ನಡೆಯದ ವಿಶ್ವಾಸ ಮತಯಾಚನೆ : ವಿಧಾನಸೌಧದಲ್ಲೇ ವಾಸ್ತವ್ಯ ಹೂಡಿದ ಬಿಜೆಪಿ ನಾಯಕರು

ಬೆಂಗಳೂರು : ಭಾರೀ ಗದ್ದಲ ಗೊಂದಲಗಳ ನಡುವೆ ನಡೆದ ಇಂದಿನ ಅಧಿವೇಶನದಲ್ಲಿ ವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯದೆ ಅಧಿವೇಶನ ಮುಂದೂಡಲಾಯಿತು.

ರಾತ್ರಿ ಹನ್ನೆರಡು ಗಂಟೆಯಾದರೂ ಸರಿ ವಿಶ್ವಾಸ ಮತಯಾಚನೆ ಮಾಡಿಸಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಪೀಕರ್‌ಗೆ ಮನವಿ ಮಾಡಿದ್ದರು. ಕಾನೂನು ತೊಡಕುಗಳು, ವಿಪ್ ವಿಚಾರ ಮುಂದಿಟ್ಟ ದೋಸ್ತಿ ಸರ್ಕಾರ ಮೊದಲು ಇವುಗಳನ್ನು ಇತ್ಯರ್ಥ ಪಡಿಸುವಂತೆ ಕೋರಿಕೊಂಡ ಹಿನ್ನಲೆ ವಿಶ್ವಾಸ ಮತಯಾಚನೆ ಪ್ರಕ್ರಿಯೆ ಕೈಗೊಳ್ಳಲಿಲ್ಲ.

ನಾನು ಕಾನೂನು ಚೌಕಟ್ಟಿನಲ್ಲೇ ಕೆಲಸ ಮಾಡುತ್ತೇನೆ.‌ ಯಾರೇ ಒತ್ತಡ ಹೇರಿದರೂ ಜಗ್ಗುವುದಿಲ್ಲ. ಕಾನೂನು ಬಿಟ್ಟು ಯಾವುದೇ ಕಾರಣಕ್ಕೂ ಯಾವುದೇ ಕಾರ್ಯ ಕೈಗೊಳ್ಳುವುದಿಲ್ಲ ಎಂದು ಸ್ಪೀಕರ್ ರಮೇಶ್‌ಕುಮಾರ್ ಖಡಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದರು.

ದಿನದ ಕೊನೆಗೂ ವಿಶ್ವಾಸ ಮತಯಾಚನೆ ಕೇಳದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಬಿಜೆಪಿ ನಾಯಕರು ಎಷ್ಟೇ ಹೊತ್ತಾದರೂ ವಿಧಾನಸೌಧದಲ್ಲೇ ವಾಸ್ತವ್ಯ ಹೂಡುವ ಎಚ್ವರಿಕೆ ನೀಡಿದರು. ಅದರಂತೆ ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ವಿಧಾನಸಭಾ ಮೊಗಸಾಲೆಯಲ್ಲಿ ಬಂದು ಕುಳಿತುಕೊಂಡರು. ಬಿಎಸ್‌ವೈ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಸಿದ ಬಿಜೆಪಿ ನಾಯಕರು ಅಲ್ಲೇ ರಾತ್ರಿ ಭೋಜನ ಸ್ವೀಕರಿಸಿದ್ದಾರೆ.

Share Post

Leave a Reply

Your email address will not be published. Required fields are marked *

error: Content is protected !!