ಗಣಿಗಾರಿಕೆ ವಿರುದ್ಧ ಸಿಡಿದೆದ್ದ ಪವನ್ ಕಲ್ಯಾಣ್, ವಿಜಯ್ ದೇವರಕೊಂಡ..!

ಆಂಧ್ರಪ್ರದೇಶದ ಪಶ್ಚಿಮಘಟ್ಟದಲ್ಲಿರುವ ನಲ್ಲಮಲ ಅರಣ್ಯ ಪ್ರದೇಶದಲ್ಲಿ ಯುರೇನಿಯಂ ನಿಕ್ಷೇಪಕ್ಕಾಗಿ ಕೈಗೊಂಡಿರುವ ಗಣಿಗಾರಿಕೆಗೆ ಭಾರೀ ವಿರೋಧ ಕೇಳಿ ಬಂದಿದೆ. ಗಣಿಗಾರಿಕೆ ಹೆಸರಲ್ಲಿ ಅರಣ್ಯ ಪ್ರದೇಶವನ್ನು ಲೂಟಿ ಮಾಡಲಾಗುತ್ತದೆ ಎನ್ನುವ ಆರೋಪ ಕೇಳಿಬಂದಿದ್ದು, ಪರಿಸರವಾದಿಗಳು, ಸಿನಿಮಾ ತಾರೆಯರು ಸೇರಿದಂತೆ ಜನಸಾಮಾನ್ಯರು ಕೂಡ ಸರ್ಕಾರದ ಈ ಯೋಜನೆಗೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ನಲ್ಲಮಲ ಅರಣ್ಯವನ್ನು ಉಳಿಸಲು #SaveNallamala ಅನ್ನೋ ಆಂದೋಲನವೇ ಸೃಷ್ಟಿಯಾಗಿದೆ. ಈ ಹಿಂದೆ ನಟ, ರಾಜಕಾರಣಿ ಪವನ್​ ಕಲ್ಯಾಣ್​ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು, ಇದೀಗ ಮತ್ತೋರ್ವ ನಟ ವಿಜಯ್​ ದೇವರಕೊಂಡ ಸೇವ್​ ನಲ್ಲಮಲ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ವಿಜಯ್​,

https://twitter.com/TheDeverakonda/status/1172032810162380800/photo/1?ref_src=twsrc%5Etfw%7Ctwcamp%5Etweetembed%7Ctwterm%5E1172032810162380800&ref_url=https%3A%2F%2Fm.dailyhunt.in%2Fnews%2Findia%2Fkannada%2Fnews%2Bfirst%2Blive-epaper-firnew%2Fganigaarike%2Bviruddha%2Bsidideddha%2Bpavan%2Bkalyaan%2Bvijay%2Bdevarakonda-newsid-136180484

‘20,000 ಸಾವಿರ ಎಕರೆಯ ನಲ್ಲಮಲ ಅರಣ್ಯ ಪ್ರದೇಶ ಅಪಾಯದಲ್ಲಿದೆ. ಈಗಾಗಲೇ ಕೆರೆಗಳನ್ನು ನಾಶ ಮಾಡಿದ್ದೇವೆ. ಕೆಲವು ರಾಜ್ಯಗಳು ಪ್ರವಾಹ ಪೀಡಿತವಾಗಿವೆ. ಕೆಲವು ರಾಜ್ಯಗಳಲ್ಲಿ ಭೀಕರ ಬರಗಾಲ. ದೈನಂದಿನ ಚಟುವಟಿಕೆಗಳಿಗೂ ಸಹ ನೀರು ಸಿಗದಂತಹ ಪರಿಸ್ಥಿತಿ ಇದೆ. ಈಗಿನ ಅಲ್ಪಸ್ವಲ್ಪ ಅವಕಾಶಗಳನ್ನು ಸಹ ನಾಶ ಮಾಡುತ್ತಿದ್ದೇವೆ. ದಟ್ಟವಾಗಿರುವ ಹಚ್ಚ ಹಸುರಿನ ನಲ್ಲಮಲ ಅರಣ್ಯವನ್ನು ನಾಶ ಮಾಡಲು ಸಿದ್ಧವಾಗುತ್ತಿದ್ದೇವೆ. ನಿಮಗೆ ಮರುಬಳಕೆಯ ಸಂಪನ್ಮೂಲ ಅಲ್ಲದ ಯುರೇನಿಯಂ ಬೇಕೆಂದರೆ ಖರೀದಿಸಿ.

ಯುರೇನಿಯಂ ಖರೀದಿಸಬಹುದು..? ಆದರೆ ನಲ್ಲಮಲ ಕಾಡುಗಳನ್ನು ಕೊಳ್ಳಲು ಸಾಧ್ಯವೇ? ಒಂದು ವೇಳೆ ನಾವು ಕೊಳ್ಳಲು ಸಾಧ್ಯವಾಗದಿದ್ದರೆ ಸೌರ ಶಕ್ತಿಯನ್ನು ಪ್ರೋತ್ಸಾಹಿಸಿ. ಪ್ರತಿಯೊಬ್ಬರ ಛಾವಣಿ ಮೇಲೆ ಸೋಲಾರ್ ಪ್ಯಾನಲ್ಸ್ ವ್ಯವಸ್ಥೆಯನ್ನು ಕಡ್ಡಾಯ ಮಾಡಿ. ಉಸಿರಾಡಲು ಗಾಳಿ, ಕುಡಿಯಲು ನೀರು ಇಲ್ಲದಿದ್ದರೆ ಯುರೇನಿಯಂ, ಕರೆಂಟ್ ಇದ್ದು ಏನು ಪ್ರಯೋಜನ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

ಇನ್ನು ನಟ, ರಾಜಕಾರಣಿ ಪವನ್​ ಕಲ್ಯಾಣ್​, ನಲ್ಲಮಲ ಅರಣ್ಯದಲ್ಲಿ ಯುರೇನಿಯಂ ಗಣಿಗಾರಿಕೆ ಮಾಡೋದ್ರಿಂದ ಪರಿಸರದ ಮೇಲೆ ಹಾನಿಯಾಗೋದು ಮಾತ್ರವಲ್ಲದೇ ಜೀವವೈವಿಧ್ಯತೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದ್ದಾರೆ. ಅಲ್ಲದೇ ಯುರೇನಿಯಂ ಗಣಿಗಾರಿಕೆಯಿಂದ ಜನರ ಉಸಿರಾಟಕ್ಕೆ ತೊಂದರೆಯಾಗುತ್ತದೆ. ಅಲ್ಲದೇ ಜನರು ಯುರೇನಿಯಂ ತ್ಯಾಜ್ಯದಿಂದ ಕಲುಷಿತವಾದ ನೀರನ್ನು ಕುಡಿದ್ರೆ ಶ್ವಾಸಕೋಶದ ಕ್ಯಾನ್ಸರ್ ಮತ್ತು ಮೂತ್ರಪಿಂಡದ ಸಮಸ್ಯೆಯಿಂದ ಬಳಲಬೇಕಾಗುತ್ತೆ ಅನ್ನೋ ಆತಂಕ ವ್ಯಕ್ತಪಡಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!