ಬೈಕ್ ಕಳ್ಳನ ಬಂಧನ : ಎರಡು ದ್ವಿಚಕ್ರ ವಾಹನ ವಶ

ಕೋಲಾರ : ಬೈಕ್ ಗಳನ್ನು ಕದಿಯುತ್ತಿದ್ದ ಖತರ್ನಾಕ್ ಖಳ್ಳನನ್ನು ಕೋಲಾರ ಗ್ರಾಮಾಂತರ ಠಾಣೆ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿಂಕಿತ್ ಕುಮಾರ್ ಮನೆ ಮುಂದೆ ಬೈಕ್‌ಗಳನ್ನು ಕದಿಯುತ್ತಿದ್ದ ಕಳ್ಳ. ಈತ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ನಕಲಿ ಕೀ ಬಳಿಸಿ ಕದಿಯುತ್ತಿದ್ದು ಈ ಬೈಕ್ ಚೋರನನ್ನು ಬಂಧಿಸಿ 1ಲಕ್ಷ ಬೆಳೆ ಬಾಳುವ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಡುಕೊಂಡಿದ್ದಾರೆ.

ಕೋಲಾರ ತಾಲ್ಲೂಕಿನಾದ್ಯಂತ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನಲೆಯಲ್ಲಿ ಕಳವು ಪ್ರಕರಣಳನ್ನು ತಡೆಗಟ್ಟುವ ಸಲುವಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ, ಹೆಚ್ಚುವರಿ ಪೋಲೀಸ್ ಅಧಿಕ್ಷಕರಾದ ಜಾಹ್ನವಿ, ಕೋಲಾರ ಉಪವಿಭಾಗದ ಡಿ.ವೈ,ಎಸ್.ಪಿ ಚೌಡಪ್ಪ ಹಾಗೂ ಕೊಲಾರ ಗ್ರಾಮಾಂತರ ಠಾಣೆ ಆರಕ್ಷಕ ವೃತ್ತ ನಿರೀಕ್ಷಕರ ಹೆಚ್.ಆರ್ ಜಗದೀಶ್ ಸಭೆ ಕರೆದು ಸೂಚಿಸಿದ್ದರು.

ಅದರಂತೆ ಗ್ರಾಮಾಂತರ ಠಾಣೆಯ ಪಿಎಸ್ಐ ಬಿ.ಪ್ರದೀಪ್ ರವರು ಅಪರಾಧ ಸಿಬ್ಬಂದಿಯವನ್ನು ನೇಮಿಸಿದ್ದರು. ದಿನಾಂಕ 10-09-2019 ರಂದು ಅಮ್ಮೇರಹಳ್ಳಿ ಬಳಿ ಅಪರಾಧ ಸಿಬ್ಬಂದಿಯವರು ಗಸ್ತಿನಲ್ಲಿದ್ದಾಗ ದ್ವಿಚಕ್ರ ವಾಹನ ಕಳುವು ಮಾಡುತ್ತಿದ್ದ ವಿಂಕಿತ್ ಕುಮಾರ್ ಅಲಿಯಾಸ್ ವೆಂಕಿ@ಬ್ಯಾಟಪ್ಪ(21)ನನ್ನು ಬಂಧಿಸಿ ವಿಚಾರಣೆ ನಡೆಸಿದ ಹಿನ್ನೆಲೆ 65 ಸಾವಿರ ಬೆಲೆ ಬಾಳುವ ಒಂದು ಜುಪಿಟರ್ ಮತ್ತು 35 ಸಾವಿರ ಬೆಲೆ ಬಾಳುವ ಹೆವಿ ದ್ಯೂಟಿ ಟಿವಿಎಸ್ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಳ್ಳಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಕಾರ್ಯಾಚರಣೆಯಲ್ಲಿ ಅಪರಾಧ ಸಿಬ್ಬಂಗಳಾದ ಕೃಷ್ಣಮೂರ್ತಿ, ಅರುಣ್ ಕುಮಾರ್, ಬಾಬು.ಹೆಚ್.ಸಿ, ಮುನಿರಾಜು ಪೇದೆಗಳು ದ್ವಿಚಕ್ರ ವಾಹನ ಕಳ್ಳನನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!