ದಲಿತರ ಕುಂದು ಕೊರತೆ ಸಭೆಯಲ್ಲಿ ಮುಖಂಡರಿಂದ ದೂರುಗಳ ಸುರಿಮಳೆ

ಶಿಡ್ಲಘಟ್ಟ : ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಯೋಜಿಸಲಾಗಿದ್ದ ದಲಿತರ ಕುಂದು ಕೊರತೆಗಳ ಸಭೆಯಲ್ಲಿ ಮುಖಂಡರು ಹಾಗೂ ಸಾರ್ವಜನಿಕರು ದೂರುಗಳ ಸುರಿಮಳೆಗೈದರು.

ಸಭೆಯಲ್ಲಿ ಮಾತನಾಡಿದ ದಲಿತ ಮುಖಂಡರು ದಲಿತ ಕುಟುಂಬಕ್ಕೆ ಶಾಪವಾಗಿರುವ ಮದ್ಯ ಪಾನ, ನಿಷೇಧಕ್ಕೆ ಕ್ರಮ ವಹಿಸಿ ಗ್ರಾಮಗಳಿಗೆ ಮದ್ಯ ಒದಗಿಸುವ ಬಾರ್ ಗಳ ಮೇಲೆ ಸೂಕ್ತ ಕ್ರಮ ವಹಿಸಲು ಆಗ್ರಹಿಸಿದರು.

ದಲಿತರ ಮೇಲೆ ಕೇಸ್ ದಾಖಲು ಮಾಡುವ ಮೊದಲು ಮಧ್ಯವರ್ತಿಗಳನ್ನು ದೂರವಿಟ್ಟು ನೇರ ತನಿಖೆ ಮಾಡಿ ಎಂದು ಒತ್ತಾಯಿಸಿದರು.

ದಲಿತ ರೈತ ಕುಟುಂಬಗಳು ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜಮೀನುಗಳನ್ನು ಸವರ್ಣೀಯರು ಲಪಟಾಯಿಸುವ ಕೆಲಸ ಮಾಡುತ್ತಿದ್ದಾರೆ. ಅಂತಹ ದೂರುಗಳಿಗೆ ತಕ್ಷಣ ಸ್ಪಂದಿಸಿ ನಮಗೆ ನ್ಯಾಯಯುತವಾಗಿ ಬಗೆಹರಿಸಿ ನ್ಯಾಯ ಸಿಗುವಂತೆ ಮಾಡಿ ಎಂದು ಹೇಳಿದರು.

ಗ್ರಾಮಗಳ ದಲಿತ ಮಹಿಳೆಯರ ಮೇಲೆ ವಿನಾ ಕಾರಣ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಹೆಚ್ಚಾಗಿ ನಡೆಯುತ್ತಿವೆ. ಈ ಕುರಿತು ಬಲಾಡ್ಯರ ಕಡೆ ನೋಡದೆ ನ್ಯಾಯಯುತವಾಗಿ ಕ್ರಮ ವಹಿಸಿ ಎಂದು ದಲಿತ ಮುಖಂಡರುಗಳ ನೇರ ಮನವಿಗಳನ್ನು ಮುಂದಿಟ್ಟರು.

ಸಭೆಯಲ್ಲಿ ವೃತ್ತ ನಿರೀಕ್ಷಕ ಆನಂದ್ ಕುಮಾರ್,
ಅರಕ್ಷಕ ಉಪ ನಿರೀಕ್ಷಕ ಹರೀಶ್, ದಲಿತ ಮುಖಂಡರಾದ ಮೇಲೂರು ಮಂಜು, ಮಳ್ಳೂರು ಹರೀಶ್, ಕುಂದಲಗುರ್ಕಿ ಅರುಣ್ ಕುಮಾರ್, ಮಳಮಾಚನಹಳ್ಳಿ ರಾಮಾಂಜಿನಪ್ಪ,
ಲಕ್ಷ್ಮೀನಾರಾಯಣ್ ಮುಂತಾದವರು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!