ಸರ್ಕಾರಿ ಜಮೀನುಗಳಿಗೆ ಅಕ್ರಮ ಖಾತೆ : ಅಧಿಕಾರಿಗಳು, ರಾಜಕಾರಣಿಗಳು ಶಾಮೀಲು

ಕಲಬುರಗಿ : ನೂತನ ತಾಲ್ಲೂಕು ರಚನೆಯಾದ ಯಡ್ರಾಮಿಯಲ್ಲಿ ನೂರಾರು ಕೋಟಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಹಾಗೂ ತಮ್ಮ ಅಧಿಕಾರದ ಪ್ರಭಾವದಿಂದಾಗಿ ಸರಕಾರಿ ಜಮೀನನ್ನು ನಮೂನೆ 9 ಮತ್ತು 11 ಕ್ಕೆ ಪರಿವರ್ತನೆ ಮಾಡಿಕೊಡುತ್ತಿದ್ದಾರೆ ಎಂದು ಆಂದೋಲನ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಆರೋಪಿಸಿದರು.

ಅವರು ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ನಮೂನೆ 9 ಮತ್ತು 11 ಕ್ಕೆ ಪರಿವರ್ತಿಸಿರುವುದು ಕಾನೂನುಬಾಹಿರವಾಗಿದೆ. ಜಿಲ್ಲಾಧಿಕಾರಿಗಳು ಸರಕಾರದ ಪರವಾನಿಗೆ ಪಡೆಯಬೇಕು. ಆದರೆ ಇದಾವುದನ್ನೂ ಮಾಡದೆ ಪಿಡಿಒಗಳು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

50 ಕೋಟಿ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಕೆಲವು ಖಾಸಗಿ ಜನರ ಹೆಸರಿಗೆ ಅಕ್ರಮವಾಗಿ ನೀಡಿರುತ್ತಾರೆ. ಈ ಕುರಿತು ಶ್ರೀರಾಮ ಸೇನೆಯವರು ಅಧಿಕಾರಿಗಳಿಗೆ ನಾಲ್ಕೈದು ಜನಗಳ ಮೇಲೆ ಜಮೀನಿನ ಒತ್ತುವರಿ ಮಾಡಿರುವ ಆರೋಪದ ಮೇಲೆ ಅರ್ಜಿಯನ್ನು ನೀಡಿರುತ್ತಾರೆ. 874 ಚದುರಡಿ ಸರಕಾರಿ ಜಮಿನನ್ನು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡು ಸರ್ಕಾರಿ ಜಮೀನನ್ನು ಮಾರಾಟ ಮಾಡಿ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು

ಈ ಕುರಿತು ಕೇಸ್ ದಾಖಲಾಗಿ ಹನ್ನೆರಡು ದಿನಗಳಾದರೂ ಕೂಡ ಪೋಲಿಸರು ಯಾರನ್ನು ಬಂಧಿಸಿರುವುದಿಲ್ಲ. ತಾಲ್ಲೂಕಿನ ಸಂಪನ್ಮೂಲ ಕೊಳ್ಳೆ ಹೊಡೆದಿದ್ದಾರೆ ಎಂದು ಶಾಸಕ ಅಜೇಯ ಸಿಂಗ್ ಅವರ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು. ವಿರೋಧ ಪಕ್ಷದವರು ಕೂಡ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ಅವರು ಎಲ್ಲಾ ರಾಜಕಾರಣಿಗಳು ಸೇರಿ ತಾಲೂಕಿನ ಸಂಪನ್ಮೂಲವನ್ನು ಲೂಟಿ ಮಾಡಿರುತ್ತಾರೆ ಎಂದು ಕಿಡಿಕಾರಿದರು. ಈ ಕುರಿತು ಶ್ರೀ ರಾಮ್ ಸೇನೆ ಯವರು ದೂರುಕೊಟ್ಟರೆ ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಿದ್ದಾರೆ ಎಂದು ಪೋಲಿಸರ ವಿರುದ್ಧ ಹರಿಹಾಯ್ದರು. ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಅಕ್ರಮಗಳನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

Share Post

Leave a Reply

Your email address will not be published. Required fields are marked *

error: Content is protected !!