ಅನರ್ಹ ಶಾಸಕರ ಕ್ಷೇತ್ರಗಳಿಗೆ ಶೀಘ್ರವೇ ಚುನಾವಣೆ ಬರಲಿದೆ : ಸತೀಶ್ ಜಾರಕಿಹೊಳಿ

ಅಥಣಿ : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಅನರ್ಹ ಹಿನ್ನೆಲೆಯಲ್ಲಿ ಅನರ್ಹಗೊಂಡ ಶಾಸಕರ ಸ್ಥಾನಗಳಿಗೆ ಶೀಘ್ರವೇ ಚುನಾವಣೆ ಬರಲಿದೆ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಗೂ ಮುನ್ನಾ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ರಾಜ್ಯದಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಆರು ತಿಂಗಳಲ್ಲಿ ಬರಬಹುದು. ಅಥವಾ ವರ್ಷದೊಳಗೆ ಬರಬಹುದು. ಹಾಗಾಗಿ ಪಕ್ಷ ಸಂಘಟಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು.

ಅತೃಪ್ತರಲ್ಲಿ ಒಟ್ಟು ನಾಲ್ಕು ಗುಂಪುಗಳಿವೆ. ರಮೇಶ ಜಾರಕಿಹೊಳಿ ಗುಂಪು, ಬೆಂಗಳೂರು ಶಾಸಕರ ಗುಂಪು, ಜೆಡಿಎಸ್ ಶಾಸಕರ ಗುಂಪು, ಶಾಸಕ ನಾಗೇಂದ್ರ ಸೇರಿದಂತೆ ಒಟ್ಟು ನಾಲ್ಕು ಗುಂಪುಗಳಿವೆ ಎಂದರು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ಥಿರಕ್ಕೆ ರಮೇಶ ಜಾರಕಿಹೊಳಿ ಕಾರಣ ಎಂದ ಅವರು ಮೊದಲಿಗೆ ಬಂಡಾಯ ಎದ್ದಿದ್ದೇ ರಮೇಶ ಜಾರಕಿಹೊಳಿ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಮೂವರು ಕಾಂಗ್ರೆಸ್ ಶಾಸಕರು ಅನರ್ಹರಾಗಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಪಕ್ಷ ಕಟ್ಟುವ ಜವಾಬ್ದಾರಿ ಇದೆ. ಹಾಗಾಗಿ ತುರ್ತಾಗಿ ಎಲ್ಲಾ ಕಡೆ ಸಭೆ ಮಾಡಲಾಗುತ್ತಿದೆ. ಹಾಗೆಯೇ ಅಥಣಿಯಲ್ಲೂ ಚುನಾವಣಾ ತಯಾರಿಕೆ ಸಭೆ ಮಾಡಲಾಗುತ್ತಿದೆ ಎಂದರು.

ಅಥಣಿಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ಭಾರೀ ಪೈಪೋಟಿ ಇದೆ. ಹಾಗೇ ಕಾಗವಾಡ ಕ್ಷೇತ್ರದಲ್ಲೂ ಕೂಡ ಪೈಪೋಟಿ ಇದೆ. ಹೈಕಮಾಂಡ್ ಯಾರಿಗೆ ಟಿಕೆಟ್ ಕೊಡುತ್ತೋ ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

  • ವಿಲಾಸ ಕಾಂಬಳೆ ದಿ ನ್ಯೂಸ್24
Share Post

Leave a Reply

error: Content is protected !!