ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ಕಿಟ್ ವಿತರಣೆ

ಕೆ.ಆರ್.ಪುರ : ಅಯ್ಯಪ್ಪನಗರ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಂಡೂರಿನ ಬ್ರಿಲಿಯಂಟ್ ನ್ಯಾಷನಲ್ ಸ್ಕೂಲ್ ವತಿಯಿಂದ ನೆರೆ ಸಂತ್ರಸ್ತರಿಗೆ ದಿನ ಬಳಕೆ ವಸ್ತುಗಳನ್ನು ನೀಡಲಾಯಿತು.

ಅಡುಗೆ ಪಾತ್ರೆಗಳು, ಹೊದಿಕೆಗಳು, ಆಹಾರ ಪದಾರ್ಥಗಳು, ಶಾಲಾ ಮಕ್ಕಳಿಗೆ ಬ್ಯಾಗ್ ಮತ್ತು ಪುಸ್ತಕಗಳು ಸೇರಿದಂತೆ ಪ್ರತಿ ಕುಟುಂಬಕ್ಕೆ ನಾಲ್ಕು ಸಾವಿರದ ಐದು ನೂರು ರೂಪಾಯಿ ಬೆಲೆಯ ವಸ್ತುಗಳನ್ನು ಉಚಿತವಾಗಿ ವಿತರಿಸಲಾಯಿತು.

ಒಟ್ಟು ನೂರು ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳ ಕಿಟ್ ನೀಡಲಾಗುತ್ತಿದ್ದು ಸಾಮಗ್ರಿಗಳನ್ನು ಸಂಗ್ರಹಿಸಿ ಸ್ವತಃ ಸಂಘದ ಸದಸ್ಯರೇ ಲಾರಿಯಲ್ಲಿ ಬಾಗಲುಕೋಟೆಯ ಕುಗ್ರಾಮಗಳಿಗೆ ತೆರಳಿದ್ದಾರೆ. ಅವರೇ ವಸ್ತುಗಳನ್ನು ನೇರವಾಗಿ ಸಂತ್ರಸ್ತರಿಗೆ ಹಂಚಲಿದ್ದಾರೆ.

ಇದಕ್ಕೆ ಅಯ್ಯಪ್ಪ ನಗರ ಕ್ಷೇಮಾಭಿವೃದ್ಧಿ ಸಂಘದಿಂದ 3 ಲಕ್ಷ‌ ಸಹಾಯ ಹಸ್ತ ನೀಡಿರುವುದಾಗಿ ಸಂಘದ ಸದಸ್ಯರು ತಿಳಿಸಿದರು.

Share Post

Leave a Reply

Your email address will not be published. Required fields are marked *

error: Content is protected !!