ಬೇಡರ ಸಮಾಜವೆಂದರೆ ಬೇಡುವ ಸಮಾಜವಲ್ಲ ನೀಡುವ ಸಮಾಜ

ಗೋಕಾಕ್ : ಬೇಡರ ಸಮಾಜವೆಂದರೆ ಬೇಡುವ ಸಮಾಜವಲ್ಲ ಅದು ಬೇಡಿದವರಿಗೆ ಕೋಡತಕ್ಕಂತಹ ಸಮಾಜ ಎಂದು ಜಾರಕಿಹೋಳಿಯ ಓಂಕಾರ ಮಹರ್ಷಿ ಆಶ್ರಮ ಕೃಪಾನಂದ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕೊಣ್ಣೂರಿನಲ್ಲಿ ವಾಲ್ಮೀಕಿ ಸಮಾಜ ಮತ್ತು ಪುರಸಭೆ ಇವರ ಸಂಯುಕ್ತಾಶ್ರದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅವರು ವಾಲ್ಮೀಕಿ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಜ್ಯೋತಿ ಬೆಳಗಿಸಿ, ವಾಲ್ಮೀಕಿ ಮಾರ್ಗ ಮತ್ತು ಸಿಂದೂರ ಲಕ್ಷ್ಮಣ ಮಾರ್ಗ ವೆಂಬ ನಾಮಪಲಕ ಉದ್ಘಾಟಿಸಿ ಮಾತನಾಡಿದರು.

ಬೇಡದೇನೆ ದೇವರಿಗೆ ಕಣ್ಣು ಕೊಟ್ಟ ಬೇಡರ ಕಣ್ಣಪ್ಪ, ಗುರುವಿಗೆ ತನ್ನ ಹೆಬ್ಬೆರಳನ್ನು ನೀಡಿದ ಎಕಲವ್ಯ, ಸಮಾಜದ ಎಳಿಗೆಗಾಗಿ ಕೈಯಲ್ಲಿ ಕತ್ತಿ ಹಿಡಿದು ಹೋರಾಡಿದ ಮತ್ತು ಜನರನ್ನು ಸನ್ಮಾರ್ಗಕ್ಕೆ ಕರೆದೊಯ್ಯುವಂತ ಗ್ರಂಥವನ್ನು ಕೊಟ್ಟ ವಾಲ್ಮೀಕಿಯ ಸಮಾಜ ಬೇಡರ ಸಮಾಜವೆಂದರು.

ಬುದ್ದಿವಂತರೆನಿಸಿಕೊಂಡವರು ರಾಮಾಯಣದ ಬಗ್ಗೆ ಸಾಕ್ಷಿ ಪುರಾವೆಗಳನ್ನು ಕೇಳುವವರು ಮಹಾತ್ಮ ಗಾಂಧಿಯವರ ಸಮಾದಿ ಮೇಲೆ ಬರೆದಿರುವ ‘ಹೇ ರಾಮ್’ ಪದ ಹೇಗೆ ಸತ್ಯವೋ ರಾಮಾಯಣ ಕೂಡ ಇದ್ದದ್ದು ಸತ್ಯ ಎಂದು ಹೇಳಿದರು.

ದಾನವನಾಗಿ ಮೆರೆಯುತಿದ್ದ ರತ್ನಾಕರ ಯಾವತ್ತು ತನ್ನ ಪಾಪದಲ್ಲಿ ತನ್ನ ಮನೆಯವರು ಪಾಲಗಾರ ಆಗುವುದಿಲ್ಲ ಎಂದು ತಿಳಿದಾಗ ತಾನು‌ ಮಾಡುತಿದ್ದ ಪಾಪದ ಅರಿವು ಮೂಡಿದಾಗ ಗುರುವಿನ ಮಾರ್ಗದಲ್ಲಿ ನಡೆದು ಇವತ್ತು ಮಾನವ ಕುಲದ ಉದ್ಧಾರಕ್ಕಾಗಿ ರಾಮಾಯಣದಂತಹ ಮಹಾ ಗ್ರಂಥ ಬರೆದ ವಾಲ್ಮೀಕಿ ಮಾಹಾದೇವನಾದ. ಅದರಂತೆ ಇಂದು ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೆ ಆಸ್ತಿಯಾಗಿ‌ ಮಾಡಿ ಬದಲಾವಣೆ ತರಬೇಕಾಗಿದೆ ಎಂದು ಕರೆ ನೀಡಿದರು.

ಬಡವ ಶ್ರೀಮಂತ ಅನ್ನದೆ ಶಿಕ್ಷಣವಂತರಾಗಬೇಕಾಗಿದೆ. ಅದಕ್ಕಾಗಿ ನಾವು ಮಕ್ಕಳಿಗೆ ಮೊದಲ ಪಾಠ ಶಾಲೆಯ ಮೊದಲ ಗುರುಗಳಾಗಬೇಕು. ಆಗ ಮಾತ್ರ ನಾವು ದೇಶಕ್ಕೆ ಹಾಗೂ ಸಮಾಜಕ್ಕೆ ವಾಲ್ಮೀಕಿಯಂತೆ ಒಬ್ಬ ಒಳ್ಳೆಯ ಮನುಷ್ಯನನ್ನು‌ ನೀಡಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ಸಮಯದಲ್ಲಿ ಸುಮಾರು ಆರು ವರ್ಷಗಳಿಂದ ಸತತವಾಗಿ ಪ್ರವಚನ, ಸತ್ಸಂಗ ಮಾಡುತ್ತಿರುವ ಶರಣರಿಗೆ ಸಮಾಜದ ಗಣ್ಯರು ಶಾಲು ಹೋದಿಸಿ ಸತ್ಕರಿಸಿ ಸನ್ಮಾನಿಸಿದರು.

Share Post

Leave a Reply

Your email address will not be published. Required fields are marked *

error: Content is protected !!