ಸರ್ವೀಸ್ ಫಾರ್ ಹ್ಯೂಮನ್ ಬಳಗದಿಂದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

ಬೆಳಗಾವಿ : ಕಳೆದ ಹಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಸುರಿದ ರಕ್ಕಸ ಮಳೆಯಿಂದ ಜಲ ಪ್ರವಾಹಕ್ಕೆ ತುತ್ತಾದ ಗೋಕಾಕ್ ತಾಲೂಕು ಕೊಣ್ಣೂರಿನ ಅಂಬೇಡ್ಕರ್ ನಗರದಲ್ಲಿನ ಸಂತ್ರಸ್ತರಿಗೆ ಬೆಂಗಳೂರಿನ ಸರ್ವಿಸ್ ಫಾರ್ ಹುಮನ್ ಬಳಗವು ನೇರವು ನೀಡಿ ಮಾನವಿಯತೆ ಮೆರೆದಿದ್ದಾರೆ.

ಸರ್ವೀಸ್ ಫಾರ್ ಹ್ಯೂಮನ್ ಬಳಗದ ಕಾರ್ಯಕರ್ತ ಕಿರಣ್‌ಕುಮಾರ್ ಮಾತನಾಡಿ ನಾವು ಎಷ್ಟು ಗಳಿಸಿದರೂ ಸಹ ಯಾರು ಜೊತೆಯಲ್ಲಿ ತೆಗೆದುಕೊಂಡು ಹೋಗುವುದಿಲ್ಲ, ಆಪತ್ಕಾಲದಲ್ಲಿದ್ದವರಿಗೆ ಸಹಾಯ ಮಾಡಿದರೆ ಮಾತ್ರ ಮನುಷ್ಯತ್ವಕ್ಕೆ ಬೆಲೆ ಎಂದು ತಿಳಿಸಿದರು.

ಎಲ್ಲರೂ ಪ್ರವಾಹದಲ್ಲಿ ಮನೆಗಳನ್ನು ಕಳೆದುಕೊಂಡವರಿಗೆ ಕೈಲಾದಷ್ಟು ಸಹಾಯ ನೀಡಲು ವಿನಂತಿ ಮಾಡಿದರು.

ನಿಜವಾದ ನಿರಾಶ್ರಿತರಿಗೆ ನೇರವು ಸಿಗಬೇಕೆಂಬ ಉದ್ದೇಶದಿಂದ ಸರ್ವೀಸ್ ಫಾರ್ ಹ್ಯೂಮನ್ ಸಂಸ್ಥೆಯ 9 ಜನ ಕಾರ್ಯಕರ್ತರು ಬೆಂಗಳೂರಿನಿಂದ ಬಂದಿದ್ದು ನಿರಾಶ್ರಿತರಿಗೆ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿ ಬಾಲಚಂದ್ರ ಶಿಂಗ್ಯಾಗೋಳ, ಯಮನಪ್ಪ ಕೊಣ್ಣೂರ, ಸಮಾಜ ಸೇವಕ ಯಲ್ಲೇಶ ಬಚ್ಚಲಪುರಿ, ವೆಂಕಟೇಶ ಕೇಳಗೇರಿ,ವಿಠ್ಠಲ ಗುಡಜ, ಶೇಖರ ಕೊಣ್ಣೂರ ಮತ್ತಿತರರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!