ದೆಹಲಿಯ ಸರ್ಕಾರಿ ಶಾಲೆಗಳ ಗುಣಮಟ್ಟಕ್ಕೆ ಮಾಜಿ ಸ್ಪೀಕರ್ ಫಿದಾ

ಕೋಲಾರ : ದೆಹಲಿಯ ಸರ್ಕಾರಿ ಶಾಲೆಗಳನ್ನು ನೋಡಿ ಮಾರು ಹೋದ ಮಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುಮಾರ್ ಭಾರೀ ಮಟ್ಟದಲ್ಲಿ ಗುಣಗಾನ ಮಾಡಿದ್ದಾರೆ.

ಸರ್ಕಾರವೇ ಜಾರಿಗೆ ತರುವ ಗುಣಮಟ್ಟದ ಸರ್ಕಾರಿ ಶಾಲಾ ಶಿಕ್ಷಣದಿಂದ ಮಾತ್ರ ದೇಶವು ಬಡತನ ಮತ್ತು ಸಾಮಾಜಿಕ ದಾರಿದ್ರ್ಯಗಳಿಂದ ಬಿಡಿಸಿಕೊಂಡು ಮೇಲೇಳಲು ಸಾಧ್ಯವೆಂದು ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಗೆ ಭೇಟಿ ನೀಡಿದ್ದ ವೇಳೆ ದೆಹಲಿ ಶಾಲೆಗಳ ಗುಣಮಟ್ಟವನ್ನು ನೋಡಿ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಸರ್ಕಾರಿ ಶಾಲಾ ವ್ಯವಸ್ಥೆಯಲ್ಲಿ ಮೌನ ಕ್ರಾಂತಿಯನ್ನೇ ಮಾಡಿದ್ದಾರೆ ಎಂದು ಅವರು ಆಶ್ಚರ್ಯ ಮತ್ತು ಅಭಿಮಾನ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕ ಶಿಕ್ಷಣ ಕ್ಷೇತ್ರವು ಖಾಸಗೀಕರಣಗೊಂಡು ಶಿಕ್ಷಣ ವ್ಯವಸ್ಥೆಯಲ್ಲಿ ಖಾಸಗಿಯವರು ಮೇಲುಗೈ ಸಾಧಿಸಿದ್ದಾರೆ. ಶಿಕ್ಷಣವನ್ನು ಮಾರಾಟದ ಸರಕನ್ನಾಗಿಸಿ ಮಾರಾಟಕ್ಕಿಟ್ಟಿರುವ ಸಂದರ್ಭದಲ್ಲಿ ಶಿಕ್ಷಣವು ಕೆಲವೇ ಕೆಲವು ಜನರ ಸ್ವತ್ತಾಗುತ್ತಿದೆ. ಕೆಳವರ್ಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಭಾರತದ ಶಿಕ್ಷಣ ವ್ಯವಸ್ಥೆಯ ಬಿಕ್ಕಟ್ಟನ್ನು ಬಗೆಹರಿಸಲು ಕೇವಲ ಶಿಕ್ಷಕರಿಂದ ಸಾಧ್ಯವಿಲ್ಲ. ಉತ್ತಮ ತರಬೇತಿ ಪಡೆದ ಶಿಕ್ಷಕರ ಜೊತೆಗೆ ದೂರದೃಷ್ಟಿಯುಳ್ಳ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸರ್ಕಾರವೂ ಕೈಜೋಡಿಸಬೇಕು. ಅಂತಹ ಮೌಲ್ಯಯುತವಾದ ಕೆಲಸವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ್ದಾರೆ ಎಂದು ಅವರು ಹೇಳಿದರು.

Share Post

Leave a Reply

Your email address will not be published. Required fields are marked *

error: Content is protected !!