ದುಷ್ಕರ್ಮಿಗಳಿಂದ ಕತ್ತು ಕೊಯ್ದು ವೃದ್ಧನ ಕೊಲೆ

ದಾವಣಗೆರೆ : ಮನೆಯಲ್ಲಿದ್ದ 70 ವರ್ಷದ ವೃದ್ಧನನ್ನು ಹತ್ಯೆಗೈದ ಘಟನೆ ದಾವಣಗೆರೆಯಲ್ಲಿ ನಡೆದಿದ್ದು ದುಷ್ಕರ್ಮಿಗಳು ಕಳೆದ ರಾತ್ರಿ ಮನೆಗೆ ನುಗ್ಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಬಾಲಚಂದ್ರಪ್ಪ ಕೊಲೆಯಾದ ವ್ಯಕ್ತಿ. ಈತ ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. ಸ್ಥಳಕ್ಕೆ ಎಸ್‍ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಹೌದು, ದಾವಣಗೆರೆಯಲ್ಲಿ ಕಳೆದ ರಾತ್ರಿ ವೃದ್ಧನನ್ನ ಕೊಲೆ ಮಾಡಲಾಗಿದೆ. ಎಂಸಿಸಿ ಬಿ ಬ್ಲಾಕ್‍ನ ಸ್ವಿಮ್ಮಿಂಗ್ ಪೂಲ್ ಬಳಿ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಕಳೆದ ರಾತ್ರಿ 2 ಗಂಟೆಗೆ ಕೊಲೆ ಮಾಡಲಾಗಿದೆ.

ಕೊಲೆಯಾದ ಬಾಲಚಂದ್ರಪ್ಪ ಎಪಿಎಂಸಿ ಮಾರುಕಟ್ಟೆಯಲ್ಲಿ ದಲ್ಲಾಳಿಯಾಗಿ ಕೆಲಸ ಮಾಡುತ್ತಿದ್ದ. ಎಂದಿನಂತ ರಾತ್ರಿ ಮನೆಗೆ ಬಂದಿದ್ದಾನೆ. ಈತನ ಪತ್ನಿ ಇತ್ತೀಚೆಗಷ್ಟೇ ಮೃತರಾಗಿದ್ದರು. ಈ ಕಾರಣ ಮನೆಯಲ್ಲಿ ಮಗ ಹರೀಶ್ ವಾಸವಾಗಿದ್ದರು. ಈತನ ಮಗ ನಿನ್ನೆ ರಾತ್ರಿ ಊಟಕ್ಕೆ ಹೊರಗಡೆ ಹೋಗಿದ್ದಾನೆ. ಈ ವೇಳೆ ನೋಡಿಕೊಂಡ ಕೊಲೆಗಡುಕರು ಮನೆಗೆ ನುಗ್ಗಿ ವೃದ್ಧ ಬಾಲಚಂದ್ರಪ್ಪನನ್ನು ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ 1 ಗಂಟೆ ವೇಳೆಗೆ ಮನೆಗೆ ಬಂದ ಹರೀಶ್ ತಂದೆಯನ್ನ ನೋಡಿದ್ದಾನೆ. ಬಳಿಕ ಕೊಲೆಯಾಗಿರುವುದು ಗೊತ್ತಾಗಿದೆ, ಕೂಡಲೇ ಹರೀಶ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸ್ ಅಧಿಕಾರಿಗಳು ರಾತ್ರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.

ಅವರ ಪುತ್ರ ರಾತ್ರಿ ಮನೆಗೆ ಬಂದ ವೇಳೆ ತಂದೆ ಕೊಲೆಯಾದ ಬಗ್ಗೆ ತಿಳಿದಿದೆ. ಆತ ಕೂಗಿಕೊಂಡ ಮೇಲೆ ನಾವು ಸಹ ಅವರ ಮನೆಗೆ ಹೋದ ವೇಳೆ ಕೊಲೆ ನಡೆದಿರುವುದು ಗೊತ್ತಾಯಿತು. ನಂತರ ಮಗ ಹರೀಶ್‍ಗೆ ಸಮಾಧಾನ ಹೇಳಿ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಸ್ಥಳೀಯರು ಹೇಳಿದ್ದಾರೆ

ಯಾರೋ ಪರಿಚಯವಿರುವಂಥವರೇ ಪೂರ್ವ ತಯಾರಿ ನಡೆಸಿ ಕೃತ್ಯ ಎಸಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಯಾವ ವಸ್ತುಗಳು ಸಹ ಕಳ್ಳತನವಾಗದೇ ಇರುವುದು ಕೆಲ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ.

ಈ ಸಂಬಂಧ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು. ತೀವ್ರ ತನಿಖೆ ಕೈಗೊಳ್ಳಲಾಗಿದೆ. ವೃದ್ಧನ ಕೊಲೆಯಿಂದ ನಗರದಲ್ಲಿ ಭಯದ ವಾತಾವರಣ ಸೃಷ್ಟಿಗೊಂಡಿದೆ.

Share Post

Leave a Reply

Your email address will not be published. Required fields are marked *

error: Content is protected !!