ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ವೈಭವದ ಬೈಕ್ ರ‍್ಯಾಲಿ

ದಾವಣಗೆರೆ : ಮಹರ್ಷಿ ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ಮಹರ್ಷಿ ವಾಲ್ಮೀಕಿ ಯುವ ಘಟಕದ ನೇತೃತ್ವದಲ್ಲಿ ಶನಿವಾರ ನಗರದಲ್ಲಿ ವೈಭವದ ಬೈಕ್ ರ‍್ಯಾಲಿ ನಡೆಯಿತು.

ವೀರ ಮದಕರಿನಾಯಕರ ಲಾಂಛನದ ಧ್ವಜಗಳನ್ನು ಹಿಡಿದ ನೂರಾರು ಯುವಕರು, ವಾಲ್ಮೀಕಿಯವರ ಜಯಘೋಷದೊಂದಿಗೆ ರ‍್ಯಾಲಿಯಲ್ಲಿ ಸಾಗಿದರು.

ಆರಂಭದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ‌ ಪುಷ್ಪಾರ್ಚನೆ ಮಾಡಲಾಯಿತು. ಮುಖಂಡ‌ ಎಚ್​.ಕೆ. ರಾಮಚಂದ್ರಪ್ಪ ರ‍್ಯಾಲಿಗೆ ಚಾಲನೆ ನೀಡಿದರು. ಮುಖಂಡರಾದ ಬಿ. ವೀರಣ್ಣ, ಶ್ರೀನಿವಾಸ ದಾಸಕರಿಯಪ್ಪ, ವಿನಾಯಕ ಪೈಲ್ವಾನ್, ಪ್ರವೀಣ್ ಶಾಮನೂರು, ಬಿ.ಜೆ.‌ ಅಜಯಕುಮಾರ್, ಯಶವಂತರಾವ್ ಜಾಧವ್ ಇದ್ದರು.

Share Post

Leave a Reply

Your email address will not be published. Required fields are marked *

error: Content is protected !!