ಆರು ದಿನಗಳ ಕಾಲ ನಡೆಯುವ ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ

ಕಲಬುರಗಿ : ತೋಟಗಾರಿಕಾ ಇಲಾಖೆಯಲ್ಲಿ ಇಂದಿನಿಂದ 6 ದಿನಗಳ ಕಾಲ ಸಸ್ಯ ಸಂತೆ ಮತ್ತು ತೋಟಗಾರಿಕೆ ಅಭಿಯಾನ ಜರುಗಲಿದ್ದು ಈ ಕಾರ್ಯಕ್ರಮನ್ನು ಜಿಲ್ಲಾ ಪಂಚಾಯತ್ ಸಿಇಓ ಪಿ ರಾಜಾ ಅವರು ಉದ್ಘಾಟಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ 4896 ಹೆಕ್ಟೇರ್ ಹಣ್ಣು 12889 ಹೆಕ್ಟೇರ್ ತರಕಾರಿ 3339 ಹೆಕ್ಟೇರ್ ಹೂ ಮತ್ತು ಸಾಂಬಾರ ಪದಾರ್ಥಗಳ ಪ್ರದೇಶವಿದ್ದು ಒಟ್ಟು ಜಿಲ್ಲೆಯಲ್ಲಿ 21210 ಹೇಕ್ಟರ್ ತೋಟಗಾರಿಕೆ ಪ್ರದೇಶವಿದ್ದು ಒಟ್ಟು ಸಾಗುವಳಿ ಪ್ರದೇಶಕ್ಕೆ ಶೇ.1.94% ಇರುತ್ತದೆ. ಆದರಿಂದ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳ ಪ್ರದೇಶ ವಿಸ್ತರಣೆಗೆ ವಿಫಲ ಅವಕಾಶವಿರುತ್ತದೆ. ಅರದಂತೆ ಕಲಬುರಗಿ ಜಿಲ್ಲೆಯ ಮಣ್ಣು ನೀರು ಮತ್ತು ವಾತಾವರಣ ತೋಟಗಾರಿಕೆ ಬೆಳೆಗಳಿಗೆ ಅತ್ಯಂತ ಸೂಕ್ತವಾಗಿದೆ.

ಜಿಲ್ಲಾದ್ಯಂತ ಮುಂಗಾರು ಹಂಗಾಮಿನ ತೋಟಗಾರಿಕೆ ಬೆಳೆಗಳ ನಾಟಿಗೆ ಅವಕಾಶವಿದ್ದು ಕಲಬುರಗಿ ತೋಟಗಾರಿಕೆ ಇಲಾಖೆಯ ಉಪನಿರ್ದೆಶಕರ ಕಛೇರಿ ಆವರಣದಲ್ಲಿ ಇಂದಿನಿಂದ ಅಗಸ್ಟ್ 26 ರವರೆಗೆ ಸಸ್ಯ ಸಂತೆ ಆಯೋಜಿಸಲಾಗಿದೆ.

ಈ ಸಸ್ಯ ಸಂತೆಯಲ್ಲಿ ತೋಟಗಾರಿಕೆ ಇಲಾಖೆಯಿಂದ ಒಟ್ಟು 317416ಕಸಿ ಹಾಗೂ ಸಸಿಗಳು ಮಾರಾಟಕ್ಕೆ ಲಭ್ಯವಿದ್ದು 185147 ಹಣ್ಣುಗಳು 56076 ಅಲಂಕಾರಿಕ ಮತ್ತು 236971 ತೆಂಗು ಸಸಿಗಳು ಬ್ಯಾಗಿನಲ್ಲಿ ಹಾಗೂ ಪ್ಲಾಸ್ಟಿಕ್ ಕುಂಡಗಳಲ್ಲಿ ಇಲಾಖೆ ದರದಲ್ಲಿ ಮಾರಾಟಕ್ಕೆ ಲಭ್ಯವಿದೆ, ಇದರ ಸದುಪಯೋಗ ಎಲ್ಲಾ ರೈತರು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲಬುರಗಿ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!