ವಾಲ್ಮೀಕಿಯವರ ಬದುಕು ನಾಗರಿಕತೆ ಬದಲಾವಣೆಗೆ ನಿದರ್ಶನ : ಶಾಸಕ ವಿ.ಮುನಿಯಪ್ಪ

ಶಿಡ್ಲಘಟ್ಟ : ನಾಗರಿಕತೆ ಬದಲಾವಣೆಗೆ ವಾಲ್ಮೀಕಿಯವರ ಬದುಕು ಒಂದು ಉತ್ತಮ ನಿದರ್ಶನ ಎಂದು ಶಾಸಕ ವಿ.ಮುನಿಯಪ್ಪ ಹೇಳಿದರು.

ನಗರದ ಕಂದಾಯ ಭವನದ ಮುಂಭಾಗ ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ವಾಲ್ಮೀಕಿ ಸಮುದಾಯದ ವತಿಯಿಂದ ಹಮ್ಮಿಕೊಂಡಿದ್ದ 10 ನೇ ವರ್ಷದ ಮಹಶ್ರೀ ವಾಲ್ಮೀಕಿ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಲ್ಮೀಕಿ ಬರೆದ ರಾಮಾಯಣ ಕೃತಿ ಪ್ರಪಂಚದ ಮಹಾನ್‌ ಗ್ರಂಥವಾಗಿದೆ. ಅವರ ಕೃತಿಯಲ್ಲಿ ದೇಶದ ಸಂಸ್ಕೃತಿ, ಗತಕಾಲದ ವೈಭವಗಳನ್ನು ಬಿಂಬಿಸುವಂಥದ್ದಾಗಿದೆ. ಹಾಗಾಗಿ ರಾಮಾಯಣ, ಮಹಾಭಾರತದಂತಹ ಮಹಾನ್‌ ಕೃತಿಗಳನ್ನು ಪ್ರತಿಯೊಬ್ಬರೂ ಓದಿ ಅರ್ಥೈಸಿಕೊಂಡು ಇತರರಿಗೆ ತಿಳಿಸಲು ಮುಂದಾಗುವಂತೆ ಸಲಹೆ ನೀಡಿದರು.

ಮುಖ್ಯ ಭಾಷಣಗಾರ ಆನಂದ್ ಮಾತನಾಡಿ ಇಂದಿನ ಯುವ ಪೀಳಿಗೆ ರಾಮಾಯಣದಂತಹ ಮಹಾನ್‌ ಗ್ರಂಥಗಳನ್ನು ಓದುವುದು ಉತ್ತಮ. ಇದರಿಂದ ಮಹಾನ್‌ ವ್ಯಕ್ತಿಗಳ ಆದರ್ಶ ಗುಣಗಳನ್ನು ಮೈಗೂಡಿಕೊಳ್ಳಲು ಸಹಕಾರಿಯಾಗುತ್ತದೆ. ಮಹರ್ಷಿ ವಾಲ್ಮೀಕಿ ಯವರಂತಹ ಜೀವನ ಚರಿತ್ರೆಯನ್ನು ಸಹ ಅರಿಯಬೇಕು ಎಂದು ತಿಳಿಸಿದರು.

ಜಯಂತಿ ಆಚರಣೆಯಲ್ಲಿ ಪಲ್ಲಕ್ಕಿ ಹಾಗೂ ರಥದ ಮೂಲಕ ವಾಲ್ಮೀಕಿಯವರ ಭಾವ ಚಿತ್ರವನ್ನಿಟ್ಟು ಹೂವಿನಿಂದ ಅಲಂಕರಿಸಿ ಕಲಾವಿದರ ತಂಡಗಳೊಂದಿಗೆ ಹಾಗೂ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ವಾಲ್ಮೀಕಿ ಪ್ರಶಸ್ತಿ ಪುರಸ್ಕರತರಾಗಿ ಆಯ್ಕೆಯಾದ ಕಮಲಾ ಹಂಪನ, ಹೋಬಳಪ್ಪ, ಡಾ. ಜಿ.ರಂಗಯ್ಯ ಈ ಮೂರು ಸಾಧಕರಿಗೆ ಹಾಗೂ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ತಾ ಪಂ ಅದ್ಯಕ್ಷ ಬಿ.ವಿ.ನಾರಾಯಣಸ್ವಾಮಿ, ತಹಶೀಲ್ದಾರ್ ದಯಾನಂದ್, ಬಂಕ್ ಮುನಿಯಪ್ಪ, ಸಿ.ಎಸ್.ಮುನಿಯಪ್ಪ, ರಾಮಚಂದ್ರಪ್ಪ, ಇಓ ಶಿವಕುಮಾರ್, ವೃತ್ತ ನಿರೀಕ್ಷಕ ಆನಂದ್ ಕುಮಾರ್, ಗಿರೀಶ್ ನಾಯಕ್, ವೆಂಕಟೇಶ್, ರಾಜೇದ್ರ, ನಟರಾಜ್, ನಾಗವೇಣಿ,ನಗರ ಸಭೆ ಸದಸ್ಯ ಮಂಜುನಾಥ್, ನಂಜಪ್ಪ, ಬಂಕ್ ಮಂಜುನಾಥ್, ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!