ನೆರವಾದವರಿಗೆ ರಕ್ಷಾ ಬಂಧನ ಕಟ್ಟಿದ ಸಂತ್ರಸ್ತ ಮಹಿಳೆಯರು

ಗೋಕಾಕ್ : ಮಳೆಯಿಂದ ಜಲಪ್ರವಾಹಕ್ಕೆ ಸಿಲುಕಿ ತತ್ತರಿಸಿ ತಾಲ್ಲೂಕಿನ ಕೊಣ್ಣೂರು ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಉತ್ತರ ಕರ್ನಾಟಕದ ಸಂತ್ರಸ್ತರಿಗೆ ಉಡುಪಿ ಜಿಲ್ಲೆಯ ಬಯಲು ಫ್ರೆಂಡ್ಸ್ ಕುಂಜೂರು ಹಾಗೂ ತುಳು ಸಂಸಾರ ಪಣಿಯೂರು ಇವರ ವತಿಯಿಂದ ಸಹಾಯ ಹಸ್ತ ನೀಡಲಾಯಿತು‌.

ಇದೇ ವೇಳೆ ಸಹಾಯ ಸ್ವೀಕರಿಸಿದ ನೆರೆ ಸಂತ್ರಸ್ತ ಮಹಿಳೆಯರು ತಮ್ಮ ನೆರವಿಗೆ ಬಂದವರನ್ನು ಸಹೋದರರಂತೆ ಕಂಡು ರಾಖಿ ಕಟ್ಟಿ ರಕ್ಷಾ ಬಂಧನ ಆಚರಿಸಿದ್ದು ವಿಶೇಷವಾಗಿತ್ತು.

ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ‌ನೀಡುವ ಮೂಲಕ ಅವರಿಗೆ ಸಹಾಯ ಮಾಡಬೇಕು. ಇದು ಒ್ರತಿಯೊಬ್ಬರ ಕರ್ತವ್ಯ ಎಂದು ಭಾವಿಸಬೇಕು ಎಂದು ನೆರವಿಗೆ ಬಂದವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸಂತ್ರಸ್ತರಿಗೆ ತಾವು ತಂದ ದಿನ ನಿತ್ಯದ ಅಗತ್ಯ ವಸ್ತುಗಳನ್ನು ಇಲ್ಲಿನ ಹಿರಿಯರ ಸಮ್ಮುಖದಲ್ಲಿ ಶ್ರೀ ದುರ್ಗಾದೇವಿ ಮಂದಿರದಲ್ಲಿ ವಿತರಿಸಿದರು.

ಈ ಸಂದರ್ಭದಲ್ಲಿ ಊರಿನ ಪ್ರಮುಖರಾದ ವಿನೋದ ಕರನಿಂಗ, ಸುದೀರ ಹುಲ್ಲೋಳಿಯವರ್, ಹಿರಿಯರಾದ ದನ್ಯಕುಮಾರ ಮೇಗೇರಿ, ಶೇಖರ್ ಕೊಣ್ಣೂರ, ವಿಠ್ಠಲ ಗುಡಜ, ವೆಂಕಟೇಶ ಕೆಳಗೇರಿ ಮತ್ತಿತರರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!