ಕಳಪೆ ಔಷಧಿ ಪೂರೈಕೆ ಪ್ರಕರಣ ಸಿಬಿಐಗೆ ಒಪ್ಪಿಸಲು ಆಗ್ರಹಿಸಿ ಪ್ರತಿಭಟನೆ

ಕೋಲಾರ : ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕಳಪೆ ಗುಣಮಟ್ಟದ ಔಷಧಿ ಖರೀದಿ ಪ್ರಕರಣ ಸಿಒಡಿ ತನಿಖೆ ಕೈಬಿಟ್ಟು ಸಿಬಿಐ ಗೆ ವಹಿಸಿ ಮರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಭಾರತೀಯ ದಲಿತ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದ ಕೆ.ಆರ್ ರಮೇಶ್ ಕುಮಾರ್ ಕಳಪೆ ಗುಣಮಟ್ಟ ಔಷಧಿ ಖರೀದಿಸಿ 535 ಕೋಟಿ ವಂಚಿಸಿದ್ದಾರೆಂದು ದೂರು ದಾಖಲಾಗಿದ್ದು, ಪ್ರಕರಣವನ್ನು ಸಿಓಡಿ ತನಿಖೆ ನಡೆಸುತ್ತಿದೆ. ಸಿಬಿಐ ಗೆ ವಹಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ನಗರದ ಮೆಕ್ಕೆ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಲೋಕಾಯುಕ್ತ ಪೋಲೀಸ್ ರಾಮಚಂದ್ರ ಅವರಿಗೆ ಪ್ರತಿಭಟನಾಕಾರರು ತಮ್ಮ ಮನವಿ ಸಲ್ಲಿಸಿದರು.

2013-14 ಹಾಗೂ 2014-15 ನೇ ಸಾಲಿನಲ್ಲಿ ನಖಲಿ ಅಂಕಪಟ್ಟಿ, ಹಾಜರಾತಿ ಸೃಷ್ಟಿಸಿ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಸರ್ಕಾರಿ ಯುನಾನಿ ವೈದ್ಯಕೀಯ ವಿದ್ಯಾಲಯದಲ್ಲಿ ವೈದ್ಯಕೀಯ ಕೋರ್ಸುಗಳಿಗೆ ಅಕ್ರಮ ಪ್ರವೇಶ ನೀಡಿದ್ದು ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಸಚಿವರಾಗಿದ್ದ ಕೆ.ಆರ್ ರಮೇಶ್‌ಕುಮಾರ್ 2017 ರಲ್ಲಿ ಈ ಅಕ್ರಮದ ಸಿಐಡಿ ತನಿಖೆಯನ್ನು ಕೈಬಿಡುವಂತೆ ಒಳಾಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ಈ ವಂಚನೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಿ ರಮೇಶ್ ಕುಮಾರ್ ರವರ ಮೇಲಿನ ಆರೋಪಗಳ ಬಗ್ಗೆ ಶೀಘ್ರ ತನಿಖೆ ಕೈಗೊಂಡು ಸತ್ಯಾಸತ್ಯತೆಯನ್ನು ರಾಜ್ಯದ ಜನತೆಗೆ ತಿಳಿಸುವಂತಾಗಲಿ ಎಂದು ರಾಜ್ಯದ ಯಡಿಯೂರಪ್ಪ ಸರ್ಕಾರಕ್ಕೆ ಆಗ್ರಹಿಸಿದರು.

Share Post

Leave a Reply

Your email address will not be published. Required fields are marked *

error: Content is protected !!