required fields are marked *

error: Content is protected !!