ಸರ್ಕಾರ ರಚನೆ ಮುನ್ನವೇ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ : ಮೂರು ಬಣಗಳಾದ ಬಿಜೆಪಿ

ಬೆಂಗಳೂರು : ದೋಸ್ತಿ ಸರ್ಕಾರ ಅಸ್ಥಿರಗೊಂಡಿರುವ ಹಿನ್ನಲೆ ಬಿಜೆಪಿ ನಾಯಕರು ತಮ್ಮ ಪಕ್ಷ ಅಧಿಕಾರಕ್ಕೆ ತರಲು ಕಾದು ಕುಳಿತಿದ್ದು ಅದಕ್ಕೆ ಮುನ್ನವೇ ಪಕ್ಷದಲ್ಲಿ ಕಿತ್ತಾಟಗಳು ಆರಂಭವಾಗಿವೆ.

ಹೌದು ಡಿಸಿಎಂ‌ ಸ್ಥಾನದ ವಿಚಾರದಲ್ಲಿ ಬಿಜೆಪಿ ನಾಯಕರಲ್ಲಿ ಕಿತ್ತಾಟ ಶುರುವಾಗಿದ್ದು ಯಾವ ಸ್ವರೂಪ ಪಡೆಯುತ್ತದೆ ಎಂಬುದು ಕಿತೂಹಲ ಕೆರಳಿಸಿದೆ.

ಅರವಿಂದ್ ಲಿಂಬಾವಳಿ ಹಾಗು ಶ್ರೀರಾಮುಲು ನಡುವೆ ಕಿತ್ತಾಟ ಡಿಸಿಎಂ ಪಟ್ಟಕ್ಕಾಗಿ ಬಿಜೆಪಿ ಶಾಸಕರು ವಾಸ್ತವ್ಯ ಹೂಡಿರುವ ರೆಸಾರ್ಟ್ ನಲ್ಲಿ ಮಾತಿನ ಚಕಮಕಿ ನಡೆದಿದ್ದು ಡಿಸಿಎಂ ವಿಚಾರದಲ್ಲಿ ಬಿಜೆಪಿ ನಾಯಕರು ಮೂರು ಬಣಗಳಾಗಿದ್ದಾರೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಬಣ, ಈಶ್ವರಪ್ಪ ಬಣ ಹಾಗೂ ಶ್ರೀರಾಮುಲು ಬಣಗಳಾಗಿ ಬಿಜೆಪಿ ಶಾಸಕರುಗಳು ತಮ್ಮ ತಮ್ಮ ನಾಯಕರ ಪರ ನಿಂತಿದ್ದಾರೆ. ಅರವಿಂದ್ ಲಿಂಬಾವಳಿ ಪರ ಬಿಎಸ್ವೈ ಬ್ಯಾಟಿಂಗ್ ಆಡುತ್ತಿದ್ದು ಇದರಿಂದ ಶ್ರೀರಾಮುಲು ಆಕ್ರೋಶಗೊಂಡಿದ್ದಾರೆ. ನನ್ನನ್ನು ಡಿಸಿಎಂ ಮಾಡುತ್ತೇನೆ ಎಂದು ಈ ಹಿಂದೆಯೇ ಯಡಿಯೂರಪ್ಪ ಭರವಸೆ ನೀಡದ್ದರು. ಆದರೀಗ ಬೇರೆಯವರ ಹೆಸರು ಹೇಳುತ್ತಿರೋದು ಸರಿ ಇಲ್ಲ ಎಂದು ಅಸಮಧಾನ ಹೊರ ಹಾಕಿದ್ದಾರೆ.

ನನ್ನನ್ನ ಡಿಸಿಎಂ ಮಾಡದೇ ಇದ್ರೆ ಮುಂದೆ ಆಗುವ ಅನಾಹುತಗಳಿಗೆ ನಾನು ಕಾರಣವಲ್ಲ ಎಂದ ಶ್ರೀರಾಮುಲು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ. ‌ಮತ್ತೊಂದು ಕಡೆ ಈಶ್ವರಪ್ಪಗೆ ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದ ಆಫರ್‌ಗಾಗಿ ಲಾಬಿ ಶುರು ಮಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಬಿಜೆಪಿ ಸರ್ಕಾರ ರಚನೆ ಮುನ್ನವೇ ತಿಕ್ಕಾಟಗಳು ನಡೆಯುತ್ತಿದ್ದು ಇದನ್ನು ನಾಯಕರು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

Share Post

Leave a Reply

Your email address will not be published. Required fields are marked *

error: Content is protected !!