ಭವ್ಯ ಮೆರವಣಿಗೆಯೊಂದಿಗೆ ವಿಜೃಂಭಣೆಯ ಗಣಪತಿಗಳ ವಿಸರ್ಜನೆ

ಬೆಳಗಾವಿ : ಜಿಲ್ಲೆಯ ಅಥಣಿ ಪಟ್ಟಣದಲ್ಲಿ ತಾಲ್ಲೂಕು ಸಾರ್ವಜನಿಕ ಮಹಾ ಮಂಡಳ ಹಾಗೂ ತಾಲ್ಲೂಕು ಆಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ಸಾರ್ವಜನಿಕ ಗಣಪತಿ ಮಂಡಳಿಗಳ ಒಂಬತ್ತನೇಯ ದಿನದ ಶ್ರೀ.ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ಭವ್ಯ ಮೆರವಣಿಗೆಯೊಂದಿಗೆ ಜರುಗಿತು.

ಕಾರ್ಯಕ್ರಮದಲ್ಲಿ ವಿವಿದ ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತ ಪಡಿಸಿದರು. ಅಥಣಿಯ ಆರಕ್ಷಕರು ಹಾಗೂ ವಿವಿದ ಗಣ್ಯಮಾನ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಇದರ ಸಂಪೂರ್ಣ ಜವಾಬ್ದಾರಿಯನ್ನು
ಅಜೀತ ಪವಾರ ಅವರು ವಹಿಸಿಕೊಂಡಿದ್ದರು.

ಅಥಣಿಯಲ್ಲಿರುವ ವಿವಿದ ಗಲ್ಲಿಗಲ್ಲಿಗಳಲ್ಲಿನ ಹಾಗೂ ನಗರಗಳಲ್ಲಿ ಗಣಪತಿಯ ಮೆರವಣಿಗೆ ಬಂದು ವೇದಿಕೆಯ ಮುಂದೆ ತಮ್ಮ ಕಲೆಯನ್ನು ಪ್ರಸ್ತುತ ಪಡಿಸಿ ಮಂಡಳಿಯ ಅಧ್ಯಕ್ಷರಿಗೆ ಹಾಗೂ ಕಲಾವಿದರಿಗೆ ಗಣ್ಯರಿಗೆ ಸನ್ಮಾನಿಸಿದರು.

ಶಿವಪುತ್ರ ಯಾದವಾಡ, ಆಕಾಶ ಪವಾರ, ಶ್ರೀಶೈಲ ಸಂಖ, ಬಿ ಎಸ್ ಮಠಪತಿ, ಎಸ್ ಎಸ್ ಗೊರಜಿನಾಳ, ದೀಪಕ ಸಿಂದೆ, ರಾಕೇಶ ಮೈಗೂರ, ವಿಲಾಸ ಕಾಂಬಳೆ, ಮಹೇಶ ಕಾಂಬಳೆ, ಚಿಕ್ಕಪ್ಪ ಸನದಿ, ಚನ್ನವಿರ ಯಕ್ಕಂಚಿ, ರಾಜು ಮಮದಾಪೂರ ಉಪಸ್ಥಿತರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!