ಔರಾದ್ಕರ್ ವರದಿ ಜಾರಿ : ಪೊಲೀಸರಿಗೆ ಬಂಪರ್ ಗಿಫ್ಟ್ ನೀಡಿದ ರಾಜ್ಯ ಸರ್ಕಾರ

ಬೆಂಗಳೂರು : ಪೊಲೀಸ್ ಹುತಾತ್ಮ‌ ದಿನದ ಸದರ್ಭದಲ್ಲಿ ಪೊಲೀಸರಿಗೆ ರಾಜ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವೇತನ‌ ಶ್ರೇಣಿಯನ್ನು ಔರಾದ್ಕರ್ ವರದಿಯಂತೆ ಜಾರಿ ಮಾಡಿದ್ದು ಇದರ ಜೊತೆಗೆ ಕಷ್ಟ ಪರಿಹಾರವನ್ನು ಸಹ ಹೆಚ್ಚಳ ಮಾಡಿ ಆದೇಶಿಸಿದೆ.

2016 ರ ಜೂನ್ 21 ರಂದು ರಾಘವೇಂದ್ರ ಔರಾದ್ಕರ್ ಅಧ್ಯಕ್ಷತೆಯ ಸಮಿತಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು 01-08-19 ರಿಂದ ವರದಿ ಜಾರಿಗೆ ಬರುವಂತೆ ವೇತನವನ್ನು ಉನ್ನತೀಕರಿಸಿ ಆದೇಶಸಲಾಗಿದೆ.

ರಾಜ್ಯ ಸರ್ಕಾರ ಔರಾದ್ಕರ್ ವರದಿಯ ಪ್ರಕಾರ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವೇತನ‌ ಶ್ರೇಣಿಗಳನ್ನು ಉನ್ನತೀಕರಣಗೊಳಿಸುವ ಎಲ್ಲಾ ಶಿಫಾರಸ್ಸುಗಳನ್ನು ಅಂಗೀಕರಿಸಿದೆ. ಈ ಮೂಲಕ ಪೊಲೀಸ್ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಕ್ಷೇಮಕ್ಕೆ ಆದ್ಯತೆ ನೀಡಿರುವುದಾಗಿ ತಿಳಿಸಿದೆ.

ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲಿನ ಕಳಕಳಿಯಿಂದ ಈಗಾಗಲೇ ಇಲಾಖೆಯ ಎಲ್ಲಾ ಶ್ರೇಣಿಯ ಸಿಬ್ಬಂದಿಗಳಿಗೆ ಈಗಿರುವ ಕಷ್ಟ ಪರಿಹಾರ ಭತ್ಯೆಯ ಜೊತೆಗೆ 1ಸಾವಿರ ಹಣ ಮಂಜೂರು ಮಾಡಿದೆ.

ಕಷ್ಟ ಪರಿಹಾರ ಭತ್ಯೆಯ ಹೆಚ್ಚಳದಿಂದ ಮಾಸಿಕ 10.70 ಕೋಟಿ ಹಾಗೂ ವಾರ್ಷಿಕ 128.38 ಕೋಟಿ ಹಣವನ್ನು ಸರ್ಕಾರ ಭರಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ.

ರಾಜ್ಯ ಸರ್ಕಾರದ ಈ ಆದೇಶದಿಂದ ಹೊಸದಾಗಿ ಕೆಲಸಕ್ಕೆ ಸೇರುವ ಪೊಲೀಸರಿಗೆ ಇರುವ ವೇತನ 30,427 (ಎಲ್ಲಾ ಭತ್ಯೆಗಳು ಸೇರಿ)
ಬದಲಿಗೆ 34,267ಕ್ಕೆ (ಎಲ್ಲಾ ಭತ್ಯೆಗಳು ಸೇರಿ) ಹೆಚ್ಚಳವಾಗಿರುತ್ತದೆ.

Share Post

Leave a Reply

Your email address will not be published. Required fields are marked *

error: Content is protected !!