ಕೆಪಿಎಲ್ ಮ್ಯಾಚ್ ಫಿಕ್ಸಿಂಗ್.!

ಬೆಂಗಳೂರು: ಕೆಪಿಎಲ್ ಮ್ಯಾಚ್ ಫಿಕ್ಸಿಂಗ್ ಕೇಸ್ ನಲ್ಲಿ ಎರಡು ಕೆಪಿಎಲ್ ಪ್ಯಾಂಚೈಸಿ ಕೋಚ್​ಗಳಿಗೆ, ಸಿಸಿಬಿ ನೊಟೀಸ್ ನೀಡಿದೆ. ಕೆಪಿಎಲ್​ನಲ್ಲಿ ಬೇರೆ ಬೇರೆ ತಂಡಗಳಿಗೆ ಬ್ಯಾಟಿಂಗ್ ಕೋಚ್ ಆಗಿರುವ ಇಬ್ಬರಿಗೆ, ಇಂದು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ತನಿಖಾಧಿಕಾರಿ ನೊಟೀಸ್ ನೀಡಿದ್ದಾರೆ.

ಸಿಸಿಬಿಯ ಪ್ರಾಥಮಿಕ ತನಿಖೆಯಲ್ಲಿ ಈ ಕೋಚ್ ಗಳು ಬ್ಯಾಟ್ಸ್​ಮನ್ ಗಳನ್ನು ಬುಕ್ಕಿಗಳ ಜೊತೆ ಲಿಂಕ್ ಮಾಡಿಕೊಡುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದ್ದು, ಕೋಚ್​ಗಳ ಕಾಲ್ ಡಿಟೇಲ್ಸ್ ಆಧಾರದ ಮೇಲೆ ಪತ್ತೆ ಮಾಡಲಾಗಿದೆ. ಇನ್ನೂ ಕೋಚ್ ಗಳ ವಿಚಾರಣೆಯ ಬಳಿಕ ಅರೋಪಿಗಳ ಪಾತ್ರ ಬಯಲಾಗಲಿದೆ. ಇನ್ನೂ ಈ ಪ್ರಕರಣವನ್ನ ಕೈಗೆತ್ತಿಕೊಂಡಿರುವ ಸಿಸಿಬಿಗೆ, ಕೆಪಿಎಲ್ ಟೂರ್ನಿಯಲ್ಲಿ ಎರಡು ಪ್ರತ್ಯೇಕ ಫಿಕ್ಸಿಂಗ್ ಟೀಂಗಳು ಪ್ಲೇಯರ್​ಗಳನ್ನ ಬುಕ್ ಮಾಡಿರೋದು ಗೊತ್ತಾಗಿದೆ. ಈ ನಿಟ್ಟಿನಲ್ಲಿ ಕಳೆದ ಒಂದು ತಿಂಗಳಿನಿಂದ ಸಿಸಿಬಿ ತನಿಖೆ ನಡೆಸುತ್ತಿದ್ದು, ಇನ್ನೂ ದೊಡ್ಡ ದೊಡ್ಡ ಕೈಗಳು ಇದರ ಹಿಂದೆ ಇದೆ ಅನ್ನೋದು ಬಹಿರಂಗವಾಗಲಿದೆ.

Share Post

Leave a Reply

Your email address will not be published. Required fields are marked *

error: Content is protected !!