ನೀರು ಪಾಲಾಗಿದ್ದ ಯುವಕರ ಮೃತ ದೇಹಗಳು ಪತ್ತೆ

ಹಾಸನ : ಎರಡು ದಿನಗಳ ಹಿಂದೆ ಆಲೂರು ತಾಲ್ಲೂಕಿನ ಯಗಚಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಮೂವರು ಯುವಕರ ಮೃತ ದೇಹಗಳು ಗುರುವಾರ ಸಂಜೆ ಪತ್ತೆಯಾಗಿವೆ.

ಆಂದ್ರಪ್ರದೇಶದ ವಿಜಯವಾಡ ದಿಂದ ಎನ್.ಡಿ.ಆರ್.ಎಫ್‍ ನ 21, ಅಗ್ನಿ ಶಾಮಕ ದಳದ 12 ಮಂದಿ ನದಿ ಪಾತ್ರದ ಸುಮಾರು 400 ಮೀ. ದೂರದಲ್ಲಿ ರತನ್ ಮೃತದೇಹ ಹಾಗೂ ಹಾಲುವಾಗಿಲು ಒಡ್ಡಿನ ಬಳಿ ಭೀಮರಾಜ್ ಮತ್ತು ಮನು ಮೃತದೇಹಗಳನ್ನು ಹೊರ ತೆಗೆಯಲಾಯಿತು.

ಮೂವರ ಮೃತ ದೇಹಗಳನ್ನು ತಾಲ್ಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ ನಂತರ ಅಂತ್ಯಕ್ರಿಯೆ ನಡೆಸಲಾಯಿತು.

ಮೃತ ಯುವಕರ ಕುಟುಂಬಗಳ ರೋದನೆ ಮುಗಿಲು ಮುಟ್ಟಿತ್ತು. ತಹಸೀಲ್ದಾರ್ ಶೀರೀನ್ ತಾಜ್ ಘಟನೆ ನಡೆದ ಸ್ಥಳದಲ್ಲೇ ಮೊಕ್ಕಾಂ ಹೂಡಿ ಮುಳುಗು ತಜ್ಞರಿಗೆ ಸೂಕ್ತ ಮಾರ್ಗದರ್ಶನ ನೀಡಿದರು. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!