ವಿದ್ಯುತ್ ಹರಿದು ಒಂದೇ ಕುಟುಂಬದ ಮೂವರು ಸಾವು

ಹಾಸನ : ಚನ್ನರಾಯಪಟ್ಟಣ ತಾಲೂಕು ಬಾಗೂರು ಹೋಬಳಿಯ ಅಗರಸರಹಳ್ಳಿ ಗ್ರಾಮದಲ್ಲಿ ವಿದ್ಯುತ್ ಹರಿದು ತಾಯಿ, ಮಗಳು ಹಾಗೂ ಮಗ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ಇಂದು ಮುಂಜಾನೆ ನಡೆದಿದೆ.

ಅಗಸರಹಳ್ಳಿ ಗ್ರಾಮದ ನಿವಾಸಿಗಳಾದ ನಿಂಗಮ್ಮ ಅಲಿಯಾಸ್ ಭಾಗಮ್ಮ(55), ದಾಕ್ಷಯಿಣಿ(35), ದಯಾನಂದ ಆಲಿಯಾಸ್ ಪರಮೇಶ್(31) ಮೃತ ದುರ್ದೈವಿಗಳು.

ಬೆಳಗ್ಗೆ ಭಾಗ್ಯಮ್ಮ ಬಟ್ಟೆ ಒಗೆದು ಒಣಗಿ ಹಾಕಲು ಹೋದ ವೇಳೆ ಕರೆಂಟ್ ಶಾಕ್ ಹೊಡೆದಿದೆ. ತಾಯಿ ಚೀರಾಡುವುದನ್ನು ಕೇಳಿ ರಕ್ಷಿಸಲು ಹೋದ ಅಕ್ಕ ತಮ್ಮನೂ ಬಲಿಯಾಗಿ ಇಡೀ ಮನೆ ಬರಿದಾಗಿದೆ. ಇನ್ನೂ ದಾಕ್ಷಾಯಿಣಿಯ 3 ವರ್ಷದ ಮಗಳು ಹಂಸಶ್ರೀ ತನ್ನ ತಾಯಿ, ಅಜ್ಜಿ ಬಿದ್ದಿರುವುದನ್ನು ನೋಡಿ ಅವರ ಬಳಿ ಬಂದಿದ್ದಾಳೆ. ಆಕೆಗೂ ಕರೆಂಟ್ ತಾಗಿದರೂ ಅದೃಷ್ಟವಶಾತ್ ಆಕೆ ಬದುಕುಳಿದಿದ್ದು ಸುಟ್ಟ ಗಾಯಗಳಾಗಿ ಜಿಲ್ಲಾಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ನಿಂಗಮ್ಮನ ಮಗಳು ದಾಕ್ಷಾಯಿಣಿ ತನ್ನ ಎರಡನೇ ಮಗುವಿನ ಹೆರಿಗೆಗೆಂದು ತಾಯಿ ಮನೆಗೆ ಬಂದಿದ್ದಳು. ಆದರೆ ಮತ್ತೊಂದು ಮಗು ಹೊಂದುವ ಆಸೆ ಈಡೇರುವ ಮುನ್ನವೇ ಇದ್ದ ಮಗುವಿಗೂ ತಾಯಿ ಪ್ರೀತಿ ನೀಡಲಾಗದೇ ಮಸಣ ಸೇರಿದ್ದಾಳೆ.

ಇಂದು ನಡೆದ ಈ ದಾರುಣ ಘಟನೆಗೆ ನಿಂಗಮ್ಮ ಮನೆಯವರ ಬೇಜವಾಬ್ದಾರಿಯೂ ಕಾರಣವಾಗಿದೆ ವಿದ್ಯುತ್ ವೈರ್ ಶಿಥಿಲವಾಗಿರುವುದು ಗೊತ್ತಿದ್ದರೂ ವೈರ್ ಬದಲಾಯಿಸದೇ ಶಿಥಿಲ ವ್ಶೆರ್‌ಗೆ ಹತ್ತಿರವಾಗಿ ಕಬ್ಬಿಣದ ತಂತಿ ಕಟ್ಟಿದ್ದು ತಪ್ಪು, ಇದು ಗಾಳಿಗೆ ತಾಗಿ ತಂತಿ, ವೈರು ಎರಡು ಟಚ್ ಹಾಗಿ ಹಾನಿ ಸಂಭವಿಸಿದೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್, ಕಂದಾಯ ಅಧಿಕಾರಿಗಳು, ಚೆಸ್ಕಾಂ ಇಲಾಖೆ ಅಧಿಕಾರಿಗಳು ಆಗಮಿಸಿದರು. ನಂತರ ಮೃತ ಶವಗಳನ್ನು ಚನ್ನರಾಯಪಟ್ಟಣದ ಸಾರ್ವಜನಿಕ ಆಸ್ಪತ್ರೆ ಶವಗಾರಕ್ಕೆ ಹಸ್ತಂತರಿಸಲಾಯಿತ್ತು. ಡಿವೈಎಸ್‌ಪಿ ಲಕ್ಷ್ಮೇಗೌಡ, ಎಸ್.ಪಿ. ರಾಮ ಸೆಪೆಟ್ ಆಗಮಿಸಿ ಪರಿಶೀಲನೆ ನಡೆಸಿದರು.

ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಸಿ.ಎನ್.ಬಾಲಕೃಷ್ಣ ಆಗಮಿಸಿ ಸ್ಥಳೀಯರಿಗೆ, ಸಂಬಂಧಿಕರಿಗೆ ಸಾಂತ್ವನ ಹೇಳಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ ಮೃತ ಶವಗಳನ್ನು ಮರಣೋತ್ತರ ಪರೀಕ್ಷೆ ನಂತರ ಗ್ರಾಮಸ್ಥರಿಗೆ, ಸಂಬಂಧಿಕರಿಗೆ ಹಸ್ತಂತರಿಸಲಾಯಿತ್ತು. ಗ್ರಾಮದಲ್ಲಿ ನೀರವ ಮೌನ ಆವರಿಸಿತ್ತು. ಇಂತಹ ಅಮಾನುಷ ದುರ್ಘಟನೆಗೆ ಸಾಕ್ಷಿಯಾಯಿತ್ತಲ್ಲ ತಮ್ಮ ಗ್ರಾಮ ಎಂದು ಜನ ನೋವು ವ್ಯಕ್ತಪಡಿಸಿದರು.

Share Post

Leave a Reply

Your email address will not be published. Required fields are marked *

error: Content is protected !!