ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ

ಹುಬ್ಬಳ್ಳಿ : ಕಾರಟಗಿಯ ಆಸ್ಪತ್ರೆ ವತಿಯಿಂದ ನರಗುಂದ ತಾಲೂಕಿನ ನೆರೆ ಪೀಡಿತ ಗ್ರಾಮಗಳ ಸಂತ್ರಸ್ತರಿಗೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನು ನೀಡುವುದಲ್ಲದೇ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು.

ಡಾ.ರಾಮಚಂದ್ರ ಕಾರಟಗಿಯ ನೇತೃತ್ವದಲ್ಲಿ ಅನೇಕ ವೈದ್ಯರುಗಳು ಸೇರಿ ನೆರೆಸಂತ್ರಸ್ತರಿಗೆ ಅಗತ್ಯ ಚಿಕಿತ್ಸೆ ಜೊತೆಗೆ ಅಲ್ಲಿರುವ ನೆರೆಸಂತ್ರಸ್ತರಿಗೆ ಉಚಿತವಾಗಿ ಔಷಧಿ ಹಾಗೂ ತಪಾಸಣೆ ನೀಡಲಾಯಿತು.

ನೆರೆ ಸಂತ್ರಸ್ತರ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣೆ ಆಗುವ ಸ್ಥಿತಿಯಿದ್ದು ಅದಕ್ಕಾಗಿ ನೆರೆ ಸಂತ್ರಸ್ತ ಭಾಗದ ಜನರ ಉಪಯೋಗಕ್ಕೆ ಅನುಕೂಲವಾಗಲೆಂದು ಈ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದು ಡಾ ರಾಮಚಂದ್ರ ಕಾರಟಗಿ ತಿಳಿಸಿದರು. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹಾಜರಿದ್ದರು.

Share Post

Leave a Reply

Your email address will not be published. Required fields are marked *

error: Content is protected !!