ವೀಕ್ಷಕರಿಗೆ ಧನ್ಯವಾದಗಳು – ಸಹಕಾರ ಹೀಗೆ ಇರಲಿ ಎಂದು ಬಯಸುವ ದಿ ನ್ಯೂಸ್24 ಕನ್ನಡ.

  ದಿ ನ್ಯೂಸ್24 ಕನ್ನಡ ವೆಬ್ ಚಾನಲ್‌ ಕಳೆದ ಎಂಟು ತಿಂಗಳುಗಳ ಹಿಂದೆಯಷ್ಟೆ ಪ್ರಾರಂಭವಾಗಿದೆ. ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಜನರನ್ನು ತಲುಪಿದ್ದು ಎಲ್ಲಾ ವೀಕ್ಷಕರಿಗೆ ಸಂಸ್ಥೆಯು ಧನ್ಯವಾದ ಅರ್ಪಿಸುತ್ತದೆ.

ದಿ ನ್ಯೂಸ್24 ಕನ್ನಡ ವೆಬ್ ಚಾನಲ್ ನ ಫೇಸ್‌ಬುಕ್ ಪೇಜ್ ಇತ್ತೀಚೆಗಷ್ಟೇ ಕಾರ್ಯಾರಂಭ ಮಾಡಿತ್ತು. ತನ್ನ ನಿಷ್ಪಕ್ಷಪಾತ ಸುದ್ದಿಗಳಿಂದ ಬೆರಳೆಣಿಕೆಯಷ್ಟು ದಿನಗಳಲ್ಲೇ ಐದು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದು ಜನರ ವಿಶ್ವಾಸಕ್ಕೆ ಈ ಮೂಲಕ ಸಂಸ್ಥೆ  ಗೌರವಿಸುತ್ತಿದೆ.

 ಇದರೊಂದಿಗೆ ದಿ ನ್ಯೂಸ್24 ಕನ್ನಡ ಚಾನಲ್ ನ ಒಂದು ಸುದ್ದಿಯನ್ನು ಫೇಸ್‌ಬುಕ್‌ನಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನಮ್ಮ ಪೇಜ್ ಅಷ್ಟೇ ಅಲ್ಲದೇ ಅನ್ಯ ಪೇಜ್‌ಗಳಲ್ಲೂ ನಮ್ಮ ಸುದ್ದಿಯನ್ನು ಲಕ್ಷ ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಈ ನಿಮ್ಮ ಸಹಕಾರಕ್ಕೆ ಸಂಸ್ಥೆ ಋಣಿಯಾಗಿರುತ್ತದೆ.

ದಿ ನ್ಯೂಸ್24 ಕನ್ನಡ ಸಂಸ್ಥೆಯು ಜನೋಪಯೋಗಿ ಸುದ್ದಿಗಳ ಕಡೆಯೇ ಹೆಚ್ಚು ಗಮನ ಹರಿಸುತ್ತದೆ. ಹಾಗಾಗಿ ನಿಮ್ಮ ಸಲಹೆ ಸಹಕಾರ ನಮಗೆ ಅಮೂಲ್ಯವಾಗಿದ್ದು ಹೀಗೆಯೇ ಸಹಕರಿಸುತ್ತಿರಿ ಎಂದು ಸಂಸ್ಥೆ ಮನವಿ ಮಾಡುತ್ತದೆ.

ವೆಂಕಟೇಶ್ ರಾಜಾನುಕುಂಟೆ (ವ್ಯವಸ್ಥಾಪಕ ನಿರ್ದೇಶಕರು) ದಿ ನ್ಯೂಸ್24 ಕನ್ನಡ

Share Post

Leave a Reply

error: Content is protected !!