ಬಿಜೆಪಿ ನಾಯಕರು ಪುಕ್ಕಲರು, ಬಿಎಸ್‌ವೈ ದುರ್ಬಲ ಸಿಎಂ – ಮಾಜಿ ಸಿಎಂ ಸಿದ್ದು ವ್ಯಂಗ

ಮಂಡ್ಯ : ರಾಜ್ಯದಲ್ಲಿ ಪ್ರವಾಹ ಬಂದು 45 ದಿನ ಕಳೆದರೂ ಒಂದೇ ಒಂದು ರೂ ನೆರವನ್ನು ಪ್ರಧಾನಿ ಮೋದಿ ಕರ್ನಾಟಕಕ್ಕೆ ಕೊಟ್ಟಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಮಂಡ್ಯದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದು, ಯಡಿಯೂರಪ್ಪ ಸರ್ಕಾರ 38 ಸಾವಿರ ಕೋಟಿ ನೆರವು ನೀಡಬೇಕೆಂದು ಮನವಿ ಮಾಡಿದ್ರೆ ಕೇಂದ್ರ ಆ ಮನವಿಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ಹೇಳಿದರು‌.

ಕರ್ನಾಟಕದಲ್ಲಿ 25 ಜನ ಬಿಜೆಪಿ ಎಂಪಿಗಳು ಗೆದ್ರು ಜವಾಬ್ದಾರಿ ಇಲ್ಲದ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಿ ಭೀಕರ ಬರಗಾಲ ಜೊತೆ ಪ್ರವಾಹ ಸಹ ಬಂದಿದೆ. ಬಿಜೆಪಿ ನಾಯಕರು ಪುಕ್ಕಲರು. ಅವರಿಗೆ ಹೈಕಮಾಂಡ್ ಬಳಿ ಕೇಳುವ ಧೈರ್ಯ ಇಲ್ಲ. ಯಡಿಯೂರಪ್ಪ ವೀಕೆಸ್ಟ್ ಸಿಎಂ, ಮಂಡ್ಯ ಜಿಲ್ಲೆಯವರಾಗಿ ಗಡಸು ಹೊಂದಿಲ್ಲ. ಅವ್ರು ಬರಿ ಮಂಡ್ಯದಲ್ಲಿ ಮಾತ್ರ ಹುಟ್ಟಿದ್ದು. ಬೆಳೆದಿದ್ದಲ್ಲ ಬೇರೆ ಕಡೆ ಆದ್ರಿಂದ ಅವರಿಗೆ ಗತ್ತು ಅನ್ನೋದು ಬಂದಿಲ್ಲ ಎಂದು ವ್ಯಂಗವಾಡಿದರು.

ಜನವಿರೋಧಿ ಕೇಂದ್ರ ಸರ್ಕಾರವಾಗಿದ್ದು, ರೈತರಿಗೆ ನೆರವು ನೀಡಲು ವಿಫಲವಾಗಿದೆ. ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.

ಉಪಚುನಾವಣೆಯಲ್ಲಿ ಮೈತ್ರಿ ವಿಚಾರದ ಬಗ್ಗೆ ಯಾಕೆ ಪ್ರಶ್ನೆ ಮಾಡ್ತೀರಿ ಎಂದ ಅವರು, ಅನರ್ಹ ಶಾಸಕರ ವಿಚಾರ ಕೋರ್ಟ್‌ನಲ್ಲಿರುವುದರಿಂದ ಆಪರೇಷನ್ ಕಮಲ ನಿಂತಿದೆ. ಜೆಡಿಎಸ್ ಪಕ್ಷದ ಶಾಸಕರು ಬಿಜೆಪಿ ಹೋಗುವ ಬಗ್ಗೆ ಅವರ ಪಕ್ಷದರವನ್ನೇ ಕೇಳಬೇಕು. ಡಿಕೆಶಿ ಅವ್ರನ್ನ ಭೇಟಿ ಮಾಡಲು ಹೋಗಿದ್ದೆ. ಇಡಿ ಅವ್ರು ನಮ್ಮನ್ನ ಬಿಡಲಿಲ್ಲ. ಡಿಕೆಶಿ ಬಂಧನ ಖಂಡಿಸಿ ನಡೆದ ಪ್ರತಿಭಟನೆಗೆ ಕುಮಾರಸ್ವಾಮಿ ಹೋಗದ್ದಕ್ಕೆ ನೋ ರಿಯಾಕ್ಷನ್ ಎಂದರು.

Share Post

Leave a Reply

Your email address will not be published. Required fields are marked *

error: Content is protected !!