ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

ಕೋಲಾರ : ಜಿಲ್ಲೆಯ ಜನತೆ ಉತ್ತರ ಕರ್ನಾಟಕ ಹಾಗು ಮಲೆನಾಡು ಭಾಗದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ ನೀಡಿದರು.

ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಹಲವೆಡೆ ಅತಿವೃಷ್ಟಿ ಹಿನ್ನಲೆ ಕೋಲಾರದ ಬಿಜೆಪಿ ಸಂಸದ ಎಸ್​ ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು, ಮುಖಂಡರು ನೆರೆ ಸಂತ್ರಸ್ತರಿಗೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಕಳೆದ ಎರಡು ಮೂರು‌ ದಿನಗಳಿಂದನಿತ್ಯ ಬಳಕೆ ಸಾಮಗ್ರಿಗಳನ್ನು ಸಂಗ್ರಹಿಸಿದರು.

ಅಕ್ಕಿ, ದಿನನಿತ್ಯ ಬಳಕೆಯ ವಸ್ತುಗಳು, ನೀರಿನ ಬಾಟೆಲ್​, ಬಟ್ಟೆ, ಬಿಸ್ಕೆಟ್, ಕಡಲೆ ಪುರಿ, ಹೊದಿಕೆ, ಹಣ್ಣು , ತರಕಾರಿ, ಸ್ವೆಟರ್​ಗಳು ಸೇರಿದಂತೆ ಇನ್ನಿತರ ಸುಮಾರು 45 ಟನ್​ ಅಗತ್ಯ ವಸ್ತುಗಳು ಹಾಗೂ ಮೂರುವರೆ ಲಕ್ಷ ಹಣವನ್ನು ಸಂಗ್ರಹ ಮಾಡಿ ನಾಲ್ಕು ಟ್ರಕ್​ಗಳಲ್ಲಿ ಉತ್ತರ ಕರ್ನಾಟಕಕ್ಕೆ ಕಳುಹಿಸಿ ಕೊಡಲಾಯಿತು.

ಸಂಸದ ಎಸ್​.ಮುನಿಸ್ವಾಮಿ ಸೇರಿದಂತೆ ಅನೇಕರು ಕೋಲಾರ ನಗರದಿಂದ ಪ್ರಯಾಣ ಬೆಳೆಸಿ ಸಂಜೆ ನೆರೆ ಸಂತ್ರಸ್ತರ ಸ್ಥಳಗಳಿಗೆ ತೆರಳಿ ಅಲ್ಲಿನ ಜರಿಗೆ ಬೇಕಾದ ಅಗತ್ಯ ವಸ್ತುಗಳನ್ನು ವಿತರಣೆ ಮಾಡಲು ಯೋಜನೆ ರೂಪಿಸಿಕೊಂಡಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!