ಬೆಳೆಯ ನಡುವೆ ಅಕ್ರಮವಾಗಿ ಬೆಳೆದಿದ್ದ 70 ಕೆಜಿ ಗಾಂಜಾ ವಶ

ಹಾಸನ : ತಾಲ್ಲೂಕಿನ ನಿಟ್ಟೂರು ಬಳಿ ಜಮೀನನಲ್ಲಿ ಬೆಳೆಯ ನಡುವೆ ಅಕ್ರಮವಾಗಿ ಬೆಳೆಯಲಾಗಿದ್ದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳುವಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಗಾಂಜಾ ಮಾರಾಟ ಸದ್ದಿಲ್ಲದೇ ನಡೆಯುತ್ತಿದ್ದು, ಇದರ ಹಿಂದೆ ಒಂದು ದೊಡ್ಡಜಾಲವೇ ಕಾರ್ಯಪ್ರವೃತ್ತವಾಗಿರುವ ಆರೋಪಗಳು ಕೇಳಿ ಬಂದಿದ್ದವು.

ನಗರದ ಕಾಲೇಜುಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರಿಗೆ ಗಾಂಜ ಮಾರಾಟ ಮಾಡುವ ಮೂಲಕ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿದ್ದು, ಈ ಗಾಂಜಾ ಎಲ್ಲಿಂದಾ ಸರಬರಾಜಾಗುತ್ತೆ ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿತ್ತು. ಅದಕ್ಕೀಗಾ ಉತ್ತರ ಲಭ್ಯವಾಗಿದೆ.

ಹಾಸನ ತಾಲ್ಲೂಕಿನಲ್ಲೇ ಕದ್ದು ಮುಚ್ಚಿ ಗಾಂಜ ಗಿಡಗಳನ್ನ ಬೆಳೆಯುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆದಿದೆ. ಜಿಲ್ಲಾ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಗಿಡಗಳನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನ ತಾಲ್ಲೂಕಿನ ನಿಟ್ಟೂರು ಸಮೀಪದ ನಾಗೇನಹಳ್ಳಿ ಎಂಬ ಗ್ರಾಮದಲ್ಲಿ ಸುಮಾರು 60 ಕ್ಕೂ ಹೆಚ್ಚು ಗಾಂಜ ಗಿಡಗಳನ್ನು ಯಾರಿಗೂ ಕಾಣದಂತೆ ಆಶೋಕ್ ಎಂಬುವವರಿಂದ ವಾರಕ್ಕೆ ಪಡೆದಿದ್ದ ಜಮೀನಿನಲ್ಲಿ ಪ್ರಕಾಶ್ ಎಂಬಾತ ಕಬ್ಬಿನ ಗದ್ದೆಯ ಮದ್ಯದಲ್ಲಿ ಬೆಳಸಿ ಹಾಸನಕ್ಕೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಬಕಾರಿ ಡಿಸಿ ಗೋಪಾಲ್‌ಕೃಷ್ಣಗೌಡ ನೇತೃತ್ವದ ಸ್ಥಳೀಯ ತಹಸೀಲ್ದಾರ್ ಮೇಘನಾ ಅವರನ್ನೊಳಗೊಂಡ ತಂಡ ಸುಮಾರು 70 ಕೆಜಿಯ ಲಕ್ಷಾಂತರ ರೂ ಮೌಲ್ಯದ ಗಾಂಜಾ ಗಿಡಗಳನ್ನ ವಶಪಡಿಸಿಕೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!