ಸೇವಾ ಮನೋಭಾವ ಇರುವ ಯಾರೂ ಬಡವರಲ್ಲ

ಶಿಡ್ಲಘಟ್ಟ : ಮನುಷ್ಯನಲ್ಲಿ ಎಲ್ಲಿಯವರಿಗೆ ಸೇವಾ ಮನೋಭಾವ ಇರುತ್ತದೆ ಅಲ್ಲಿಯವರಿಗೆ ಯಾರು ಬಡವರಲ್ಲ ಎಲ್ಲರೂ ಶ್ರೀಮಂತರೆ ಎಂದು ವರೆಜಾನ್ ಮೀಡಿಯಾ ಅದ್ಯಕ್ಷ ಪ್ರೀತಮ್ ಅಭಿಪ್ರಾಯಪಟ್ಟರು.

ವರೆಜಾನ್ ಮೀಡಿಯಾ ಮತ್ತು ಮಾನವನ ಅಗತ್ಯಗಳ ಸಂಶೋಧನಾ ಸಂಸ್ಥೆ ವತಿಯಿಂದ “ದಿ ಗ್ರೇಟ್ ಬಿಲ್ಡ್” ಅಡಿಯಲ್ಲಿ ನಗರದ ಆಶಾಕಿರಣ ಅಂಧ ಮಕ್ಕಳ ಶಾಲೆಯ 35ಕ್ಕೂ ಹೆಚ್ಚು ಮಕ್ಕಳಿಗೆ ಟ್ರಂಕ್‌, ಹೊದಿಕೆ, ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ವೇಳೆ ಅವರು ಮಾತನಾಡಿ ನಮ್ಮ ಸಂಸ್ಥೆ ಒಂದು ಅಂಗ ಸಂಸ್ಥೆಯಾಗಿದ್ದು ಆನ್ ಲೈನ್ ವ್ಯಾಪಾರಕ್ಕಾಗಿ ನ್ಯೂಯಾರ್ಕ್, ಮತ್ತು ಕ್ಯಾಲಿಫೋರ್ನಿಯಾದ ಸನ್ನಿವ್ಯಾಲಿಯಲ್ಲಿಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಇದುವರಿಗೂ 13 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಿದ್ದು ಈಗ ದಿ ಗ್ರೇಟ್ ಬಿಲ್ಡ್ ಎಂಬ ಸಂಸ್ತೆಯಡಿಯಲ್ಲಿ ಬಡ ಮಕ್ಕಳಿಗೆ ಓದಿಗೆ ಅವಶ್ಯವಿರುವ ವಸ್ತುಗಳನ್ನು ನೀಡುವುದರ ಮೂಲಕ ನಮ್ಮ ಅಳಿಲು ಸೇವೆ ಮಾಡುತ್ತಿದ್ದೇವೆಂದರು.

ನಮ್ಮ ಸಂಸ್ಥೆ 1995 ರಲ್ಲಿ ಸ್ಥಾಪನೆಯಾಗಿದ್ದು ಅಂದಿನಿಂದ ಇಂದಿನವರಿಗೂ ಬೇಸಿಗೆ ಶಿಬಿರ, ರಾಷ್ಟ್ರೀಯ ರೈತ ದಿನಾಚರಣೆ, ರಾಜ್ಯ ಲಾಂಛನ ಗೀತೆ, ಕರ್ನಾಟಕ ಲಾಂಛನ ನಿರ್ಮಾಣ, ಇಂತಹ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜ ವಿಜ್ಞಾನಿ ರವೀಂದ್ರನಾಥ್, ಆಶಾಕಿರಣ ಸಂಸ್ಥೆ ವ್ಯವಸ್ಥಾಪಕ ಗೋಪಾಲಯ್ಯ, ಕಸಾಪ ತಾಲ್ಲೂಕು ಅದ್ಯಕ್ಷ ತ್ಯಾಗರಾಜು, ಎಂ.ಆರ್,ಡ್ಲೂ, ರಾಮಚಂದ್ರಪ್ಪ, ವರೆಜಾನ್ ಮೀಡಿಯಾ ಸಂಸ್ಥೆಯ ಸದಸ್ಯರು ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!