ಮಹಾರಾಷ್ಟ್ರ ಪೋಲಿಸ್ ಟ್ವೀಟ್ : ಪ್ರಿಯಾಂಕಾ ಚೋಪ್ರಾಗೆ ಸೆಕ್ಷನ್ 397 ಅಡಿ 7 ವರ್ಷ ಜೈಲು ಶಿಕ್ಷೆ..?!!!

ನಿನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ನಟನೆಯ ಸ್ಕೈ ಈಸ್ ಪಿಂಕ್ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಪ್ರಿಯಾಂಕಾ ಚೋಪ್ರಾ, ಫರ್ಹಾನ್ ಅಖ್ತರ್ ಹಾಗೂ ಜೈರಾ ವಾಸಿಂ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರೋ ಈ ಚಿತ್ರ ಭಾರೀ ಕುತೂಹಲ ಸೃಷ್ಟಿಸಿತ್ತು. ಇದೀಗ ರಿಲೀಸ್ ಆಗಿರೋ ಟ್ರೇಲರ್​ ಬಗ್ಗೆಯೂ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಆದ್ರೆ ಈ ಸಿನಿಮಾದಲ್ಲಿ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ.

https://twitter.com/DGPMaharashtra/status/1171433116423999491/photo/1

‘ಮಾಡಿದ ತಪ್ಪಿಗೆ ಫೈನ್, ಜೈಲು ಶಿಕ್ಷೆ’
ಈ ದೃಶ್ಯದಲ್ಲಿ, ಅನಾರೋಗ್ಯದಿಂದ ಬಳಲುತ್ತಿರೋ ನಮ್ಮ ಮಗಳ ಚಿಕಿತ್ಸೆಗಾಗಿ ಸದ್ಯದಲ್ಲೇ ನಾವು ಬ್ಯಾಂಕ್ ದರೋಡೆ ಮಾಡೋಣ ಅಂತಾ ಪ್ರಿಯಾಂಕಾ ಚೋಪ್ರಾ , ಫರ್ಹಾನ್ ಅಖ್ತರ್​ಗೆ ಹೇಳ್ತಾರೆ. ಟ್ರೇಲರ್​ನ ಈ ದೃಶ್ಯ ಸ್ಕ್ರೀನ್ ಶಾಟ್ ಒಂದನ್ನ ಪೋಸ್ಟ್ ಮಾಡಿರುವ ಮಹಾರಾಷ್ಟ್ರ ಪೊಲೀಸರು, ‘ಈ ಘಟನೆ ಸಂಬಂಧ ಐಪಿಸಿ ಸೆಕ್ಷನ್ 397 ಅಡಿಯಲ್ಲಿ 7 ವರ್ಷ ಜೈಲು ಶಿಕ್ಷೆ ಹಾಗೂ ದಂಡವನ್ನು ಕಟ್ಟಬೇಕು’ ಅಂತಾ ಟ್ವೀಟ್ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದರು.

Share Post

Leave a Reply

Your email address will not be published. Required fields are marked *

error: Content is protected !!