ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಪ್ರಾಣ ಕೊಟ್ಟ ಮಹಾನ್ ಯೋಧ : ಶಾಸಕ ಎಂ.ವೈ.ಪಾಟೀಲ್

ಅಫಜಲಪುರ : ಸಂಗೊಳ್ಳಿ ರಾಯಣ್ಣ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾನ್ ಯೋಧನಾಗಿದ್ದುˌ ದೇಶದ ಜನ ಅವರ ಆದರ್ಶಗಳನ್ನು ಪಾಲಿಸಬೇಕು ಎಂದು ಶಾಸಕ ಎಂ.ವೈ.ಪಾಟೀಲ್ ಕರೆ ನೀಡಿದರು.

ತಾಲೂಕಿನ ಬಳೂರ್ಗಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತ್ಯೋತ್ಸವದ ಅಂಗವಾಗಿ ಸಾವಿರದ ಒಂದು ಸಸಿಗಳನ್ನು ನೆಡುವ ಕಾರ್ಯಕ್ರಮ ಮತ್ತು ನಿವೃತ್ತ ಕೆ.ಆರ್.ಐ.ಡಿ.ಎಲ್ ಇಇ ಜೆ.ಎಮ್.ಕೊರಬು ಹಾಗೂ ವೀರ ಯೋಧರಿಗೆ ಆಯೋಜಿಸಲಾಗಿದ್ದ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಸಂಗೊಳ್ಳಿ ರಾಯಣ್ಣನವರಂತಹ ಲಕ್ಷಾಂತರ ಜನರು ಹುಟ್ಟಬೇಕಾದ ಅನಿವಾರ್ಯತೆ ಇದೆ. ರಾಯಣ್ಣ ಕ್ರಾಂತಿಕಾರಿ ವ್ಶಕ್ತಿ. ಬ್ರೀಟಿಷ್ ಸೈನ್ಶವನ್ನು ಕ್ಷಣಾರ್ಧದಲ್ಲಿ ಎದುರಿಸುವ ಸಾಮರ್ಥ್ಶ ರಾಯಣ್ಣ ಹೊಂದಿದ್ದ.

ಅಲ್ಲದೆ ನಿವ್ರತ್ತರಾದ ಜೆ.ಎಂ. ಕೊರಬು ಅವರ ಸೇವೆಯನ್ನು ನಾವು ತಾಲೂಕಿನ ಅಭಿವ್ರದ್ಧಿಗಾಗಿ ಬಳಸಿಕೊಳ್ಳುತ್ತೇವೆ.ಅವರು ಅಧಿಕಾರದಲ್ಲಿದ್ದರೂ ಅನೇಕ ಸಾಮಾಜಿಕ ಕೆಲಸ ಮಾಡಿದ್ದಾರೆ.ಕೊರಬು ಅವರು ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿದ್ದಾರೆ.ಆದರೆ ಪ್ರವೃತ್ತಿಯಿಂದ ನಿವೃತ್ತಿಯಾಗಿಲ್ಲ ಅವರು ಮಾಡುತ್ತಿರುವ ಜನ ಸೇವೆಗೆ ಶ್ಲಾಘನೀಯ ಎಂದರು.

ಸಂಘಟಕ ಯಲ್ಲಾಲಿಂಗ ಅವರು ತಾಲೂಕಿನಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಿದ್ದುˌ ಇದು ಹೀಗೆ ಮುಂದುವರೆಯಲಿ ಎಂದು ಶಾಸಕ ಎಂ.ವೈ.ಪಾಟೀಲ್ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತ ಕಾರ್ಯಪಾಲಕ ಅಭಿಯಂತರ ಜೆ.ಎಂ ಕೊರಬು ಮಾತನಾಡಿ ರಾಜ್ಯದಲ್ಲಿ ಪ್ರವಾಹದ ಸಂಕಷ್ಟದಲ್ಲಿ ಸಿಲುಕಿದ ಸಂತ್ರಸ್ಥರಿಗೆ ದೇವರು ಕರುಣಿಸಲಿ.
ಸಾಧ್ಯವಾದಷ್ಟು ಅತಿವೃಷ್ಠಿ ಅನಾವೃಷ್ಠಿಯ ಸಂತ್ರಸ್ತರಿಗೆ ನಾವು ಸಾಹಯ ಹಸ್ತ ಮಾಡಿದಾಗ ಮಾತ್ರ ಕ್ರಾಂತಿ ವೀರ ಸಂಗೋಳಿ ರಾಯಣ್ಣ ಜಯಂತಿ ಮಾಡಿದಕ್ಕೂ ಸಾರ್ಥಕ ವಾಗುತ್ತೆ ಎಂದು ಹೇಳಿದ ಅವರು

ಆಗಿನ ಕಾಲದ ದುಷ್ಟ ಬ್ರಿಟೀಷರ ಕೂಟದಲ್ಲಿ ಸಂಗೋಳಿ ರಾಯಣ್ಣ ಸಿಕ್ಕಾಗ ಬಹಳಷ್ಟು ನೋವು ಅನುಭವಿಸಿದ್ದಾರೆ.ಬ್ರಿಟೀಷರ ಒಳಸಂಚಿನಿಂದ ರಾಯಣ್ಣನಿಗೆ ಮೋಸ ಮಾಡಿದ್ದಾರೆ.ಆದರೂ ಕೆಚ್ಚೆದೆಯ ಧೀರ ಧೈರ್ಯದಿಂದ ರಾಜ್ಯಭಾರವನ್ನು ಮಾಡಿ ಅಲ್ಪ ಅವಧಿಯಲ್ಲಿಯೇ ವೀರಮರಣವನ್ನಪ್ಪಿದ್ದಾರೆ.ಅದಕ್ಕಾಗಿ ಯೇ ಇಂದಿಗೂ ಅವರು ಮಾಡಿದ ಸಾಧನೆ ಇತಿಹಾಸದ ಪುಟದಲ್ಲಿ ಅಜರಾಮರವಾಗಿ ಉಳಿದಿವೆ.ಹೀಗಾಗಿ ಅವರ ತತ್ವ ಸಿದ್ದಾಂತಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆನೀಡಿದರು.

