ವಿಜೃಂಭಣೆಯ ಚಾಮುಂಡೇಶ್ವರಿ ಶರನ್ನವರಾತ್ರಿ ದಸರಾ ಉತ್ಸವ

ಪಾವಗಡ : ತಾಲ್ಲೂಕಿನ ಕೆ.ಟಿ.ಹಳ್ಳಿ ಗ್ರಾಮದಲ್ಲಿ ಹತ್ತು ದಿನಗಳ ಕಾಲ ನಡೆಯುವ ಚಾಮುಂಡೇಶ್ವರಿಯ ಶರನ್ನವರಾತ್ರಿ ದಸರಾ ಉತ್ಸವವನ್ನು ಗಂಧರ್ವ ಕಾಲ ಯುವಕರ ಸಂಘದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

ಕೆ.ಟಿ.ಹಳ್ಳಿ ಗ್ರಾಮದಲ್ಲಿ ಕಳೆದ ಇಪತ್ನಾಲ್ಕು ವರ್ಷಗಳಿಂದ ಗಂಧರ್ವ ಕಾಲ ಯುವಕರ ಸಂಘ, ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಚಾಮುಂಡೇಶ್ವರಿಯ ಶರನ್ನವರಾತ್ರಿ ದಸರಾ ಉತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಮಹಾಲಯ ಅಮವಾಸ್ಯೆ ನಂತರದ ದಿನದಿಂದ ಪ್ರಾರಂಭವಾಗಿ ವಿಯಯ ದಶಮಿಯವರೆಗೆ ಹತ್ತು ದಿನಗಳ ಕಾಲ ಚಾಮುಂಡೇಶ್ವರಿಗೆ ಪ್ರತಿ ನಿತ್ಯ ಮುಂಜಾನೆ ಮತ್ತು ಸಂಜೆ ವೇಳೆಯಲ್ಲಿ ವಿಶೇಷ ಅಲಂಕಾರಗಳೊಂದಿಗೆ ದೇವಿಗೆ ಪೂಜಾ ಕಾರ್ಯಕ್ರಮಗಳನ್ನು ಸಂಘದ ಸದಸ್ಯರು ಹಾಗು ಗ್ರಾಮಸ್ಥರು ನೆರವೇರಿಸುತ್ತಾರೆ.

ವಿಜಯ ದಶಮಿಯಂದು ಚಾಮುಂಡೇಶ್ವರಿಗೆ ಗ್ರಾಮಸ್ಥರು ಆರತಿ ಉತ್ಸವವನ್ನ ಮಾಡುತ್ತಾರೆ.
ಸಂಜೆ ಚಾಮುಂಡೇಶ್ವರಿ ಮೂರ್ತಿಯನ್ನು ವಿಶೇಷ ಹೂವುಗಳಿಂದ ಅಲಂಕರಿಸಿ ರಥದಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ವಿವಿಧ ವೇಷಭೂಷಣಗಳೊಂದಿಗೆ ಮೆರವಣಿಗೆ ಮಾಡುತ್ತೇವೆ. ನಂತರ ಬನ್ನಿಮಂಟಪಕ್ಕೆ ತೆರಳಿ ಪೂಜೆಯನ್ನ ನೆರವೇರಿಸಿ ಶರನ್ನವರಾತ್ರಿ ದಸರಾ ಹಬ್ಬಕ್ಕೆ ತೆರೆ ಎಳೆಯಲಾಗುವುದು ಎಂದು ಗಂಧರ್ವ ಕಲಾ ಯುವಕರ ಸಂಘದ ಸದಸ್ಯ ರಂಗಸ್ವಾಮಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಾದ ಕೆ ಟಿ ಹಳ್ಳಿ ನಾಗರಾಜು, ಮೆಡಿಕಲ್ ಚಂದ್ರಣ್ಣ, ದೇವಿ ಚಂದ್ರಣ್ಣ, ಅರ್ಚಕ ಹನುಮಂತರಾಯ, ಈರಣ್ಣ, ಬೋರನಾಯಕ, ಶ್ರೀಧರ, ಅನಂತ್ ಮತ್ತಿತರರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!