ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು ರದ್ದು

ಮೈಸೂರು : ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಪ್ರತಿದಿನದ ರೈಲನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 6ರ ತನಕ ರೈಲು ಸಂಚಾರವಿಲ್ಲ ಎಂದು ಪ್ರಕಟಣೆ ಹೇಳಿದೆ. ನೈಋತ್ಯ ರೈಲ್ವೆ ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ.

ಸೆಂಟ್ರಲ್ ರೈಲ್ವೆಯ ಸೊಲ್ಲಾಪುರ ವಿಭಾಗದಲ್ಲಿ ದ್ವಿಪಥ ಹಳಿ ಜೋಡಣೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸೊಲ್ಲಾಪುರ-ವಾಡಿ ವಿಭಾಗದ ಕಲಬುರಗಿ-ಸವಲ್ಗಿ ರೈಲ್ವೆ ನಿಲ್ದಾಣಗಳ ನಡುವೆ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ.

ಈ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದು ಎಂದು ಬಸವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ಸಮಯ ಬದಲಾವಣೆ : ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್-ವಾಸ್ಕೋಡಗಾಮ ಎಕ್ಸ್‌ಪ್ರೆಸ್ ರೈಲು ಸಂಚಾರದ ಸಮಯ ಇಂದಿನಿಂದ ಬದಲಾವಣೆಯಾಗಿದೆ. ವಾಸ್ಕೋಡಗಾಮಾದಿಂದ ಮಧ್ಯಾಹ್ನ 3.10ರ ಬದಲು 3 ಗಂಟೆಗೆ ರೈಲು ಹೊರಡಲಿದೆ. ವಾಸ್ಕೋಡಗಾಮಾ ನಿಲ್ದಾಣಕ್ಕೆ ಬೆಳಗ್ಗೆ 6.30ರ ಬದಲು 6.45ಕ್ಕೆ ತಲುಪಲಿದೆ.

Share Post

Leave a Reply

Your email address will not be published. Required fields are marked *

error: Content is protected !!