ಡಿಕೆಶಿ ಬಂಧನ ಖಂಡಿಸಿ ಮಂಡ್ಯದಲ್ಲಿ ವಿನೂತನ ಪ್ರತಿಭಟನೆ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಶೀಘ್ರ ಬಿಡುಗಡೆಗಾಗಿ ಮತ್ತು ಆರೋಗ್ಯಕ್ಕಾಗಿ ನಗರದಲ್ಲಿ ವಿನೂತನ ಚಳವಳಿ ಮಾಡಲಾಯಿತು.

ಮಂಡ್ಯ : ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಶೀಘ್ರ ಬಿಡುಗಡೆಗಾಗಿ ಮತ್ತು ಆರೋಗ್ಯಕ್ಕಾಗಿ ನಗರದಲ್ಲಿ ವಿನೂತನ ಚಳವಳಿ ಮಾಡಲಾಯಿತು.
ಡಿಕೆಶಿ ಅಭಿಮಾನಿ ಬಳಗ ಮತ್ತು‌ ಜಿಲ್ಲಾ ಕಾಂಗ್ರೆಸ್ ಮತ್ತು ಪರಿಶಿಷ್ಟ ಜಾತಿ ಯುವ ವಿಭಾಗ , ಬಳಗದ ವತಿಯಿಂದ ರಕ್ತದಾನ ಚಳವಳಿ ಮಾಡಿ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತುಮಂಡ್ಯದ ಡಿ.ಸಿ. ಕಚೇರಿ ಬಳಿ ಕಾಂಗ್ರೆಸ್ ಮುಖಂಡ ಡಾ. ರವೀಂದ್ರ ಗೌಡ ಹಾಗೂ ಅಭಿಮಾನಿಗಳು ರಕ್ತದಾನ ಮಾಡಿ ಪ್ರತಿಭಟನೆ ಮಾಡಿದರು ದ್ವೇಷದ ರಾಜಕಾರಣದಿಂದ ತಮ್ಮ ನಾಯಕನನ್ನು ಬಂಧಿಸಿರೋ ಬಿಜೆಪಿ ನಡೆ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು. ನಂತರ ಇಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ಚಳವಳಿಗೆ ಹೊರಟ ಅಭಿಮಾನಿಗಳು ಸ್ವಾಭಿಮಾನಿ ಒಕ್ಕಲಿಗರ ವೇದಿಕೆ ವತಿಯಿಂದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬಂಧನ ಖಂಡಿಸಿ ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯಿಂದ ಒಕ್ಕಲಿಗ ಮುಖಂಡರು ಟೆಂಪೋ, ಬಸ್, ಕಾರು ಹಾಗೂ ಬೈಕ್‌ನಲ್ಲಿ ಬೆಂಗಳೂರಿಗೆ ಹೊರಟಿದ್ದು ನ್ಯಾಷನಲ್ ಕಾಲೇಜು ಮೈದಾನದಿಂದ ಕೇಂದ್ರದ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!