ಮುಂದಿನ ನಡೆ ಬಗ್ಗೆ ಬೆಂಬಲಿಗರೊಂದಿಗೆ ರಮೇಶ್ ಜಾರಕಿಹೊಳಿ ಸಭೆ

ಬೆಳಗಾವಿ : ಜಿಲ್ಲೆಯ ಅಥಣಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ದಿಢೀರ್ ಸಭೆ ನಡೆಸಿದ ರೆಬೆಲ್ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ತಮ್ಮ ಬೆಂಬಲಿಗರ ಸಲಹೆ ಪಡೆದರು.

ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿಸಿಎಂ ಆಗಿರುವ ಲಕ್ಷ್ಮಣ ಸವದಿ ಅವರ ಟಿಕೆಟ್ ವಿಚಾರ ಹೈಕಮಾಂಡ್ ಬಳಿ ಇದೆ. ಇನ್ನುಳಿದಂತೆ ಮೂವತ್ಮೂರು ಸಾವಿರ ಮತಗಳ ಅಂತರದಿಂದ ಸೋತ ರಾಜು ಕಾಗೆಗೆ ಟಿಕೆಟ್ ಕೊಡುವಂತೆ ಹೇಳುತ್ತಿರುವದು ಎಷ್ಟು ಸರಿ. ಇಂತಹದ್ದನ್ನು ನಾನು ನಿರೀಕ್ಷಿಸಿರಲಿಲ್ಲ ಎಂದು ನಿನ್ನೆಯಷ್ಟೆ ಬಿ ಎಸ್ ವೈ ಉಪಚುನಾವಣೆ ಪೂರ್ವಭಾವಿ ಸಭೆಯಲ್ಲಿ ಹೇಳಿದ್ದಾರೆ.

ಇದರಿಂದಾಗಿ ಪರೋಕ್ಷವಾಗಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ ಕಾರಣವಾಗಿದ್ದ ಹದಿನೈದು ಜನ ಶಾಸಕರು ಸದ್ಯ ಅತಂತ್ರವಾಗುವ ಸ್ಥಿತಿ ನಿರ್ಮಾಣವಾಗಿದ್ದು ಬಿಜೆಪಿಯಿಂದ ಟಿಕೆಟ್ ಸಿಗುವ ನಿರೀಕ್ಷೆ ತಕ್ಕಡಿಯಲ್ಲಿ ವಾಲುತ್ತಿದ್ದು ಅನಿರೀಕ್ಷಿತ ಏಟುಗಳು ಬಿಳುತ್ತಿದ್ದಂತೆ ಮತ್ತೆ ಅನರ್ಹ ಶಾಸಕರ ಎದೆ ಬಡಿತ ಹೆಚ್ಚಾಗಿದೆ.

ಇದರಿಂದಾಗಿ ಅಥಣಿ ಮತಕ್ಷೇತ್ರದಲ್ಲಿ ಸದ್ಯ ಡಿಸಿ‌ಎಂ ಲಕ್ಷ್ಮಣ ಸವದಿಗೆ ಪರ್ಯಾಯವಾಗಿ ಮಹೇಶ್ ಕುಮಠಳ್ಳಿ ಅವರನ್ನು ಅಖಾಡಕ್ಕೆ ಇಳಿಸುವ ಕುರಿತು ಕೂಡ ಗೌಪ್ಯ ಸಭೆ ನಡೆಸಿದ್ದು ರಮೆಶ್ ಜಾರಕಿಹೋಳಿ ಸಹೋದರ ಸತೀಶ್ ಜಾರಕಿಹೋಳಿ ಹಾಗೂ ಸಮ್ಮಿಶ್ರ ಸರ್ಕಾರದ ವಿರುದ್ದವೂ ಗುಡುಗಿದ್ದಾರೆ.

