ಆಶ್ರಯ ನೀಡದ ಮಕ್ಕಳು : ಮನನೊಂದ ತಾಯಿ ಆತ್ಮಹತ್ಯೆ

ಹುಬ್ಬಳ್ಳಿ : ತಾಯಿ ಅಂದ್ರೆ ದೇವರ ರೂಪ. 9 ತಿಂಗಳು ಹೆತ್ತು ಹೊತ್ತು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ನೋಡಿಕೊಂಡ ಮಕ್ಕಳೇ ತನ್ನ ತಾಯಿಗೆ ಮೃತ್ಯುವಾದ ಘಟನೆ ಹುಬ್ಬಳ್ಳಿಯ ನೇಕಾರ ನಗರದಲ್ಲಿ ನಡೆದಿದೆ.

ಮನೆ ಮುಂದೆ ಜಮಾಯಿಸಿರೋ ಜನ ತುಂಬಾ ಆಕ್ರೋಶದಿಂದ ತಮ್ಮ ಆಕ್ರೋಶವನ್ನು ಹೊರಹಾಕುತ್ತಿರುವ ಮಹಿಳೆಯರು. ಇನ್ನು ತಮ್ಮ ತಮ್ಮಂದಿರನ್ನು ಬಾಯಿಗೆ ಬಂದ ಹಾಗೆ ಬೈಯುತ್ತಿರೋ ಅಕ್ಕಂದಿರು. ಇವೆಲ್ಲಾ ಕಂಡು ಬಂದಿದ್ದು ಸಾವಿನ ಮನೆಯಲ್ಲಿ.

ಹೌದು, ನೇಕಾರ ನಗರದಲ್ಲಿ ಇರೋ ಮನೆಯಲ್ಲಿ ಸೂತಕದ ವಾತಾವರಣ. ಹೆತ್ತ ತಾಯಿಯನ್ನು ನೋಡಿಕೊಳ್ಳದೆ, ನನ್ನ ಬಳಿ ಬೇಡ ನಿನ್ನ ಬಳಿ ಬೇಡ ಎಂಬ ವಿಷಯಕ್ಕೆ ನಿನ್ನೆ ಜಗಳವಾಗಿತ್ತು. ಈ ರೀತಿಯಾಗಿ ತನ್ನ ಮಕ್ಕಳೇ ತನ್ನನ್ನು ನೋಡಿಕೊಳ್ಳುತ್ತಿಲ್ಲ ಎಂದು ಮನನೊಂದು ಸುಶೀಲಮ್ಮ ಗಲಿ ಕಟ್ಟಿ ಎಂಬ ಮಹಿಳೆ ನೇಣಿಗೆ ಶರಣಾಗಿದ್ದಾರೆ.

ಮಗನಾದ ಮಂಜುನಾಥ ಮತ್ತು ರಾಜು ತಾಯಿಯಯನ್ನು ನೋಡಿಕೊಳ್ಳುವ ವಿಚಾರಕ್ಕೆ ಪದೇ ಪದೇ ಜಗಳ ಆಡುತ್ತಿದ್ದರು. ಈ ಕಾರಣದಿಂದ ಬೇಸತ್ತ ತಾಯಿ ಇಹಲೋಕ ತ್ಯಜಿಸಿದ್ದಾಳೆ.

ಒಟ್ಟಿನಲ್ಲಿ ತಂದೆ ತಾಯಿ ಮಾಡಿಟ್ಟ ಆಸ್ತಿಯನ್ನು ಕೇವಲ ಅನುಭವಿಸಬೇಕು ಎನ್ನುವ ಇಂಥ ಪಾಪಿ ಮಕ್ಕಳು ಇದ್ದರೆಷ್ಟು ಹೋದರೆಷ್ಟು ಎಂದು ಜನ ಮಾತನಾಡಿಕೊಳ್ಳುವಂತಾಗಿದೆ. ತನ್ನ ಮಕ್ಕಳನ್ನು ಹೆತ್ತು ಹೊತ್ತು ಸಾಕಿದ ತಾಯಿ ಮಾತ್ರ ತನ್ನ ನೋವನ್ನು ತನ್ನಲ್ಲೇ ಇಟ್ಟುಕೊಂಡು ಬಾರದ ಲೋಕಕ್ಕೆ ಪ್ರಯಾಣವನ್ನು ಬೆಳೆಸಿದ್ದು ದುರಂತವಾಗಿದೆ.

Share Post

Leave a Reply

Your email address will not be published. Required fields are marked *

error: Content is protected !!