ರೈತನೊಬ್ಬನ ಮೇಲೆ ದೌರ್ಜನ್ಯ ಆರೋಪ : ವಿವಿಧ ಸಂಘಟನೆಗಳಿಂದ ಖಂಡನೆ

ಕಲಬುರಗಿ : ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕೆರೆಗೋಡ), ಅಹಿಂತ ಚಿಂತಕರ ವೇದಿಕೆ ಜಂಟಿಯಾಗಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದರು.

ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ತಿಪ್ಪಣ್ಣ ಎಂಬುವರ ಪುತ್ರ ಮರೆಣ್ಣ ಎಂಬ ಬಡ ರೈತನ ಮೇಲೆ ಸತತವಾಗಿ ನಾಲ್ಕು ವರ್ಷದಿಂದ ಕೆಲ ಕಿಡಿಗೇಡಿಗಳು ಹಾಗೂ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಇಂದು ಸುದ್ದಿಗೋಷ್ಠಿ ನಡೆಸಲಾಯಿತು.

ಆಗಸ್ಟ್ 20ರಂದು ಸರ್ವೆ ನಂಬರ್ 122ರಲ್ಲು 8 ಎಕರೆ ಹತ್ತಿ ಬೆಳೆಯನ್ನು ನಾಶ ಮಾಡಿದ ಮಾಡಿದ 15 ಜನ ಆರೋಪಿಗಳ ವಿರುದ್ಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಎಪ್.ಐ.ಆರ್ ದಾಖಲಾಗಿದ್ದು, ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿರುವುದಿಲ್ಲ. ಇದು ತುಂಬಾ ವಿಷಾದಕರ ಸಂಗತಿಯಾಗಿದೆ ಎಂದು ಹೇಳಿದರು.

ಬೆಳೆ ಹಾಳು ಮಾಡಲು ಬಳಸಿದ 2 ಟ್ಯ್ರಾಕ್ಟರನ್ನು ಜಪ್ತಿ ಮಾಡಿರುವುದಿಲ್ಲ ಎಂದು ಪೊಲೀಸರ ನಡೆಯನ್ನು ಪ್ರಶ್ನಿಸಿದರು. ಕೂಡಲೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯು ಎಚ್ಚೆತ್ತುಕೊಂಡು ಈ ಬಡ ರೈತ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಆಗ್ರಹಿಸಿದರು

ಒಂದು ವೇಳೆ ರೈತ ಕುಟುಂಬಕ್ಕೆ ಯಾವುದೇ ರೀತಿಯ ತೊಂದರೆ ಜೀವಹಾನಿ ಆದರೆ ಇದಕ್ಕೆ ನೇರವಾಗಿ ಜಿಲ್ಲಾ ಆಡಳಿತ ಮತ್ತು ಪೊಲೀಸ್ ಇಲಾಖೆ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಭೀಮಾಶಂಕರ ಮಾಡ್ಯಾಳ ಅರ್ಜುನ್ ಭದ್ರೆ ಮಲ್ಲಿಕಾರ್ಜುನ ಸಾಯಿಬಣ್ಣ ಜಮಾದಾರ್ ಇನ್ನಿತರರಿದ್ದರು ಭಾಗಿಯಾಗಿದ್ದರು.

Share Post

Leave a Reply

Your email address will not be published. Required fields are marked *

error: Content is protected !!