ಅರಣ್ಯ ಇಲಾಖೆ ಯಶಸ್ವಿ ಕಾರ್ಯಾಚರಣೆ : ಸೆರೆ ಸಿಕ್ಕ ಒಂಟಿ ಸಲಗ

ಹಾಸನ : ಜಿಲ್ಲೆಯಲ್ಲಿ ಅನೇಕ ದಿನಗಳಿಂದ ಉಪಟಳ ನೀಡುತ್ತಿದ್ದ ಒಂಟಿ ಸಲಗವನ್ನು ಹಿಡಿದು ಸ್ಥಳಾಂತರಿಸುವ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಮಾನವ ಮತ್ತು ವನ್ಯ ಜೀವಿ ಸಂಘರ್ಷ ಮುಂದುವರೆದಂತೆಯೇ ಒಂದು ತಿಂಗಳಿನಿಂದ ಅರಣ್ಯ ಇಲಾಖೆಯವರನ್ನು ನಿದ್ದೆಗೆಡಿಸಿದ್ದ ಕಿಲ್ಲರ್ ಸಲಗ ಇಂದು ಸೆರೆಸಿಕ್ಕಿದೆ. ಹಾಸನ ಜಿಲ್ಲೆ ಬೇಲೂರು ತಾ. ಅಡವಿ ಬಂಟೇನಹಳ್ಳಿ ಅರಣ್ಯ ವಲಯದಲ್ಲಿ ಓಡಾಡಿಕೊಂಡಿದ್ದ ಸಲಗ, ಒಂದು ತಿಂಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂಧಿ ಸೇರಿದಂತೆ ರೈತ ಮಹಿಳೆಯೊಬ್ಬರನ್ನೂ ಬಲಿತೆಗೆದೂಕೊಂಡಿದ್ದ ಕಿಲ್ಲರ್ ಆನೆ ಪ್ರತಿನಿತ್ಯ ರೈತರು ಬೆಳೆದ ಬೆಳೆಯನ್ನು ಸಹ ನಾಶ ಮಾಡುತ್ತಿತ್ತು. ಅಲ್ಲದೇ ಮೂರು ಬಾರಿ ಹಾಸನ ನಗರಕ್ಕೆ ಎಂಟ್ರಿ ಕೊಟ್ಟು ಜನರಲ್ಲಿ ಭೀತಿ ಹುಟ್ಟಿಸಿದ್ದಲ್ಲದೇ ಆನೆಯ ಉಪಟಳದಿಂದ ಜಮೀನಿನಲ್ಲಿ ಕೆಲಸ ಮಾಡಲು ಕೂಡ ರೈತರು ಹೆದರುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರೈತರ ಮತ್ತು ಸ್ಥಳೀಯರ ಒತ್ತಡದ ಜೊತೆಗೆ ಅನಾಹುತಗಳನ್ನು ತಡೆಯಲು ಆನೆಯನ್ನು ಸೆರೆ ಹಿಡಿಯಲೇಬೇಕೆಂಬ ಪರಿಸ್ಥಿತಿಗೆ ತಲುಪಿದ್ದ ಅರಣ್ಯ ಇಲಾಖೆ ಆನೆ ಹಿಡಿಯಲು ಸರ್ಕಾರಕ್ಕೆ ಅನುಮತಿ ಕೋರಿತ್ತು. ಮೊನ್ನೆ ಅನುಮತಿ ದೊರೆತಿದ್ದರಿಂದ ನೆನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂಧಿಗಳು ಯೋಜನೆ ರೂಪಿಸಿ ದುಬಾರೆ ಮತ್ತು ಮತ್ತಿಗೋಡು ಆನೆ ಸಾಕಣೆ ಕೇಂದ್ರದಿಂದ ಐದು ಕುಮ್ಕಿ ಆನೆಗಳಾದ ಅಭಿಮನ್ಯು, ಕೃಷ್ಣ, ಅಜೇಯ, ವಿಕ್ರಂ, ಹರ್ಷ ರನ್ನು ಬಳಸಿಕೊಂಡು ಬೆಳಿಗ್ಗೆ ಇಂದಲೇ ಕಾರ್ಯಾಚರಣೆ ಮಧ್ಯಾಹ್ನ ೧ ಗಂಟೆ ಸುಮಾರಿಗೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಸಿಬ್ಬಂಧಿ ಯಶಸ್ವಿಯಾಗಿ ದುಬಾರೆ ಆನೆ ಸಾಕಣಾ ಕೇಂದ್ರಕ್ಕೆ ರವಾನಿಸಿದರು

ಇನ್ನು ಅನೇಕ ದಿನಗಳಿಂದ ಉಪಟಳ ನೀಡಿದ್ದ ಕಾಡಾನೆ ಸೆರೆ ಹಿಡಿದ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನ ಸಲಗವನ್ನು ನೋಡಲು ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಕೂಡ ಹರಸಾಹಸ ಪಡಬೇಕಾಯಿತು. ಒಟ್ಟಾರೆ ಆನೆ ಸೆರೆ ಹಿಡಿದಿರುವುದರಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಪರಿಸ್ಥಿತಿ ತಪ್ಪಿತು ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.

  • ವೆಂಕಟೇಶ್ ಬ್ಯಾಕರವಳ್ಳಿ, ದಿ ನ್ಯೂಸ್24 ಕನ್ನಡ
Share Post

Leave a Reply

Your email address will not be published. Required fields are marked *

error: Content is protected !!