ಗೋದಾವರಿ ನದಿ ಬೋಟ್ ಮುಳಗಡೆ ದುರಂತ : 58 ಸಾವು

ಆಂದ್ರಪ್ರದೇಶ : ಗೋದಾವರಿ ನದಿಯಲ್ಲಿ ದೋಣಿ ಮುಳುಗಿದ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 58 ಕ್ಕೆ ಏರಿದೆ.

ಗಂಡಿ ಪೊಚಮ್ಮ ಆಲಯಂ ನಿಂದ ಪಾಪಿಕೊಂಡಲಕು ಪ್ರವಾಸಕ್ಕೆ ಹೋಗುವಾಗ ದೇವಿಪಟ್ನಂ ಮಂಡಲಂ ಮಂಟೂರು – ಕಚ್ಚುಲೂರು ಬಳಿ ಹರಿಯುವ ಪೂರ್ವ ಗೋದಾವರಿ ನದಿಯಲ್ಲಿ ಆಕಸ್ಮಿಕವಾಗಿ ಬೋಟ್ ಮುಗುಚಿದ ಘಟನೆ ಮಧ್ಯಾಹ್ನ ನಡೆದಿತ್ತು.

ಈ ಘಟನೆ ವೇಳೆ ಲಾಂಚ್ ನಲ್ಲಿ 72 ಜನರು ಪ್ರಯಾಣ ಮಾಡುತ್ತಿದ್ದರು ಎನ್ನಲಾಗಿದೆ. ಬೋಟ್‌ನ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ತುಂಬಿಕೊಂಡಿದ್ದೇ ದೋಣಿ ಮುಳುಗಲು ಕಾರಣವಾಯಿತು ಎಂಬುದು ಸ್ಥಳೀಯರ ಮಾತಾಗಿದೆ.

ಬೋಟ್‌ನಲ್ಲಿದ್ದ 24 ಜನರು ಬದುಕುಳಿದಿದ್ದು ಉಳಿದವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದುವರೆಗೂ ಹಲವು ಮೃತ ದೇಹಗಳು ಸಿಕ್ಕಿದೆ. ಉಳಿದವರಿಗೆ ಶೋಧ ಕಾರ್ಯ ಮುಂದುವರೆದಿದ್ದು, ಘಟನೆ ನಡೆದ ಸ್ಥಳದಿಂದ ಮೂರು ಕಿಲೋಮೀಟರ್ ದೂರದಲ್ಲಿ ಮೀನುಗಾರರು ಬಲೆ ಹಾಕಿದ್ದರಿಂದ ಬಲೆಯಲ್ಲಿ ಸಿಲುಕಿ ಹಲವು ಮೃತ ದೇಹಗಳು ಸಿಕ್ಕಿವೆ. ಕತ್ತಲು ಕವಿದ ಹಿನ್ನಲೆ‌ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿದ್ದು ಮುಂಜಾನೆ ಪುನಾರಂಭ ಮಾಡಲಾಗುತ್ತದೆ.

ಇಂದು ನಡೆದ ಘಟನಾ‌ ಸ್ಥಳದಲ್ಲಿ ಈ ಹಿಂದೆಯೂ ಸಹ ಹಲವು ಘಟನೆಗಳು ನಡೆದಿವೆ. ಹಿಂದೆಯೂ ಬೋಟ್‌ಗಳು ಮುಳುಗಿ ಹಲವು ಜನರು ಮೃತ ಪಟ್ಟಿದ್ದರೂ ಬೋಟ್ ಮಾಲೀಕರು ಎಚ್ಚರವಹಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಹಣದಾಸೆಗೆ ಬೋಟ್ ಮಾಲೀಕರು ಹೆಚ್ಚೆಚ್ಚು ಪ್ರಯಾಣಿಕರನ್ನು ಕರೆದು ಹೋಗುತ್ತಾರೆ ಎನ್ನಲಾಗಿದೆ.

1960 ರಲ್ಲಿ ಉದಯಭಾಸ್ಕರ್ ಹೆಸರಿನ ಬೋಟ್ ಇದೇ ಸ್ಥಳದಲ್ಲಿ ಮುಳಗಿ 60 ಜನರ ಸಾವನ್ನಪ್ಪಿದರು. ಮತ್ತೆ ಝಾನ್ಸಿ ರಾಣಿ ಎಂಬ ಹೆಸರಿನ‌ ಬೋಟ್ ಮುಳುಗಿ 8 ಜನರ‌ ಸಾವಿಗೀಡಾಗಿದ್ದರು. ಕಚೂಲೂರು ಮಂದಂ ಪ್ರದೇಶದಲ್ಲಿ ಬೊಟ್ ಮುಗಿಚಿದೆ. ಹೀಗೆ ಮೂರ್ನಾಲ್ಕು ಅವಘಡಗಳು ನಡೆದಿದ್ದರು ಯಾವುದೇ ಕ್ರಮ ತೆಗೆದು ಕೊಂಡಿಲ್ಲದಿರುವುದು ದುರ್ಘಟನೆಗಳು ಮರುಕಳಿಸಲು ಕಾರಣವಾಗಿವೆ ಎಂದು ಹೇಳಲಾಗುತ್ತಿದೆ.

ಅವಘಡ ನಡೆದ ತಕ್ಷಣ ಸ್ಥಳಕ್ಕೆ ಎನ್‌ಡಿಆರ್‌ಎಫ್ ಸಿಬ್ಬಂದಿ ಆಗಮಿಸಿ ರಕ್ಷಣಾ ಕಾರ್ಯಚರಣೆ ನಡೆಸುತ್ತಿದ್ದಾರೆ. ಮೃತ ದೇಹಗಳಿಗಾಗಿ ನಾಳೆಯೂ ಶೋಧ‌ ಕಾರ್ಯ ಮುಂದುವರೆಯಲಿದೆ. ಸಹಾಯಕ್ಕೆ ಹೆಲಿಕಾಪ್ಟರ್ ಬಳಕೆ‌ ಮಾಡಿಕೊಳ್ಳಲಾಗಿದೆ.

  • ಲಕ್ಷ್ಮೀಪತಿ ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!