ನೆರೆ ಪರಿಹಾರ ನೀಡದ್ದನ್ನು ಖಂಡಿಸಿ ಸರ್ಕಾರದ ವಿರುದ್ಧ ಪ್ರತಿಭಟನೆ

ಬೆಂಗಳೂರು : ರಾಜ್ಯದಲ್ಲಿ ನೆರೆಯಿಂದ ತತ್ತರಿಸಿದ ಜನರಿಗೆ ಪರಿಹಾರ ನೀಡದೇ ಬಿಜೆಪಿ ಸರ್ಕಾರ ಉಪ ಚುನಾವಣೆಯತ್ತ ಮುಖ ಮಾಡಿದೆ ಎಂದು ಆರೋಪಿಸಿ ಸರ್ಕಾರದ ವಿರುದ್ದ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟ ಸಂಘದಿಂದ ಗೊಣಿ ಚೀಲ ಗಾಂಧಿ ಟೋಪಿ ಧರಿಸಿ ಪಾದಯಾತ್ರೆ ಮುಖಾಂತರ ಪ್ರತಿಭಟನೆ ನಡೆಸಲಾಯಿತು.

ಕೃಷ್ಣರಾಜಪುರ ಸಂತೆ ಮೈದಾನದಿಂದ ಸಂತೆ ಸದಸ್ಯರು ಸೇರಿ ಬೆಂಗಳೂರು ಬಿಜೆಪಿ ಕಚೇರಿಗೆ ಪಾದಯಾತ್ರೆ ಮುಖಾಂತರ ತಲುಪಿ ಡಿಸಿಎಂ ಗೆ ಮನವಿ ಪತ್ರ ಸಲ್ಲಿಸಿದರು‌.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು ನೆರೆ ಸಮಸ್ಯೆಯಿಂದ ತತ್ತರಿಸಿದ ಜನರಿಗೆ ಪರಿಹಾರ ನೀಡದ ಕೇಂದ್ರ ಸರ್ಕಾರ ಕರುನಾಡಿಗೆ ಅನಾಯ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನೆರೆ ಸಂತ್ರಸ್ತರ ಕಷ್ಟವನ್ನು ಅರಿಯದೆ ದೇಶದ ಪ್ರಧಾನಿಯವರು ವಿದೇಶಗಳನ್ನು ಸುತ್ತುತ್ತ ಮಜಾ ಮಾಡುತ್ತಿದ್ದಾರೆ ಈ ಸಂದರ್ಭದಲ್ಲಿ ಉಪಚುನಾವಣೆ ಮಾಡುತ್ತಾ ದೇಶವನ್ನು ಹಾಳು ಮಾಡುತ್ತಿದ್ದಾರೆ ಎಂದು ಆಕ್ರೋಶಿಸಿದರು.

ಬರ ಪರಿಹಾರ ನೀಡದೆ ಕುದುರೆ ವ್ಯಾಪಾರದ‌ ಮೂಲಕ ಅಧಿಕಾರದ ಗದ್ದುಗೆಗೇರಲು ಹಪಹಪಿಸುತ್ತಿರುವ, ಬಿಜೆಪಿಗೆ 25+1 ನೀಡಿ ಕರ್ನಾಟಕ ರಾಜ್ಯ ತಮಗೆ ಬೆಂಬಲವನ್ನು ನೀಡಿದೆ. ಆದರೆ ನೀವು ಸಂತ್ರಸ್ತರಿಗೆ ನೆರವಾಗಲಿಲ್ಲ. ರಾಜ್ಯದಲ್ಲಿ ಸ್ಟಾರ್‌ವಾಡಿಗಳಿಗಂತೂ ಕಡಿಮೆಯಾಗಲಿಲ್ಲ, ಸ್ಟಾರ್‌ವಾರ್‌ಗಳಿಂದ ನಮಗೆ ಯಾವುದೇ ರೀತಿಯ ಸಹಾಯ ವಾಗುತ್ತಿಲ್ಲ ಹಾಗಾಗಿ ನಟರಲ್ಲಿ ಮನವಿ ಮಾಡುತ್ತಿದ್ದೇಚೆ ದಯವಿಟ್ಟು ಇದನ್ನು ಮುಂದುವರಿಸಬೇಡಿ ಎಂದರು.

Share Post

Leave a Reply

Your email address will not be published. Required fields are marked *

error: Content is protected !!