ಐಎಂಎ ವಂಚನೆ ಪ್ರಕರಣ : ಸೆ.24ರ ವರಗೆ ಮನ್ಸೂರ್, ನವೀದ್ ಸಿಬಿಐ ಕಸ್ಟಡಿಗೆ, ಮತ್ತಿಬ್ಬರಿಗೆ ನ್ಯಾಯಾಂಗ ಬಂಧನ

ಬೆಂಗಳೂರು : ರಾಜ್ಯವನ್ನೇ ತಲ್ಲಣಗೊಳಿಸಿದ್ದ ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಅವರನ್ನು ಸಿಬಿಐ ಅಧಿಕಾರಿಗಳ ಮನವಿ ಪುರಸ್ಕರಿರುವ ಕೋರ್ಟ್ ಮನ್ಸೂರ್ ಹಾಗೂ ನವೀದ್ ಅವರನ್ನು ಸಿಬಿಐ ವಶಕ್ಕೆ ನೀಡಿದ್ದರೇ, ಮತ್ತಿಬ್ಬರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದೆ.

ಇಂದು ಐಎಂಎ ಪ್ರಕರಣದ ಆರೋಪಿ ಮನ್ಸೂರ್ ಖಾನ್ ಅವರ ನ್ಯಾಯಾಂಗ ಬಂಧನ ಅಂತ್ಯಗೊಂಡಿತ್ತು. ಹೀಗಾಗಿ ಇಂದು ಮನ್ಸೂರ್ ಖಾನ್ ಸೇರಿ ನಾಲ್ವರನ್ನು ನ್ಯಾಯಾಲಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ಸಿಬಿಐ ಪರ ವಕೀಲ ಸುದರ್ಶನ್ ಅವರು ನ್ಯಾಯಾಲಯಕ್ಕೆ ವಿಚಾರಣೆ ಬಾಕಿ ಇರುವುದರಿಂದ ಮನ್ಸೂರ್ ಹಾಗೂ ನಮೀದ್ ಅವರನ್ನು ಸಿಬಿಐ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ನ್ಯಾಯಾಲಯ, ಮನ್ಸೂರ್ ಮತ್ತು ನವೀದ್ ಅವರನ್ನು ಸೆ.24ರ ವರೆಗೆ ಸಿಬಿಐ ವಶಕ್ಕೆ ನೀಡಿದೆ.

ಇನ್ನೂ ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ಮತ್ತಿಬ್ಬರು ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಇದಲ್ಲದೇ ಕಳೆದ ನಿನ್ನೆಯಷ್ಟೇ ಸಿಬಿಐ ಮತ್ತೊಂದು ಎಫ್ ಐ ಆರ್ ದಾಖಲಿಸಿದ್ದು, ಇತರೆ ಆರೋಪಿಗಳ ಹೆಸರನ್ನು ಎಫ್ ಐ ಆರ್ ನಲ್ಲಿ ದಾಖಲಿಸಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಮನ್ಸೂರ್ ಮತ್ತು ನವೀದ್ ಅವರನ್ನು ನ್ಯಾಯಾಲಯದ ಆದೇಶದ ಅನುಸಾರ ತಮ್ಮ ವಶಕ್ಕೆ ಪಡೆದಿದೆ.

Share Post

Leave a Reply

Your email address will not be published. Required fields are marked *

error: Content is protected !!