ಇನ್ನೂ ತಮ್ಮ ಸಹೋದರ ಸತೀಶ್ ನಾನು ಆಸ್ತಿ ಮಾಡಿದ್ದೆನೆ ಎಂದು ಒಮ್ಮೆ ಹೇಳಿದರೆ ಇನ್ನೊಮ್ಮೆ ಸಾಲಗಾರನಾಗಿದ್ದೇನೆ ಎನ್ನುತ್ತಿದ್ದಾರೆ. ಅವರ ಆರೋಪಗಳಿಗೆ ಬಹಿರಂಗ ಸಭೆಯಲ್ಲಿ ಉತ್ತರ ಕೊಡುತ್ತೇನೆ.

ಸತೀಶ್ ಹೇಳುತ್ತಿರುವ ವಸ್ತು ಮಂಗಳೂರು ಅಥವಾ ಮೈಸೂರಿನದ್ದಾಗಿರಬಹುದು. ಆದರೆ ಯಾರೂ ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡಬಾರದು ಎಂದು ಕುಟುಕಿದರಲ್ಲದೆ ಸಹೋದರ ಸತೀಶ್‌ಗೆ ಮೈಂಡ್ ಔಟ್ ಆಗಿದ್ದು ಅವರನ್ನು ಧಾರವಾಡ ಆಸ್ಪತ್ರೆಗೆ ಸೇರಿಸಬೇಕಾಗಿದೆ ಎಂದಿದ್ದಾರೆ.

ಇಷ್ಟೇ ಅಲ್ಲದೆ ಯಡಿಯೂರಪ್ಪ ಮಾತಿಗೆ ಪ್ರತಿಕ್ರಿಯೆ ನಿಡಿದ ರಮೆಶ್ ಜಾರಕಿಹೋಳಿ ಸಮ್ಮಿಶ್ರ ಸರ್ಕಾರವನ್ನು ಕೆಡವಿದ್ದು ನಮ್ಮಲ್ಲಿನ ವೈಮನಸ್ಸಿನಿಂದ. ಬಿಜೆಪಿ ಸರ್ಕಾರ ಬರಲಿ ಅಂತಲ್ಲ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದು ಬಿಜೆಪಿ ಸೇರ್ಪಡೆ ಕುರಿತು ಸುಳಿವು ನೀಡಿದರು.

ಮಾಧ್ಯದವರು ಒಂದು ಚಾನಲ್‌ನಿಂದ ಮತ್ತೊಂದು ಚಾನಲ್ ಗೆ ಹೋಗುತ್ತಾರೆ. ಹಾಗೆಯೇ ನಾವು ಪಕ್ಷದಿಂದ ಪಕ್ಷಕ್ಕೆ ಹೋಗುವದರಲ್ಲಿ ತಪ್ಪೇನಿದೆ.‌ ರಾಜಕಾರಣ ಒಂದು ಉದ್ದಿಮೆ‌ ಎನ್ನುವ ಮೂಲಕ‌ ಬಿಜೆಪಿ ಸೇರ್ಪಡೆಯ ಒಳ ಸುಳಿವನ್ನು ಕೂಡ ಬಿಟ್ಟುಕೊಟ್ಟಿದ್ದು ಒಟ್ಟಾರೆ ರಾಜ್ಯ ರಾಜಕಾರಣದಲ್ಲಿ ಆಗಲಿರುವ ಬದಲಾವಣೆ ಅನರ್ಹತೆಯ ಕುರಿತು ಸುಪ್ರೀಂ ತೀರ್ಪಿನ ಬಳಿಕ ಮತ್ತಷ್ಟು ಬದಲಾವಣೆಯ ಬಿರುಗಾಳಿಗೆ ಸಿಲುಕಲಿದೆ ಅನ್ನುವುದರಲ್ಲಿ ಎರಡು ಮಾತಿಲ್ಲ.

Share Post

Leave a Reply

Your email address will not be published. Required fields are marked *

error: Content is protected !!