ನಂತರ ಮಾತನಾಡಿದ ಸಂಘದ ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿˌ ಕೆಂಚಮ್ಮನ ಉದರದಲ್ಲಿ ಜನಿಸಿದ ರಾಯಣ್ಣ ದೇಶದ ಕೀರ್ತಿ ಹೆಚ್ಚಿಸಿದ ಮಹಾನ್ ದೇಶಪ್ರೇಮಿ. ಸಾಮಾನ್ಶ ಸೈನಿಕನಾಗಿದ್ದು ಬ್ರೀಟಿಷ್ ರ ಎದೆನಡುಗಿಸಿದ್ದ. ಕಪ್ಪಕಾಣಿಕೆ ಕೊಡುವದನ್ನು ಪ್ರತಿಭಟಿಸಿ ಬ್ರೀಟಿಷ್ ರನ್ನು ಓಡಿಸಿದ ಕ್ರಾಂತಿಕಾರಿ ವ್ಶಕ್ತಿ ಸಂಗೊಳ್ಳಿ ರಾಯಣ್ಣ ಎಂದರು. ಇಡೀ ದೇಶ ಸಂಗೊಳ್ಳಿ ರಾಯಣ್ಣನವರ ಹುಟ್ಟು ಮತ್ತು ಸಾವು ನೆನೆಸಿಕೊಳ್ಳುತ್ತದೆ. ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ರಾಯಣ್ಣನವರ ದೇಶಪ್ರೇಮಿಗಳಿಗೆ ಸ್ಪೂರ್ತಿ ಎಂದರು.

ಕಾರ್ಯಕ್ರಮದಲ್ಲಿ ಗೌರ್ (ಬಿ) ಗ್ರಾಮದ ಅಭಿನವ ಯಲ್ಲಾಲಿಂಗ ಮಹಾರಾಜರು ದಿವ್ಶ ಸಾನಿಧ್ಶ ವಹಿಸಿದ್ದರು. ಮುಖಂಡರಾದ ಭೀರಣ್ಣ ಕಲ್ಲೂರ, ಪ್ರಕಾಶ ಜಮಾದಾರ, ವಕೀಲ ಕೆ.ಜೆ ಪೂಜಾರಿ ಮಾತನಾಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ತಾಲೂಕಾಧ್ಶಕ್ಷ ಯಲ್ಲಾಲಿಂಗ ಕೆ. ಪೂಜಾರಿ ಅಧ್ಶಕ್ಷತೆ ವಹಿಸಿದ್ದರು. ಯುವ ಮುಖಂಡ ಬೀರಣ್ಣ ಆರ್. ಕಲ್ಲೂರ್ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಮಾಜಿ ಜಿಪಂ ಸದಸ್ಶ ಪ್ರಕಾಶ ಜಮಾದಾರ ಪೋಟೋ ಪೂಜೆ ನೆರವೇರಿಸಿದರು. ಬಳೂರ್ಗಿ ಗ್ರಾಪಂ ಅಧ್ಶಕ್ಷೆ ಕಸ್ತೂರಿಬಾಯಿ ದತ್ತು ಪೂಜಾರಿ ಜ್ಶೋತಿ ಬೆಳಗಿಸಿದರು. ಸಂಪನ್ಮೂಲ ವ್ಶಕ್ತಿಗಳಾಗಿ ವಕೀಲ ಕೆ.ಜಿ ಪೂಜಾರಿˌ ಅರಣ್ಶಾಧಿಕಾರಿ ಡಾ.ರಮೇಶ ಭಾಗವಹಿಸಿದ್ದರು. ಮುಖ್ಶಅತಿಥಿಗಳಾಗಿ ಮಾಜಿ ಜಿಪಂ ಸದಸ್ಯರಾದ ಸಿದ್ದಾರ್ಥ ಬಸರಿಗಿಡˌ ಮತೀನ ಪಟೇಲˌ ಕಾಂಗ್ರೆಸ್ ಮುಖಂಡ ಪಪ್ಪು ಪಟೇಲˌ ಗುತ್ತಿಗೆದಾರ ದಯಾನಂದ ದೊಡ್ಮನಿˌ ದಸಂಸ ಅಧ್ಯಕ್ಷ ಮಹಾಲಿಂಗ ಅಂಗಡಿˌ ವಕೀಲ ಪದ್ಮರಾಜ ಪೂಜಾರಿ ಭಾಗವಹಿಸಿದ್ಡರು.

ಅತಿಥಿಗಳಾಗಿ ಫಲಾಸಿಂಗ್ ರಾಠೋಡˌ ಅರವಿಂದ ದೊಡ್ಮನಿˌ ಶ್ರೀಕಾಂತ ದಿವಾಣಜಿ,ˌ ಕುಪೇಂದ್ರ ಸಿಂಗೆ ಭಾಗವಹಿದ್ದರು. ಅಣ್ಣಾರಾಯ ಪಾಟೀಲ ನಿರೂಪಿಸಿದರು. ತಾಲೂಕಿನ ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳುˌ ಹಿತೈಸಿಗಳುˌ ಪ್ರಗತಿಪರರು ಹೆಚ್ಚಿನ ಸಂಖ್ಶೆಯಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಸರಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.

Share Post

Leave a Reply

Your email address will not be published. Required fields are marked *

error: Content is protected !!